ನವದೆಹಲಿ: ಬಾಲಿವುಡ್ ಕ್ವೀನ್, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಇಂದು 45ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳೇ ಕಳೆದರೂ ಇನ್ನೂ ಯಂಗ್ ಅಂಡ್ ಬ್ಯೂಟಿಫುಲ್ ಆಗಿ ಕಾಣುವ ಐಶ್ವರ್ಯಾ ತಮ್ಮ ಹುಟ್ಟುಹಬ್ಬವನ್ನು ಕುಟುಂಬದವರೊಂದಿಗೆ ಮತ್ತು ಕೆಲವರು ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾರೆ.
ಈ ಸಂತಸದ ಕ್ಷಣಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಐಶ್ವರ್ಯಾ ಶ್ವೇತವರ್ಣದ ಉಡುಪು ಧರಿಸಿ ಇಂದಿಗೂ ವಿಶ್ವ ಸುಂದರಿಯಂತೆಯೇ ತಮ್ಮ ತಾಯಿ ಬೃಂದಾ ರೈ, ಪತಿ ಅಭಿಷೇಕ್ ಬಚನ್, ಪುತ್ರಿ ಆರಾಧ್ಯ ಹಾಗೂ ಕೆಲ ಸ್ನೇಹಿತರೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ.
ಪತಿ ಅಭಿಷೇಕ್ ಬಚ್ಚನ್ ಕೂಡ ಇನ್ಸ್ಟಾಗ್ರಾಂನಲ್ಲಿ ಐಶ್ವರ್ಯಾಗೆ ಶುಭಾಷಯ ಕೋರಿದ್ದು, “ಹ್ಯಾಪಿ ಬರ್ತ್ಡೇ ವೈಫ್… ಐ ಲವ್ ಯೂ. ನನ್ನ ಖುಷಿಯಾದ ಜಾಗ” ಎಂದು ಬರೆದು ಫೋಟೋವೊಂದನ್ನು ಶೇರ್ ಮಾಡಿದ್ದಾರೆ.