close

News WrapGet Handpicked Stories from our editors directly to your mailbox

ಕೆನಡಾ ಪೌರತ್ವದ ಬಗ್ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದೇನು?

ಜನರು ನನ್ನ ಪೌರತ್ವದ ಬಗ್ಗೆ ಯಾಕೆ ಆಸಕ್ತಿ ಹೊಂದಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ನನ್ನ ಬಗ್ಗೆ ಕೆಟ್ಟದಾಗಿ ಏಕೆ ಮಾತಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

Updated: May 4, 2019 , 08:41 AM IST
ಕೆನಡಾ ಪೌರತ್ವದ ಬಗ್ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದೇನು?

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿರುದ್ಧ ಕೆನಡಾ ಪೌರತ್ವ ವಿವಾದದ ಬೆನ್ನಲ್ಲೇ ಅಕ್ಷಯ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು,  ದೇಶಪ್ರೇಮವನ್ನು ಸಾಬೀತು ಪಡಿಸುವ ಅಗತ್ಯ ಇಲ್ಲ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, "ಜನರು ನನ್ನ ಪೌರತ್ವದ ಬಗ್ಗೆ ಯಾಕೆ ಆಸಕ್ತಿ ಹೊಂದಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ನನ್ನ ಬಗ್ಗೆ ಕೆಟ್ಟದಾಗಿ ಏಕೆ ಮಾತಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ" ಎಂದು ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.

ಮುಂದುವರೆದು, "ನನ್ನ ಪೌರತ್ವವನ್ನು ತಪ್ಪಾಗಿ ನಿರೂಪಿಸಲಾಗಿದೆ. ಇನ್ನು ನನ್ನ ಬಳಿ ಕೆನಡಾ ಪೌರತ್ವವಿದೆ ಎಂಬುದನ್ನು ನಾನು ಎಂದೂ ಅಲ್ಲಗಳೆದಿಲ್ಲ. ಕಳೆದ 7 ವರ್ಷಗಳಿಂದ ನಾನು ಕೆನಡಾಕ್ಕೆ ಹೋಗಿಲ್ಲ. ಭಾರತದಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದೇನೆ. ಅಷ್ಟೇ ಅಲ್ಲದೆ ತೆರಿಗೆ ಸಹ ಪಾವತಿಸುತ್ತಿದ್ದೇನೆ. ದೇಶವನ್ನು ಮತ್ತಷ್ಟು ಬಲಪಡಿಸುವ ವಿಶ್ವಾಸ ನನ್ನಲ್ಲಿದೆ" ಎಂದಿದ್ದಾರೆ

"ನನಗಿರುವ ದೇಶಪ್ರೇಮದ ಬಗ್ಗೆ ಇಷ್ಟು ವರ್ಷಗಳವರೆಗೆ ಸಾಬಿತು ಮಾಡುವ ಅಗತ್ಯ ನನಗೆ ಬಂದಿರಲಿಲ್ಲ. ನನ್ನ ಪೌರತ್ವದ ಬಗ್ಗೆ ವಿವಾದ ಸೃಷ್ಟಿಸಲಾಗುತ್ತಿದೆ. ಇದು ನನಗೆ ಬೇಸರ ತರಿಸಿದೆ. ಪೌರತ್ವ ನನ್ನ ಖಾಸಗಿ ಮತ್ತು ಕಾನುನಾತ್ಮಕ ವಿಚಾರ.  ಇದು ರಾಜಕೀಯ ಮಾಡಬೇಕಾದ ವಿಷಯವಲ್ಲ" ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.