Video:ಅಕ್ಷಯ್ ಕುಮಾರ್ 2.0 ಲುಕ್ ನಲ್ಲಿ ಪರಿವರ್ತನೆಯಾಗಿದ್ದು ಹೇಗೆ ಗೊತ್ತೇ?

 ಅಕ್ಷಯ್ ಕುಮಾರ್ ಕಳೆದ ಕೆಲವು ದಶಕಗಳಿಂದಲೂ ತನ್ನ ಸಿನಿಮಾ ವೃತ್ತಿಜೀವನದಲ್ಲಿ ಎಂದಿಗೂ ಗ್ರೀನ್ ರೂಂ ನಲ್ಲಿ ಹೆಚ್ಚು ಸಮಯವನ್ನು ಕಳೆದಿರಲಿಲ್ಲ. ಆದರೆ ಈಗ 2.0 ಚಿತ್ರದಲ್ಲಿನ ತಮ್ಮ ಪಾತ್ರದ ರೂಪಾಂತರಕ್ಕೆ ಸಾಕಷ್ಟು ಸಮಯ ಕಳೆಯಬೇಕಾಗಿ ಬಂತು.

Last Updated : Nov 17, 2018, 11:18 AM IST
Video:ಅಕ್ಷಯ್ ಕುಮಾರ್ 2.0 ಲುಕ್ ನಲ್ಲಿ ಪರಿವರ್ತನೆಯಾಗಿದ್ದು ಹೇಗೆ ಗೊತ್ತೇ? title=

ಮುಂಬೈ: ಅಕ್ಷಯ್ ಕುಮಾರ್ ಕಳೆದ ಕೆಲವು ದಶಕಗಳಿಂದಲೂ ತನ್ನ ಸಿನಿಮಾ ವೃತ್ತಿಜೀವನದಲ್ಲಿ ಎಂದಿಗೂ ಗ್ರೀನ್ ರೂಂ ನಲ್ಲಿ ಹೆಚ್ಚು ಸಮಯವನ್ನು ಕಳೆದಿರಲಿಲ್ಲ. ಆದರೆ ಈಗ 2.0 ಚಿತ್ರದಲ್ಲಿನ ತಮ್ಮ ಪಾತ್ರದ ರೂಪಾಂತರಕ್ಕೆ ಸಾಕಷ್ಟು ಸಮಯ ಕಳೆಯಬೇಕಾಗಿ ಬಂತು.

ಅಕ್ಷಯ ಪಾತ್ರಕ್ಕೆ ಜೀವ ತುಂಬಲು ಅವರಿಗೆ ಪ್ರಾಸ್ತೆಟಿಕ್ಸ್ ಮೂಲಕ ಸ್ಥಿರ ಮುಖವಾಡವನ್ನು ತಯಾರಿಸಲಾಯಿತು.2.0 ಚಿತ್ರದಲ್ಲಿನ ಅಕ್ಷಯ ಪಾತ್ರ ಇದುವರೆಗೆ ಯಾವುದೆಂದು ತಿಳಿದುಬಂದಿಲ್ಲ ಆದರೆ ಅವರು ಪ್ರಮುಖ ಖಳನಾಯಕನ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ರೂಪಾಂತರದ ವಿಡಿಯೋವೊಂದನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು ಇದರಲ್ಲಿ ಹಲವು ರೀತಿಯ ಮೇಕಪ್ ಹಂತಕ್ಕೆ ಒಳಗಾಗಿದ್ದಾರೆ.ಈಗ ಈ ಕುರಿತಾಗಿ ಬರೆದುಕೊಂಡಿರುವ ಅಕ್ಷಯ್ ಕುಮಾರ್ " 2 ಪಾಯಿಂಟ್ 0 ಚಿತ್ರದಲ್ಲಿನ ಲುಕ್ ತಾಂತ್ರಿಕ ಅದ್ಬುತಕ್ಕಿಂತ ಕಡಿಮೆಯೇನಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
 
ಇದೇ ಮೊದಲ ಭಾರಿಗೆ ಶಂಕರ ನಿರ್ದೇಶನದ ಚಿತ್ರವೊಂದರಲ್ಲಿ ರಜನಿಕಾಂತ್ ರೊಂದಿಗೆ ಬೆಳ್ಳಿಪರದೆ ಹಂಚಿಕೊಳ್ಳುತ್ತಿದ್ದಾರೆ.ಈ ಚಿತ್ರದ ವಿಎಫ್ಎಕ್ಷ ಗೆ 543 ಕೋಟಿ ರೂ ವೆಚ್ಚಮಾಡಲಾಗಿದೆ.

Trending News