Allu Arju: ಅಲ್ಲು ಅರ್ಜುನ್‌ಗೆ ಸಿನಿಮಾ, ಬ್ಯುಸಿನೆಸ್‌ನಿಂದ ಕೋಟಿಗಟ್ಟಲೆ ಆದಾಯ! ಸೌತ್‌ ಸ್ಟಾರ್‌ ಐಷಾರಾಮಿ ಜೀವನ ಹೇಗಿದೆ ಗೊತ್ತಾ?

Allu Arju Birthday : ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಗೆ 41 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಐಷಾರಾಮಿ ಜೀವನದ ಬಗ್ಗೆ ಕೆಲ ಇಂಟರೆಸ್ಟಿಂಗ್‌ ವಿಚಾರಗಳನ್ನು ತಿಳಿದುಕೊಳ್ಳೋಣ.   

Written by - Chetana Devarmani | Last Updated : Apr 8, 2023, 01:54 PM IST
  • ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್
  • ಅರ್ಜುನ್ ಗೆ ಹುಟ್ಟು ಹಬ್ಬದ ಸಂಭ್ರಮ
  • ಸೌತ್‌ ಸ್ಟಾರ್‌ ಐಷಾರಾಮಿ ಜೀವನ ಹೇಗಿದೆ ಗೊತ್ತಾ?
Allu Arju: ಅಲ್ಲು ಅರ್ಜುನ್‌ಗೆ ಸಿನಿಮಾ, ಬ್ಯುಸಿನೆಸ್‌ನಿಂದ ಕೋಟಿಗಟ್ಟಲೆ ಆದಾಯ! ಸೌತ್‌ ಸ್ಟಾರ್‌ ಐಷಾರಾಮಿ ಜೀವನ ಹೇಗಿದೆ ಗೊತ್ತಾ? title=
Allu Arjun

Allu Arju Birthday : ದಕ್ಷಿಣದ ಸೂಪರ್ ಸ್ಟಾರ್ ಅಲ್ಲು ಅರ್ಜುನ್. ಸದ್ಯ 'ಪುಷ್ಪ: ದಿ ರೂಲ್' ಬಗ್ಗೆ ಅಲ್ಲು ಅರ್ಜುನ್‌ ಚರ್ಚೆಯಲ್ಲಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ 'ಪುಷ್ಪ: ದಿ ರೂಲ್' ಫಸ್ಟ್ ಲುಕ್ ಪೋಸ್ಟರ್ ಮತ್ತು ಚಿತ್ರದ ಟೀಸರ್ ವಿಡಿಯೋ ಕೂಡ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಸಾಕಷ್ಟು ಸಂಭಾವನೆ ಪಡೆಯುವ ಅಲ್ಲು ಅರ್ಜುನ್‌ ಬೇರೆ ಬ್ಯುಸಿನೆಸ್‌ಗಳಿಂದಲೂ ಆದಾಯ ಗಳಿಸುತ್ತಾರೆ. ಸಿನಿಮಾ ಮಾತ್ರವಲ್ಲ ಸೈಡ್ ಬ್ಯುಸಿನೆಸ್‌ನಿಂದಲೂ ಕೋಟಿ ಕೋಟಿ ಗಳಿಸುತ್ತಾರೆ.  

ಅಲ್ಲು ಅರ್ಜುನ್ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಹಿಂದಿಯ ಸಿನಿಪ್ರಿಯರ ಹೃದಯ ಗೆದ್ದಿದ್ದಾರೆ. ಅವರು ನಿಜ ಜೀವನದಲ್ಲಿ ತುಂಬಾ ಐಷಾರಾಮಿ ಜೀವನಶೈಲಿಯನ್ನು ನಡೆಸುತ್ತಾರೆ. ಅಲ್ಲು ಅರ್ಜುನ್‌ ದಕ್ಷಿಣ ಭಾರತದ ಶ್ರೀಮಂತ ನಟರಲ್ಲಿ ಒಬ್ಬರು. ಮಾಧ್ಯಮ ವರದಿಗಳ ಪ್ರಕಾರ, ಅವರು 350 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. 100 ಕೋಟಿ ಮೌಲ್ಯದ ಮನೆ, 7 ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್ ಜೊತೆಗೆ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ವಾಹನಗಳನ್ನೂ ಹೊಂದಿದ್ದಾರೆ. ಅಷ್ಟೇ ಅಲ್ಲ, ಖಾಸಗಿ ಜೆಟ್ ಕೂಡ ಅವರ ಬಳಿ ಇದೆ.

ಇದನ್ನೂ ಓದಿ : ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ Top 1 ಶಾರುಖ್‌! ಮೆಸ್ಸಿ, ಜುಕರ್‌​ಬರ್ಗ್‌ರನ್ನೇ ಹಿಂದಿಕ್ಕಿದ ಕಿಂಗ್‌ ಖಾನ್‌

ಅಲ್ಲು ಅರ್ಜುನ್ ಸಿನಿಮಾಗಳ ಜೊತೆಗೆ ಸೈಡ್ ಬ್ಯುಸಿನೆಸ್ ಮೂಲಕ ಭಾರೀ ಆದಾಯವನ್ನು ಗಳಿಸುತ್ತಾರೆ. ವರದಿಗಳನ್ನು ನಂಬುವುದಾದರೆ, ಅವರು ಅಂತಾರಾಷ್ಟ್ರೀಯ ಬ್ರೂಯಿಂಗ್ ಕಂಪನಿ ಎಮ್‌. ಕಿಚನ್‌ನೊಂದಿಗೆ ಸಂಬಂಧ ಹೊಂದಿರುವ ಕ್ಲಬ್ ಅನ್ನು ಸಹ ಹೊಂದಿದ್ದಾರೆ. ಅಷ್ಟೇ ಅಲ್ಲ, ಅವರು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ನೈಟ್ ಕ್ಲಬ್ 800 ಜುಬಿಲಿ ಮತ್ತು ರೆಸ್ಟೋರೆಂಟ್ ಅನ್ನು ಸಹ ಹೊಂದಿದ್ದಾರೆ.

ಅಲ್ಲು ಅರ್ಜುನ್ ಐಷಾರಾಮಿ ಜೀವನ ಮತ್ತು ಐಷಾರಾಮಿ ವಾಹನಗಳನ್ನು ಇಷ್ಟಪಡುತ್ತಾರೆ. ಅವರು ತಮ್ಮ ಐಷಾರಾಮಿ ಕಾರು ಸಂಗ್ರಹಕ್ಕೆ ಹೆಸರುವಾಸಿಯಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರು ರೇಂಜ್ ರೋವರ್ ವೋಗ್ ಮತ್ತು ಇನ್ನೊಂದು ಹಮ್ಮರ್ H2 ಅನ್ನು ಹೊಂದಿದ್ದಾರೆ. ಈ ವಾಹನಗಳ ಬೆಲೆ ಲಕ್ಷಗಟ್ಟಲೆ ಇದೆ. ಇದಲ್ಲದೆ, ಅವರು ಜಾಗ್ವಾರ್ XJL ಮತ್ತು Volvo XC90 T8 ಎಕ್ಸಲೆನ್ಸ್‌ನಂತಹ ಶಕ್ತಿಶಾಲಿ ಕಾರುಗಳನ್ನು ಸಹ ಹೊಂದಿದ್ದಾರೆ.

ಇದನ್ನೂ ಓದಿ : ಮೂರನೇ ಮದುವೆಯಾಗಲು ಹೊರಟ ನಟ ಸುಜಯ್‌ ಹೆಗ್ಡೆ

ಅಲ್ಲು ಅರ್ಜುನ್ ಐಷಾರಾಮಿ ವಾಹನಗಳ ಜೊತೆಗೆ ದುಬಾರಿ ವಾಚ್‌ಗಳನ್ನು ಇಷ್ಟಪಡುತ್ತಾರೆ. ಅವರು ದುಬಾರಿ ಕೈಗಡಿಯಾರಗಳನ್ನು ಸಹ ಹೊಂದಿದ್ದಾರೆ. ಅವರು ಹ್ಯೂಬ್ಲೋಟ್ ಬ್ಯಾಂಗ್ ಬ್ಯಾಂಗ್ ಸ್ಟೀಲ್ ಕಾರ್ಬನ್, ರೋಲೆಕ್ಸ್ ಡೇಟೋನಾ ಸ್ಟೇನ್‌ಲೆಸ್ ಸ್ಟೀಲ್ ಮತ್ತು ಕಾರ್ಟಿಯರ್ ಸ್ಯಾಂಟೋಸ್ 100 XL ನಂತಹ ಕೈಗಡಿಯಾರಗಳನ್ನು ಹೊಂದಿದ್ದಾರೆ, ಇದನ್ನು ಅವರು ಹೆಚ್ಚಾಗಿ ಧರಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News