ಇಂದು ಪ್ರಧಾನಿ ಮೋದಿ-ಯುಎಸ್ ಅಧ್ಯಕ್ಷ ಜೋ ಬೈಡೆನ್ ಮಹತ್ವದ ಸಭೆ

ವರ್ಚುವಲ್ ಸಭೆಯಲ್ಲಿ, ಬೈಡೆನ್ ಮತ್ತು ಮೋದಿ ಅವರು ಕೊರೊನಾ ವಿರುದ್ಧದ ಹೋರಾಟ, ಹವಾಮಾನ ಬಿಕ್ಕಟ್ಟು, ಜಾಗತಿಕ ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ಭದ್ರತೆ, ಪ್ರಜಾಪ್ರಭುತ್ವ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಸಮೃದ್ಧಿಯ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ. 

Written by - Zee Kannada News Desk | Last Updated : Apr 11, 2022, 09:00 AM IST
  • ಪ್ರಧಾನಿ ಮೋದಿ-ಯುಎಸ್ ಅಧ್ಯಕ್ಷ ಜೋ ಬೈಡೆನ್ ಮಹತ್ವದ ಸಭೆ
  • ವರ್ಚುವಲ್ ಮೂಲಕ ಮಾತುಕತೆ
  • ಬೈಡೆನ್ ಆಡಳಿತದ ಅಡಿಯಲ್ಲಿ ಮೊದಲ ಭಾರತ-ಯುಎಸ್ 2 + 2 ಸಂವಾದ
ಇಂದು ಪ್ರಧಾನಿ ಮೋದಿ-ಯುಎಸ್ ಅಧ್ಯಕ್ಷ ಜೋ ಬೈಡೆನ್ ಮಹತ್ವದ ಸಭೆ title=
USA-India

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಎಸ್ ಅಧ್ಯಕ್ಷ ಜೋ ಬೈಡೆನ್ ವರ್ಚುವಲ್ ಸಭೆ ನಡೆಸಲಿದ್ದಾರೆ. ಇದು ಬೈಡೆನ್ ಆಡಳಿತದ ಅಡಿಯಲ್ಲಿ ಮೊದಲ ಭಾರತ-ಯುಎಸ್ 2 + 2 ಸಂವಾದದೊಂದಿಗೆ ಹೊಂದಿಕೆಯಾಗುವ ಉಭಯ ನಾಯಕರ ನಡುವಿನ ಸಭೆ ಎಂದು ಶ್ವೇತಭವನ ಭಾನುವಾರ ತಿಳಿಸಿತ್ತು.

ಇದನ್ನು ಓದಿ: Rape Case: ಕಾಯಿಲೆ ಗುಣಪಡಿಸುತ್ತೇನೆ ಎಂದು ಮಹಿಳೆ ಮೇಲೆ ಅತ್ಯಾಚಾರಗೈದ ಮಾಂತ್ರಿಕ!

ವರ್ಚುವಲ್ ಸಭೆಯಲ್ಲಿ, ಬೈಡೆನ್ ಮತ್ತು ಮೋದಿ ಅವರು ಕೊರೊನಾ ವಿರುದ್ಧದ ಹೋರಾಟ, ಹವಾಮಾನ ಬಿಕ್ಕಟ್ಟು, ಜಾಗತಿಕ ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ಭದ್ರತೆ, ಪ್ರಜಾಪ್ರಭುತ್ವ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಸಮೃದ್ಧಿಯ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ. ಉಭಯ ನಾಯಕರು ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟಿನ ಅಭಿವೃದ್ಧಿ ಮತ್ತು ಉತ್ತಮ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸುವ ಕುರಿತು ನಡೆಯುತ್ತಿರುವ ಮಾತುಕತೆಗಳನ್ನು ಮುನ್ನಡೆಸಲಿದ್ದಾರೆ ಎಂದು ಶ್ವೇತಭವನದ ಅಧಿಕಾರಿ ತಿಳಿಸಿದ್ದಾರೆ. 

ಇದನ್ನು ಓದಿ: PM Modi Alert! ಕೊರೊನಾ ಕುರಿತು ಪ್ರಧಾನಿ ಮೋದಿಯಿಂದ ಎಚ್ಚರಿಕೆ, ಸತತ ರೂಪ ಬದಲಾಯಿಸುತ್ತಿದೆ ಬಹುರೂಪಿ

"ಉಕ್ರೇನ್ ವಿರುದ್ಧ ರಷ್ಯಾದ ಧೋರಣೆಯ ಪರಿಣಾಮಗಳ ಬಗ್ಗೆ, ಜಾಗತಿಕ ಆಹಾರ ಪೂರೈಕೆ ಮತ್ತು ಸರಕು ಮಾರುಕಟ್ಟೆಗಳ ಮೇಲೆ ಅಸ್ಥಿರಗೊಳಿಸುವ ಪರಿಣಾಮವನ್ನು ತಗ್ಗಿಸುವ ಬಗ್ಗೆ ಬೈಡೆನ್ ನಮ್ಮ ನಿಕಟ ಸಮಾಲೋಚನೆಗಳನ್ನು ಮುಂದುವರೆಸುತ್ತಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News