Amir Khan: ಬಾಲಿವುಡ್‌ನಲ್ಲಿ ನಟ ಅಮೀರ್ ಖಾನ್ ತಮ್ಮ ಡಿಫ್ರೆಂಟ್ ಹೇರ್‌ಸ್ಟೈಲ್‌ಗೆ ಫೇಮಸ್ ಆಗಿದ್ದಾರೆ.. ಇವರು ತಾವು ನಿರ್ವಹಿಸಬೇಕಾದ ಪಾತ್ರಕ್ಕೆ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಜೀವ ತುಂಬುತ್ತಾರೆ.. ತೂಕ ಇಳಿಸಿಕೊಳ್ಳುವುದರಿಂದ ಹಿಡಿದು ಲುಕ್ ಬದಲಾಯಿಸಯವವರೆಗೂ ತಮ್ಮಿಂದ ಸಾಧ್ಯವಾಗುವ ಎಲ್ಲವನ್ನೂ ಅಮೀರಾ ಖಾನ್ ಮಾಡುತ್ತಾರೆ.. ಹೀಗಾಗಿ ಅವರನ್ನು ಬಾಲಿವುಡ್‌ನಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯುತ್ತಾರೆ.. ಹಾಗಾದ್ರೆ ಈ ನಟನಿಗೆ ಆ ಟ್ಯಾಗ್ ಕೊಟ್ಟಿದ್ದು ಯಾರು?
ಇತ್ತೀಚೆಗಷ್ಟೇ ಅಮೀರ್ ಖಾನ್ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ' ನಲ್ಲಿ ಕಾಣಿಸಿಕೊಂಡರು. ಆ ವೇಳೆ ಅಮೀರ್ ಖಾನ್ ನಟಿ ಶಬಾನಾ ಅಜ್ಮಿ ಅವರು ನನಗೆ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಎಂಬ ಟ್ಯಾಗ್ ನೀಡಿದ್ದಾರೆ ಎಂದು ಅಮೀರ್ ಖಾನ್ ಹೇಳಿದ್ದಾರೆ..
ಕಪಿಲ್ ದೇವ್ ಶೋನಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಅಮೀರ್ ಖಾನ್ "ಆ ಸಮಯದಲ್ಲಿ ನಾನು ಚಿತ್ರರಂಗಕ್ಕೆ ತುಂಬಾ ಹೊಸಬನಾಗಿದ್ದೆ.. ಆಗ ದಿಲ್ ಚಿತ್ರದ ಶೂಟಿಂಗ್ ಆರಂಭವಾಗಿತ್ತು. ಆ ಚಿತ್ರವನ್ನು ಇಂದ್ರಕುಮಾರ್ ನಿರ್ದೇಶಿಸಿಸುತ್ತಿದ್ದರು.. ಹಾಗಾಗಿ, ಬಾಬಾ ಅಜ್ಮಿ ಕ್ಯಾಮರಾಮನ್ ಆಗಿದ್ದರು. ಅದೇ ಸಮಯಕ್ಕೆ ಶಬಾನಾ ಅಜ್ಮಿ ಚಹಾದೊಂದಿಗೆ ಬಂದು ನಾನು ಕುಡಿಯುವ ಚಹಾದಲ್ಲಿ ಎಷ್ಟು ಕಪ್ ಸಕ್ಕರೆ ಇರಬೇಕು ಎಂದು ಚಹಾದಲ್ಲಿ ಎಷ್ಟು ಚಮಚ ಸಕ್ಕರೆ ಬೇಕು ಎಂದು ಕೇಳಿದರು. ಆಗ ನಾನು ಬೇರೆ ಆಆಲೋಚನೆಯಲ್ಲಿದ್ದೆ.. ಹೀಗಾಗಿ ಗಮನಿಸಲಿಲ್ಲ. ಮತ್ತೆ ಅವರು ಜೋರು ಧ್ವನಿಯಲ್ಲಿ ಕೇಳಿದರು.. ಆಗ ನಾನು ಅವರತ್ತ ನೋಡಿದೆ ಉತ್ತರಿಸಲು ಸ್ವಲ್ಪ ಸಮಯ ತೆಗೆದುಕೊಂಡೆ. ನಂತರ ಚಮಚ ಎಷ್ಟು ದೊಡ್ಡದಾಗಿದೆ ಎಂದು ಕೇಳಿದರು.. ಆ ಚಮಚ ನೋಡಿದ ಮೇಲೆ ಒಂದು ಚಮಚ ಸಕ್ಕರೆ ಹಾಕಿ ಎಂದು ಹೇಳಿದೆ.. ಆ ವೇಳೆ ನನಗೆ ಈ ಹೆಸರು ಬಂದಿದ್ದು" ಎಂದು ನಟ ಅಮೀರ್ ಖಾನ್ ಹೇಳಿಕೊಂಡಿದ್ದಾರೆ..
ಇನ್ನು ಅಮೀರ್ ಖಾನ್ ಮೊದಲ ಬಾರಿಗೆ ಕಪಿಲ್ ಶರ್ಮಾ ಅವರ ಶೋನಲ್ಲಿ ಕಾಣಿಸಿಕೊಂಡರು. ಈ ಶೋನಲ್ಲಿ ಅಮೀರ್ ಖಾನ್ ಅವರ ಇಬ್ಬರು ಸಹೋದರಿಯರು ಸಹ ಪ್ರೇಕ್ಷಕರಲ್ಲಿದ್ದರು.
ಇದನ್ನೂ ಓದಿ-Actress Sudharani: ಚೆಂದನವನದ ನಟಿ ಸುಧಾರಾಣಿ ಮೊದಲ ಗಂಡನ ವಿಕೃತಿಯಿಂದ ಪಾರು ಮಾಡಿದ್ದು ಈ ಇಬ್ಬರು!!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.