ನವದೆಹಲಿ: ಹಿಂದಿ ಚಿತ್ರರಂಗ ದಂತಕಥೆ ಅಮಿತಾಬ್ ಬಚ್ಚನ್ ಈ ದಿನಗಳಲ್ಲಿ ಕರೋನಾವೈರಸ್ (Coronavirus) ಸೋಂಕಿಗೆ ಒಳಗಾಗಿದ್ದು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯವು ಈಗಾಗಲೇ ಸಾಕಷ್ಟು ಸುಧಾರಿಸಿದೆ. ಬೆಡ್ ರೆಸ್ಟ್ ಸಮಯದಲ್ಲಿ ಅಮಿತಾಬ್ ಬಚ್ಚನ್ (Amitabh Bachchan) ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಪ್ರತಿದಿನ ಏನನ್ನಾದರೂ ಹಂಚಿಕೊಳ್ಳುತ್ತ ಬಿಗ್ ಬಿ ಅವರ ಅಧಿಕೃತ ಖಾತೆಯಲ್ಲಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾರೆ. ಈ ದಿನಗಳಲ್ಲಿ ಆಸ್ಪತ್ರೆಯಲ್ಲಿ ಅಮಿತಾಬ್ ಅವರ ತಂದೆ ಮತ್ತು ಪ್ರಸಿದ್ಧ ಬರಹಗಾರ ಡಾ. ಹರಿವನ್ಶ್ ರೈ ಬಚ್ಚನ್ ಅವರನ್ನು ನೆನಪಿಸಿಕೊಂಡಿದ್ದಾರೆ. ಭಾನುವಾರ (ಜುಲೈ 26) ಅವರು ತಮ್ಮ ತಂದೆಯ ನೆನಪಿಗಾಗಿ ಒಂದು ಪೋಸ್ಟ್ ಮಾಡಿದ್ದಾರೆ.
'ಜಲ್ಸಾ' ಬಂಗಲೆಯ ಹೊರಗೆ ಬೈಕ್ ರೇಸಿಂಗ್‌ನಿಂದ ಅಸಮಾಧಾನಗೊಂಡ ಜಯಾ ಬಚ್ಚನ್ ಮಾಡಿದ್ದೇನು?
ಅಮಿತಾಬ್ ಅವರ ತಂದೆಯೊಂದಿಗೆ ಅವರ ತಂದೆಯ ಕವಿತೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. "ಬಾಬುಜಿಯ ಕವಿತೆಯ ಕೆಲವು ಕ್ಷಣಗಳು. ಅವರು ಕವಿತೆಗಳನ್ನುಈ ರೀತಿ ಹಾಡುತ್ತಿದ್ದರು. ಆಸ್ಪತ್ರೆಯ ಒಂಟಿತನದಲ್ಲಿ ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮತ್ತು ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ನಾನೂ ನನ್ನ ಒಂಟಿಯಾದ ರಾತ್ರಿಗಳನ್ನು ಪರಿವರ್ತಿಸುತ್ತೇನೆ'' ಎಂದು ಬರೆದಿದ್ದಾರೆ.
T 3606 - बाबूजी की कविता के कुछ पल । वो इसी तरह गाया करते थे कवि सम्मेलनों में । अस्पताल के अकेले पन में उनकी बहुत याद आती है, और उन्हीं के शब्दों से अपनी सूनी रातों को आबाद करता हूँ । pic.twitter.com/KmSJoliQmz
— Amitabh Bachchan (@SrBachchan) July 26, 2020
ಬಿಗ್ ಬಿ ತಂದೆಯ ಕವಿತೆಯನ್ನು ತಿಳಿಸಿದ್ದಾರೆ. ಮಾತ್ರವಲ್ಲದೆ ಅದನ್ನು ಹಾಡುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. 4 ನಿಮಿಷಗಳ ಈ ವೀಡಿಯೊದಲ್ಲಿ ಅಮಿತಾಬ್ ತಂದೆ ಹರಿವನ್ಶ್ ರೈ ಬಚ್ಚನ್ ಅವರ ಕವಿತೆಯನ್ನು ತಮ್ಮ ಧ್ವನಿಯಲ್ಲಿ ನಿರೂಪಿಸುತ್ತಿದ್ದಾರೆ. ಕವನವನ್ನು ತುಂಬಾ ಇಷ್ಟಪಡಲಾಗುತ್ತಿದೆ. ಅನೇಕ ಜನರು ಈ ಕವಿತೆಯನ್ನು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಜುಲೈ 19 ರಂದು ಅಮಿತಾಬ್ ತಮ್ಮ ತಂದೆಯ ಕವಿತೆಯನ್ನು ಹಂಚಿಕೊಂಡರು.