"ಅನಿರುದ್ಧ ಅವರು ನನಗೆ ಮಾನಹಾನಿ ಧನ ಹಾನಿ ಮಾಡಿದ್ದಾರೆ"- ನಿರ್ಮಾಪಕ ಆರೂರು ಜಗದೀಶ್

ನಟ ಅನಿರುದ್ಧ ಅವರು ನನಗೆ ಮಾನಹಾನಿ ಧನ ಹಾನಿ ಮಾಡಿದ್ದಾರೆ ಎಂದು ನಿರ್ಮಾಪಕ ಆರೂರು ಜಗದೀಶ್ ಆರೋಪಿಸಿದ್ದಾರೆ.

Written by - Zee Kannada News Desk | Last Updated : Aug 20, 2022, 08:40 PM IST
  • ಕೊರೊನಾ ಸಂದರ್ಭದಲ್ಲಿ ಎಲ್ಲರಿಗೂ ಸಂಭಾವನೆಯಲ್ಲಿ ಶೇ 15 ರಷ್ಟು ಕಡಿತ ಮಾಡಿದ್ದೆವು, ಆದರೆ ಇದಕ್ಕೆ ಅವರು ಕೆಟ್ಟದಾಗಿ ಅವಹೇಳನ ಮಾಡಿದರು.
  • ಸೆಟ್ ನಲ್ಲಿ ಸುಮಾರು 200 ಜನರ ಮುಂದೆ ಕೂಗಾಡಿ ಕಿರುಚಾಡಿದರು.
"ಅನಿರುದ್ಧ ಅವರು ನನಗೆ ಮಾನಹಾನಿ ಧನ ಹಾನಿ ಮಾಡಿದ್ದಾರೆ"- ನಿರ್ಮಾಪಕ ಆರೂರು ಜಗದೀಶ್  title=
screengrab

ಬೆಂಗಳೂರು: ನಟ ಅನಿರುದ್ಧ ಅವರು ನನಗೆ ಮಾನಹಾನಿ ಧನ ಹಾನಿ ಮಾಡಿದ್ದಾರೆ ಎಂದು ನಿರ್ಮಾಪಕ ಆರೂರು ಜಗದೀಶ್ ಆರೋಪಿಸಿದ್ದಾರೆ.ಅನಿರುದ್ಧ ಅವರನ್ನು ಬಹಿಷ್ಕರಿಸುವ ವಿಚಾರವಾಗಿ ನಿರ್ಮಾಪಕರ ಸಂಘದಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

"ಮಕ್ಕಳ ಮೇಲೆ ಆಣೆ ಮಾಡಿ ಅಂತ ಅನಿರುದ್ದ ‌ಹೇಳ್ತಾರೆ.ಮಕ್ಕಳ ಮೇಲೆ ಆಣೆ ಮಾಡಿ ಅಂತ ಹೇಳೋದು ತಪ್ಪು, ಕೆಲಸ ಮೇಲೆ ಆಣೆ ಮಾಡೋಣ. ಅವರದ್ದು ಸಣ್ಣತನ ಅವರು ಎದುರಿಗೆ ಇರೋ ಹಾಗೆ ನಿಜವಾಗಿ‌ ಇಲ್ಲ. ಹಾಗೆ ನೋಡಿದರೆ ನಮ್ಮ ಮತ್ತು ಅವರ ಮಧ್ಯೆ ಯಾವುದೇ ಮನಸ್ತಾಪ ಇಲ್ಲ, ಆದರೆ ಕೆಲಸದ ವಿಚಾರವಾಗಿ ಸಮಸ್ಯೆ ಆಗುತ್ತಿದೆ ಎಂದು ಆರೂರು ಜಗದೀಶ್ ಅನಿರುದ್ಧ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಇನ್ನೂ ಮುಂದುವರೆದು ಮಾತನಾಡಿದ ಅವರು' ಕೋಟಿ ದುಡ್ಡು ಹಾಕಿ ಧಾರವಾಹಿ ಮಾಡುತ್ತಿದ್ದೇವೆ.ಇಂತಹ ಸಂದರ್ಭದಲ್ಲಿ ನಿರ್ಮಾಪಕರ ಪರವಾಗಿ ಇರಬೇಕು ಎನ್ನುವ ಭಾವನೆ ಅವರಲ್ಲಿ ಇಲ್ಲ.ಮೇಲಾಗಿ ಕೊರೊನಾ ಸಂದರ್ಭದಲ್ಲಿ ಎಲ್ಲರಿಗೂ ಸಂಭಾವನೆಯಲ್ಲಿ ಶೇ 15 ರಷ್ಟು ಕಡಿತ ಮಾಡಿದ್ದೆವು, ಆದರೆ ಇದಕ್ಕೆ ಅವರು ಕೆಟ್ಟದಾಗಿ ಅವಹೇಳನ ಮಾಡಿದರು.ಸೆಟ್ ನಲ್ಲಿ ಸುಮಾರು 200 ಜನರ ಮುಂದೆ ಕೂಗಾಡಿ ಕಿರುಚಾಡಿದರು.ಈ ವಿಚಾರವಾಗಿ ಅವರ ಜೊತೆ ಧಾರಾವಾಹಿ ಮಾಡಿ ಸಾಕಾಗಿದೆ. ನನಗೆ ಆರೋಗ್ಯ ಹಾಳು ಮಾಡಿಕೊಳ್ಳಲು ಇಷ್ಟ ಇಲ್ಲ " ಎಂದು ದೂರಿದರು.

ಇದನ್ನೂ ಓದಿ : ಅಥಣಿಯಲ್ಲಿ ಭೀಕರ ಅಪಘಾತ ಪ್ರಕರಣ : ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಭೇಟಿ

'ಏನಾದ್ರು ಸಮಸ್ಯೆ‌ ಇದ್ರೆ ನಮ್ಮ ಜೊತೆ ಮಾತಾಡಬೇಕು.ಅದನ್ನ ಬಿಟ್ಟು ಎಲ್ಲರ ಮುಂದೆ ಕೂಗಾಡೋದು ಮಾಡ್ತಾರೆ.ಆಗ ನನ್ನ ಪ್ರೊಡಕ್ಷನ್ ಹೌಸ್ ನನ್ನ ಕಂಟ್ರೋಲ್ ನಲ್ಲಿ ಇಲ್ಲ ಅಂದ್ರೆ ನನ್ನ ಇರೋ ಮರ್ಯಾದೆ ಆದರೂ ಏನು? ಶೂಟಿಂಗ್ ಗೆ ಕೊಡೋದು‌ 9 ಗಂಟೆ, ಆದ್ರೆ ದಿನದಲ್ಲಿ‌ ಮೂರು ಗಂಟೆ ಪ್ರಿಪರ್ ಆಗೋಕೆ ಸಮಯ ತಗೋತಾರೆ. ಇಷ್ಟು ಟೈಂ ವೇಸ್ಟ್ ಮಾಡಿದ್ರೆ ಎಪಿಸೋಡ್ ಮಾಡೋದು ಹೇಗೆ? ಜೊತೆ ಜೊತೆಯಲಿ ಧಾರಾವಾಹಿಯ ಟಿ.ಆರ್ ಪಿ ಡ್ರಾಪ್ ಆಗಲು ಅನಿರುದ್ಧ ಅವರೇ ಪ್ರಮುಖ ಕಾರಣ' ಎಂದು ಅವರು ಹೇಳಿದರು.

ಈ‌ ಸೀರಿಯಲ್ ನಿಂತು ಹೋದ್ರೆ ಸಾಯಬೇಕಾಗುತ್ತೆ‌ ಅಂತ ಕಣ್ಣೀರು ಹಾಕಿದ್ವಿ, ನನಗೆ ಇವರ ಕಾಟದಿಂದ ತುಂಬಾ ಕಷ್ಟ ಆಗಿತ್ತು. ಧಾರವಾಹಿ ಮೊದಲು ರೋಡ್ ನಲ್ಲಿ ಕೂತು ತಿಂಡಿ‌ ತಿನ್ನುತ್ತಿದ್ರು. ಆದ್ರೆ ಇವತ್ತು ಅದು ಆಗುತ್ತಿಲ್ಲ‌ ಯಾಕೆ ಇಷ್ಟು ಬದಲಾವಣೆ ಹೇಳಿ..? ಅವರ ಕೂಗಾಟ ಚೀರಾಟದಿಂದ ಒಬ್ಬ ಹುಡುಗ ಕೆಲಸ ಬಿಟ್ಟು ಹೋದ.ಅವರ ಮಾತನ್ನು ಕೇಳಿ ನಾವು ಯಾರನ್ನು ಬಿಟ್ಟಿಲ್ಲ, ಯಾರನ್ನೂ ಸೇರಿಸಿಕೊಂಡಿಲ್ಲ ಎಂದು ಅವರು ಹೇಳಿದರು.

ಇದೆ ವೇಳೆ ಸುದ್ದಿಗೋಷ್ಠಿಯಲ್ಲಿ ಜೀ ಕನ್ನಡ ಫಿಕ್ಷನ್ ಹೆಡ್ ಸುಧೀಂದ್ರ, ಸಿಹಿಕಹಿ ಚಂದ್ರು, ನಿರ್ಮಾಪಕರ ಸಂಘದ ಅಧ್ಯಕ್ಷರಾದ ಭಾಸ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News