ತಾಯ್ತನದ ಸುಂದರ ಕ್ಷಣಗಳನ್ನು ಅನುಭವಿಸುತ್ತಿರುವ ಅನುಷ್ಕಾ ಶರ್ಮಾ...

ಕಳೆದ ತಿಂಗಳು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮೊದಲ ಬಾರಿಗೆ ತಾವು ಪೋಷಕರಾಗುತ್ತಿರುವ ವಿಷಯವನ್ನು ಘೋಷಿಸಿದರು.  

Last Updated : Sep 14, 2020, 08:50 AM IST
  • ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಮಗುವಿನ ಬಂಪ್‌ನ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
  • ತಾಯ್ತನದ ಸುಂದರ ಕ್ಷಣಗಳನ್ನು ಅನುಭವಿಸುತ್ತಿರುವ ಅನುಷ್ಕಾ ಶರ್ಮಾ ಈ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ತಾಯ್ತನದ ಸುಂದರ ಕ್ಷಣಗಳನ್ನು ಅನುಭವಿಸುತ್ತಿರುವ ಅನುಷ್ಕಾ ಶರ್ಮಾ... title=
Pic Courtesy: Instagram

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಅವರು ತಮ್ಮ ಮಗುವಿನ ಬಂಪ್‌ನ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಮತ್ತು ನಿಮ್ಮಲ್ಲಿ ಜೀವನದ ಸೃಷ್ಟಿಯನ್ನು ಅನುಭವಿಸುವುದಕ್ಕಿಂತ ಹೆಚ್ಚು ನೈಜ ಮತ್ತು ನಮ್ರತೆ ಏನೂ ಇಲ್ಲ ಎಂದು ಬರೆದಿದ್ದಾರೆ.

ತಾಯ್ತನದ ಸುಂದರ ಕ್ಷಣಗಳನ್ನು ಅನುಭವಿಸುತ್ತಿರುವ ಅನುಷ್ಕಾ ಶರ್ಮಾ ಈ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬಿಳಿ ಟಾಪ್ ಮತ್ತು ನೀಲಿ ಪ್ಯಾಂಟ್ ಧರಿಸಿ ಬೀಚ್ನಲ್ಲಿ ನಿಂತಿರುವುದು ಕಂಡು ಬರುತ್ತದೆ. ಈ ಸಂದರ್ಭದಲ್ಲಿ ಅನುಷ್ಕಾ ತಮ್ಮ ಹೊಟ್ಟೆಯ ಮೇಲೆ ಕೈಯಿಟ್ಟು ತಾಯ್ತನದ ಸುಂದರ ಕ್ಷಣಗಳನ್ನು ಅನುಭವಿಸುತ್ತಿರುವುದು ಕಂಡು ಬರುತ್ತದೆ.

PICS: ಅನುಷ್ಕಾ ಶರ್ಮಾರಿಂದ ಕರೀನಾ ಕಪೂರ್ ಖಾನ್'ವರೆಗೆ ಬೇಬಿ ಬಂಪ್ ತೋರಿಸಿದ ನಟಿಯರು

ನಿಮ್ಮಲ್ಲಿ ಜೀವನದ ಸೃಷ್ಟಿಯನ್ನು ಅನುಭವಿಸುವುದಕ್ಕಿಂತ ಏನೂ ನೈಜ ಅನುಭವ ಬೇರಿಲ್ಲ.  ನಿಮ್ಮ ನಿಯಂತ್ರಣದಲ್ಲಿಲ್ಲದಿದ್ದಾಗ ನಿಜವಾಗಿಯೂ ಏನಿದು? ಎಂದು ಅನುಷ್ಕಾ ಚಿತ್ರದೊಂದಿಗೆ ಬರೆದಿದ್ದಾರೆ.

ಅವರ ಪತಿ ಮತ್ತು ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅವರು "ನನ್ನ ಇಡೀ ಪ್ರಪಂಚವನ್ನು ಒಂದೇ ಚೌಕಟ್ಟಿನಲ್ಲಿ" ಎಂದು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

PICS: ದುಬೈನಲ್ಲಿ ವಿರಾಟ್-ಅನುಷ್ಕಾ ಚುಂಬನ

ಇಟಲಿಯಲ್ಲಿ 2017 ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಕಳೆದ ತಿಂಗಳು ಮೊದಲ ಬಾರಿಗೆ ತಾವು ಪೋಷಕರಾಗುತ್ತಿರುವ ವಿಷಯವನ್ನು ಘೋಷಿಸಿದರು. ಜನವರಿ 2021 ರಲ್ಲಿ ತಮ್ಮ ಚೊಚ್ಚಲ ಮಗುವನ್ನು ಸ್ವಾಗತಿಸುತ್ತಿರುವುದಾಗಿ ಅವರು ತಿಳಿಸಿದ್ದರು. 

 
 
 
 

 
 
 
 
 
 
 
 
 

And then, we were three! Arriving Jan 2021 ❤️🙏

A post shared by AnushkaSharma1588 (@anushkasharma) on

Trending News