ಕರಣ್ ಜೋಹರ್ ವಿರುದ್ಧ ಅನುಷ್ಕಾ ಶರ್ಮಾ ಲೈಂಗಿಕ ಕಿರುಕುಳ ಕೇಸ್‌ ಹಾಕಲು ಹೋದಾಗ! ಕೇಳಿ ಶಾಕ್ ಆಗುತ್ತೆ

Anushka Sharma : ಕರಣ್ ಜೋಹರ್ ವಿರುದ್ಧ ಲೈಂಗಿಕ ಕಿರುಕುಳ ಕೇಸ್‌ ಹಾಕಲು ಹೋದ ಬಗ್ಗೆ ಅನುಷ್ಕಾ ಶರ್ಮಾ ಹೇಳಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ವಿಡಿಯೋ ವೈರಲ್‌ ಆಗುತ್ತಿದೆ.   

Written by - Chetana Devarmani | Last Updated : Jun 28, 2023, 02:24 PM IST
  • ಬಾಲಿವುಡ್ ನಟಿ ಅನುಷ್ಕಾ ಶರ್ಮಾ
  • ಕರಣ್ ಜೋಹರ್ ವಿರುದ್ಧ ಲೈಂಗಿಕ ಕಿರುಕುಳ ಕೇಸ್!?‌
  • ಕೇಸ್‌ ಹಾಕಲು ಹೋದ ಬಗ್ಗೆ ಹೇಳಿದ ಅನುಷ್ಕಾ ಶರ್ಮಾ
ಕರಣ್ ಜೋಹರ್ ವಿರುದ್ಧ ಅನುಷ್ಕಾ ಶರ್ಮಾ ಲೈಂಗಿಕ ಕಿರುಕುಳ ಕೇಸ್‌ ಹಾಕಲು ಹೋದಾಗ! ಕೇಳಿ ಶಾಕ್ ಆಗುತ್ತೆ   title=

Anushka Sharma On Karan Johar : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಲವಲವಿಕೆಗೆ ಹೆಸರುವಾಸಿಯಾಗಿದ್ದಾರೆ. ಯಾವುದೇ ಫಿಲ್ಟರ್ ಇಲ್ಲದೆ ಮುಕ್ತವಾಗಿ ಮಾತನಾಡುತ್ತಾರೆ. ಜನರು ಅವರನ್ನು ಕೇಳಲು ಇಷ್ಟಪಡುತ್ತಾರೆ. ನಿಜ ಜೀವನದಲ್ಲಿ ಬ್ಯಾಂಡ್ ಬಾಜಾ ಬಾರಾತ್ ಚಿತ್ರದಲ್ಲಿನ ತನ್ನ ಪಾತ್ರದಂತೆಯೇ ಅವರಿ ರಿಯಲ್‌ ಲೈಫ್‌ನಲ್ಲಿಯೂ ಇದ್ದಾರೆ. ಸದಾ ನಗು ಮುಖದಿಂದ ಇರುವ ಅನುಷ್ಕಾ, ತಮ್ಮ ಸೌಂದರ್ಯದಿಂದಲೂ ಅನೇಕ ಜನರ ಹೃದಯ ಗೆದ್ದಿದ್ದಾರೆ. ಬಾಲಿವುಡ್‌ ನಿರ್ದೇಶಕ ಕರಣ್ ಜೋಹರ್ ಮೇಲೆ ನಟಿ ಅನುಷ್ಕಾ ಶರ್ಮಾ ಲೈಂಗಿಕ ಕಿರುಕುಳ ಕೇಸ್‌ ದಾಖಲಿಸಲು ಬಯಸಿದ್ದ ವಿಚಾರ ಎಲ್ಲರಿಗೂ ಶಾಕ್‌ ನೀಡಿದೆ.

ಇದನ್ನೂ ಓದಿ: #Kichcha46 : ಸುದೀಪ್‌ ಹೊಸ ಸಿನಿಮಾ ಟೀಸರ್‌ ರಿಲೀಸ್‌ ಡೇಟ್‌ ಗೊತ್ತಾಯ್ತಾ?

ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಕಾರ್ಯಕ್ರಮದ ವಿಡಿಯೋ ಒಂದು ವೈರಲ್‌ ಆಗಿದೆ. ಕಾರ್ಯಕ್ರಮದಲ್ಲಿ ಅನುಷ್ಕಾ ಮತ್ತು ಕತ್ರಿನಾ ಇಬ್ಬರೂ ಒಟ್ಟಿಗೆ ಬಂದಿದ್ದರು. ಈ ಸಮಯದಲ್ಲಿ, ಕರಣ್ ಅವರು ಏ ದಿಲ್ ಹೈ ಮುಷ್ಕಿಲ್ ಸೆಟ್‌ನಲ್ಲಿ ಅನುಷ್ಕಾಳನ್ನು ಇಷ್ಟಪಡಲು ಪ್ರಾರಂಭಿಸಿರುವ ವಿಚಾರವನ್ನು ಒಪ್ಪಿಕೊಂಡರು. ಇದನ್ನು ಕೇಳಿ ನಗಲು ಪ್ರಾರಂಭಿಸಿದ ನಟಿ ಅನುಷ್ಕಾ ಶರ್ಮಾ, ನಾನು ಕರಣ್ ಜೋಹರ್‌ ವಿರುದ್ಧ ಲೈಂಗಿಕ ಕಿರುಕುಳದ ಕೇಸ್ ಹಾಕಲು ಹೊರಟಿದ್ದೆ ಎಂದು ತಮಾಷೆಯಾಗಿ ಹೇಳುತ್ತಾರೆ. ಕೆಲವೊಮ್ಮೆ ನನ್ನನ್ನು ಅನುಚಿತವಾಗಿ ಮುಟ್ಟುತ್ತಿದ್ದರು. ಇದನ್ನು ಕೇಳಿ ಕರಣ್ ಮತ್ತು ಕತ್ರಿನಾ ಬೆಚ್ಚಿಬಿದ್ದಿದ್ದಾರೆ. ಕತ್ರಿನಾ ವಾತಾವರಣವನ್ನು ತಂಪಾಗಿಸಲು ಪ್ರಯತ್ನಿಸುತ್ತಾರೆ.  

ಅನುಷ್ಕಾ ಅವರ ಈ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿತ್ತು. ಏಕೆಂದರೆ ಲೈಂಗಿಕ ಕಿರುಕುಳವು ತಮಾಷೆ ಮಾಡುವ ವಿಷಯವಲ್ಲ ಮತ್ತು ಈ ವಿಷಯದಲ್ಲಿ ಅನುಷ್ಕಾ ಅವರಂತಹ ಸಂವೇದನಾಶೀಲ ವ್ಯಕ್ತಿಯಿಂದ ಯಾರೂ ಅಂತಹ ಮಾತನ್ನು ನಿರೀಕ್ಷಿಸಿರಲಿಲ್ಲ. ಅದರ ಫಲಿತಾಂಶ ಚೆನ್ನಾಗಿರುವುದಿಲ್ಲ ಎಂದು ಗೊತ್ತಿದ್ದ ಕಾರಣ ಕತ್ರಿನಾ ಶೋನಲ್ಲಿ ವಿಷಯವನ್ನು ನಿಭಾಯಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಈ ವಿಡಿಯೋ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: Subhashree Ganguly : ಟ್ರೆಡಿಷನಲ್‌ ಲುಕ್‌ನಲ್ಲಿ ನಟಿ ಶುಭಶ್ರೀ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News