ಆರ್ಯನ್ ಖಾನ್ ಡ್ರಗ್ ಕೇಸ್: ಸಮೀರ್ ವಾಂಖೆಡೆ ವರ್ಗಾವಣೆ ಯಾಕೆ ಗೊತ್ತಾ?

ಎನ್‌ಸಿಬಿಯ ಮಾಜಿ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ಅವರು ಅಕ್ಟೋಬರ್ 2021 ರಲ್ಲಿ ಆರ್ಯನ್ ಖಾನ್ ವಿರುದ್ಧ ತನಿಖೆಯ ನೇತೃತ್ವ ವಹಿಸಿದ್ದರು, ಇದು ಅಂತಿಮವಾಗಿ ಸ್ಟಾರ್ ಕಿಡ್‌ನ ಬಂಧನಕ್ಕೆ ಕಾರಣವಾಯಿತು. ಇದೀಗ ಎನ್‌ಸಿಬಿ ಮಾಜಿ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ತಮಿಳುನಾಡಿಗೆ ವರ್ಗಾಯಿಸಲಾಗಿದೆ.

Written by - Channabasava A Kashinakunti | Last Updated : May 31, 2022, 12:04 PM IST
ಆರ್ಯನ್ ಖಾನ್ ಡ್ರಗ್ ಕೇಸ್: ಸಮೀರ್ ವಾಂಖೆಡೆ ವರ್ಗಾವಣೆ ಯಾಕೆ ಗೊತ್ತಾ? title=

ಮುಂಬೈ : ಕಳೆದ ವರ್ಷ ಮುಂಬೈನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್, ಇತ್ತೀಚೆಗೆ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಯಿಂದ ಕ್ಲೀನ್ ಚಿಟ್ ಪಡೆದಿದ್ದಾರೆ ಮತ್ತು ಮಾಜಿ ಏಜೆನ್ಸಿ ಅಧಿಕಾರಿ ಸಮೀರ್ ವಾಂಖೆಡೆ ಮತ್ತೊಂದು ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

ಎನ್‌ಸಿಬಿಯ ಮಾಜಿ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ಅವರು ಅಕ್ಟೋಬರ್ 2021 ರಲ್ಲಿ ಆರ್ಯನ್ ಖಾನ್ ವಿರುದ್ಧ ತನಿಖೆಯ ನೇತೃತ್ವ ವಹಿಸಿದ್ದರು, ಇದು ಅಂತಿಮವಾಗಿ ಸ್ಟಾರ್ ಕಿಡ್‌ನ ಬಂಧನಕ್ಕೆ ಕಾರಣವಾಯಿತು. ಇದೀಗ ಎನ್‌ಸಿಬಿ ಮಾಜಿ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ತಮಿಳುನಾಡಿಗೆ ವರ್ಗಾಯಿಸಲಾಗಿದೆ.

ಇದನ್ನೂ ಓದಿ : ಭಾರತದಲ್ಲಿ ಪ್ರವಾಸಿ ವೀಸಾ ಇಂಟರ್‌ವ್ಯೂ ಪುನಾರಂಭ: ಯುಎಸ್‌ ರಾಯಭಾರ ಕಛೇರಿ ಸ್ಪಷ್ಟನೆ

ಆರ್ಯನ್ ಖಾನ್ ಮಾದಕ ದ್ರವ್ಯ ಪ್ರಕರಣದಲ್ಲಿ ವಾಂಖೆಡೆ ವಿರುದ್ಧ "ನಾರಕ ತನಿಖೆ" ನಡೆಸಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿಕೊಂಡಿದ್ದರು. ಭಾನುವಾರ, ವಾಂಖೆಡೆಯನ್ನು ಚೆನ್ನೈಗೆ ತೆರಿಗೆದಾರರ ಸೇವೆಗಳ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿದೆ.

ಮುಂಬೈ ಡ್ರಗ್ ಕೇಸ್ ನಲ್ಲಿ ಆರ್ಯನ್ ಖಾನ್‌ನ ವಿರುದ್ಧ ತನಿಖೆ ಪ್ರಾರಂಭವಾದ ತಕ್ಷಣ, ವಾಂಖೆಡೆ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಅದೇ ಪ್ರಕರಣದಲ್ಲಿ ಲೋಪದೋಷಗಳೊಂದಿಗೆ ತನಿಖೆ ನಡೆಸಿದ್ದರು. ಖಾನ್ ಮತ್ತು ಇತರರ ವಿರುದ್ಧ ಉದ್ದೇಶಿತ ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದಾರೆ ಎಂದು ವಾಂಖೆಡೆ ಆರೋಪಿಸಿದರು.

ಅವರ ವಿರುದ್ಧ ಅಸಮರ್ಪಕ ತನಿಖೆ ನಡೆಸಿದ್ದಕ್ಕಾಗಿ, ವಾಂಖೆಡೆಯನ್ನು ಆರ್ಯನ್ ಖಾನ್ ಡ್ರಗ್ ಪ್ರಕರಣದಿಂದ ಕೈ ಬಿಡಲಾಯಿತು. ನಂತರ, ಅವರನ್ನು ಮುಂಬೈನ ಡೈರೆಕ್ಟರೇಟ್ ಜನರಲ್ ಆಫ್ ಅನಾಲಿಟಿಕ್ಸ್ ಮತ್ತು ರಿಸ್ಕ್ ಮ್ಯಾನೇಜ್‌ಮೆಂಟ್‌ಗೆ ವರ್ಗಾವಣೆ ಮಾಡಲಾಯಿತು.

ಇದರ ಜೊತೆಗೆ ವಾಂಖೆಡೆ ಅವರು ಸರ್ಕಾರಿ ನೌಕರಿ ಪಡೆಯಲು ನಕಲಿ ಜಾತಿ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿ ರಾಜಕೀಯ ಮುಖಂಡರಿಂದ ಟೀಕೆಗಳನ್ನು ಎದುರಿಸಿದರು. ಇದಲ್ಲದೆ, ಮುಂಬೈ ಮಾದಕ ದ್ರವ್ಯ ದಂಧೆಯ ಬಗ್ಗೆ ವಾಂಖೆಡೆ ಅವರ ತನಿಖೆಯ ಸಮಯದಲ್ಲಿ ಅನೇಕ ಅಕ್ರಮಗಳು ಗಮನಸೆಳೆದವು.

ಮೂಲಗಳ ಪ್ರಕಾರ, ಡ್ರಗ್ಸ್ ದಂಧೆಯ ಸಮಯದಲ್ಲಿ ತನಿಖಾ ತಂಡವು ಯಾವುದೇ ವಿಡಿಯೋ ಮಾಡಿರಲಿಲ್ಲ ಮತ್ತು ಆರ್ಯನ್ ಖಾನ್ ಫೋನ್‌ನಲ್ಲಿ ಇದ್ದ ಚಾಟ್‌ಗಳನ್ನು ಪರೀಕ್ಷಿಸುವಲ್ಲಿ  ಲೋಪವಾಗಿದೆ, ಅದು ಅವರ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ವರದಿಯಾಗಿದೆ.

ಇದಲ್ಲದೆ, ಮಾದಕ ಡ್ರಗ್ ಸೇವನೆಯನ್ನು ಪತ್ತೆಹಚ್ಚಲು ಯಾವುದೇ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗಿಲ್ಲ ಎಂದು ಹೇಳಲಾಗಿದೆ, ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬರಿಂದ ಖಾಲಿ ಹಾಳೆಯ ಮೇಲೆ ಸಹಿ ಮಾಡಿಸಿಕೊಳ್ಳಲಾಗಿದೆ, ನಂತರ ಅದು ಪ್ರತಿಕೂಲವಾಗಿ ತಿರುಗಿತು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ತನಿಖಾ ರೂವಾರಿ ಸಮೀರ್ ವಾಂಖೆಡೆ ಚೆನ್ನೈಗೆ ವರ್ಗಾವಣೆ

ಮುಂಬೈ ಡ್ರಗ್ಸ್ ಪ್ರಕರಣದ ಎಲ್ಲಾ ಆರೋಪಿಗಳು ತಮ್ಮ ವಿರುದ್ಧ ಒಂದೇ ರೀತಿಯ ಆರೋಪಗಳನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ, ವರದಿಗಳ ಪ್ರಕಾರ ಆರ್ಯನ್ ಖಾನ್ ಯಾವುದೇ ಡ್ರಗ್ಸ್ ಹೊಂದಿರದಿದ್ದರೂ ಸಹ. ವಾಂಖೆಡೆ ಅವರು ಪ್ರಕರಣದ ನಿರ್ವಹಣೆಗಾಗಿ ಟೀಕೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವರ "ಅಸಮರ್ಪಕ ತನಿಖೆ" ಗಾಗಿ ಚೆನ್ನೈಗೆ ವರ್ಗಾಯಿಸಲಾಗಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News