Aryan Khan Drugs Case:ಕ್ರೂಸ್ ಡ್ರಗ್ಸ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆಗೆ ಕಾಣಿಸಿಕೊಂಡ ಗಡ್ಡಧಾರಿ ಹೆಸರು ಬಹಿರಂಗಗೊಳಿಸಿದ Nawab Malik

Cruise Drugs Party - ಕ್ರೂಸ್ ಪಾರ್ಟಿ ಡ್ರಗ್ಸ್ ಪ್ರಕರಣದಲ್ಲಿ ಗರ್ಲ್ ಫ್ರೆಂಡ್ ಜೊತೆಗೆ ಕಾಣಿಸಿಕೊಂಡ ಗಡ್ಡಧಾರಿಯ ಹೆಸರನ್ನು ಇಂದು NCP ಮುಖಂಡ ನವಾಬ್ ಮಲಿಕ್ ಬಹಿರಂಗಪಡಿಸಿದ್ದಾರೆ. ಹಾಗಾದರೆ ಆ ಗಡ್ಡಧಾರಿ ಯಾರು ಎಂಬುದನ್ನು ನೀವೂ ತಿಳಿದುಕೊಳ್ಳಿ.

Written by - Nitin Tabib | Last Updated : Oct 29, 2021, 12:28 PM IST
  • ಕ್ರೂಸ್ ಪಾರ್ಟಿ ಡ್ರಗ್ಸ್ ಪ್ರಕರಣದಲ್ಲಿ ಗರ್ಲ್ ಫ್ರೆಂಡ್ ಜೊತೆಗೆ ಕಾಣಿಸಿಕೊಂಡ ಗಡ್ಡಧಾರಿಯ ಹೆಸರು ಬಹಿರಂಗ.
  • ಆ ಗಡ್ಡಧಾರಿ ಯಾರು, ಪ್ರಕರಣದ ಜೊತೆಗೆ ಆತನ ಸಂಬಂಧ ಏನು?
  • ಅದರಲ್ಲೂ ವಿಶೇಷವಾಗಿ ಸಮೀರ್ ವಾಂಖೆಡೆ ಜೊತೆಗೆ ಆತನ ಸಂಬಂಧ ಏನು ತಿಳಿಯಲು ಸುದ್ದಿ ಓದಿ.
Aryan Khan Drugs Case:ಕ್ರೂಸ್ ಡ್ರಗ್ಸ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆಗೆ ಕಾಣಿಸಿಕೊಂಡ ಗಡ್ಡಧಾರಿ ಹೆಸರು ಬಹಿರಂಗಗೊಳಿಸಿದ Nawab Malik title=
Cruise Drugs Party (Photo Courtesy ANI)

Aryan Khan Drugs Case: ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ (Sharukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ಕ್ರೂಸ್ ಡ್ರಗ್ಸ್ ಪಾರ್ಟಿ ಕುರಿತು NCP ಹಿರಿಯ ಮುಖಂಡ ಹಾಗೂ ಮಹಾರಾಷ್ಟ್ರ ಸರ್ಕಾರದಲ್ಲಿ ಮಂತ್ರಿಯಾಗಿರುವ ನವಾಬ್ ಮಲಿಕ್ ಇಂದು ಮತ್ತೆ ಸುದ್ದಿಗೋಷ್ಠಿ ನಡೆಸಿ NCB ವಲಯ ನಿರ್ದೇಶಕ ಸಮೀರ್ ವಾಂಖೆಡೆ (Sameer Wankhede) ವಿರುದ್ಧ ಮತ್ತೆ ಆರೋಪ ಮಾಡಿದ್ದಾರೆ. ಈ ಬಾರಿ ನವಾಬ್ ಮಲಿಕ್ (Nawab Malik) ಕ್ರೂಸ್ ಡ್ರಗ್ಸ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆಗೆ ಕಾಣಿಸಿಕೊಂಡ ಗಡ್ಡಧಾರಿ ಡ್ರಗ್ಸ್ ಮಾಫಿಯಾ ಕುರಿತು ಹಲವು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ. ಹಾಗಾದರೆ ಬನ್ನಿ ಕ್ರೂಸ್ ನಲ್ಲಿದ್ದ ಆ ಗಡ್ಡಧಾರಿ ವ್ಯಕ್ತಿ ಯಾರು ತಿಳಿದುಕೊಳ್ಳೋಣ.

ಇದನ್ನೂ ಓದಿ-Bhajarangi-2: ರಾಜ್ಯದ ಥಿಯೇಟರ್​ಗಳಲ್ಲಿ ‘ಭಜರಂಗಿ-2’ ಅಬ್ಬರ..!

"ಡ್ರಗ್ಸ್ ಮಾಫಿಯಾ ಕಾಸಿಫ್ ಜೊತೆಗೆ ಸಮೀರ್ ವಾಂಖೆಡೆ ದೋಸ್ತಿ-ನವಾಬ್ ಮಲಿಕ್
ಮುಂಬೈನಲ್ಲಿ ಕ್ರೂಸ್‌ನಲ್ಲಿ ಡ್ರಗ್ಸ್ ಪಾರ್ಟಿ ಆಯೋಜಿಸಿದ್ದ ಗಡ್ಡಧಾರಿಯ ಹೆಸರು ಕಾಶಿಫ್ ಖಾನ್. ಎನ್‌ಸಿಬಿ ದಾಳಿಯ ಸಮಯದಲ್ಲಿ ಅವನು ಅಲ್ಲಿಯೇ ಇದ್ದನು, ಆದರೆ ಕಾಶಿಫ್ ಖಾನ್ (Kashif Khan), ಸಮೀರ್ ವಾಂಖೆಡೆಯ ಸ್ನೇಹಿತನಾಗಿದ್ದರಿಂದ ಸಮೀರ್ ವಾಂಖೆಡೆ ಆತನನ್ನು ತನ್ನ ವಶಕ್ಕೆ ಪಡೆದಿಲ್ಲ" ಎಂದು ನವಾಬ್ ಮಲಿಕ್ ಆರೋಪಿಸಿದ್ದಾರೆ. 

ಇದನ್ನೂ ಓದಿ-Rajinikanth: ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

ಸಮೀರ್ ವಾಂಖೆಡೆ, ಕಾಸಿಫ್ ಖಾನ್ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ -ನವಾಬ್ ಮಲಿಕ್
" ಸಮೀರ್ ವಾಂಖೆಡೆ ಕಾಶಿಫ್ ಜತೆ ಉತ್ತಮ ಸಂಬಂಧ ಹೊಂದಿದ್ದಾರೆ. ಆತನ ವಿರುದ್ಧ ಕ್ರಮ ಕೈಗೊಳ್ಳಲು ನಾವು ಹಲವು ಬಾರಿ ಪ್ರಯತ್ನಿಸಿದರೂ ಸಮೀರ್ ಅವಕಾಶ ನೀಡಲಿಲ್ಲ ಎಂದು ಅಧಿಕಾರಿಯೊಬ್ಬರು ನಮಗೆ ಮಾಹಿತಿ ನೀಡಿದ್ದಾರೆ " ಎಂದು ಮಲಿಕ್ ಆರೋಪಿಸಿದ್ದಾರೆ. ಸಮೀರ್ ವಾಂಖೆಡೆ ಸ್ವತಃ ಡ್ರಗ್ಸ್ ಸಿಂಡಿಕೇಟ್‌ನಲ್ಲಿ ಭಾಗಿಯಾಗಿದ್ದಾರೆ ಮತ್ತು ಗಡ್ಡಧಾರಿ ವ್ಯಕ್ತಿಯನ್ನು ಅಂತರರಾಷ್ಟ್ರೀಯ ಡ್ರಗ್ಸ್ ಸಿಂಡಿಕೇಟ್‌ನೊಂದಿಗೆ (International Drugs Syndicate) ಸಂಬಂಧ ಹೊಂದಿದ್ದಾರೆ ಎಂದು ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ. 

ಇದನ್ನೂ ಓದಿ-Aryan Khan get Bail : ಆರ್ಯನ್ ಖಾನ್ ಗೆ ಜಾಮೀನು ಕೊಡಿಸಿದ ವಕೀಲ ಮುಕುಲ್ ರೋಹಟಗಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News