Ashish Vidyarthi Marriage: 60ರ ಹರೆಯದಲ್ಲಿ ಎರಡನೇ ಮದುವೆಯಾದ ನಟ

Ashish Vidyarthi Second Marriage: ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಜೊತೆ ಎರಡನೇ ಮದುವೆಯಾಗಿದ್ದಾರೆ. ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್‌ ಆಗಿದ್ದಾರೆ.   

Written by - Chetana Devarmani | Last Updated : May 25, 2023, 04:55 PM IST
  • ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ
  • ರೂಪಾಲಿ ಬರುವಾ ಜೊತೆ ಎರಡನೇ ಮದುವೆ
  • ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ
Ashish Vidyarthi Marriage: 60ರ ಹರೆಯದಲ್ಲಿ ಎರಡನೇ ಮದುವೆಯಾದ ನಟ title=
ಆಶಿಶ್ ವಿದ್ಯಾರ್ಥಿ

Ashish Vidyarthi Marriage: ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಬಾಲಿವುಡ್, ಕನ್ನಡ ಸೇರಿದಂತೆ ದಕ್ಷಿಣದ ಅನೇಕ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಜನರ ಮನಗೆದ್ದಿದ್ದಾರೆ. ಇಂದು ಕೋಲ್ಕತ್ತಾದ ಕ್ಲಬ್‌ನಲ್ಲಿ ಅಸ್ಸಾಂನ ರೂಪಾಲಿ ಬರುವಾ ಅವರನ್ನು ವಿವಾಹವಾದರು. ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರನ್ನು ಖಾಸಗಿ ಸಮಾರಂಭದಲ್ಲಿ ಆಶಿಶ್‌ ವಿದ್ಯಾರ್ಥಿ ಮದುವೆಯಾದರು. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಈ ಹಿಂದೆ ಶಕುಂತಲಾ ಬರುವಾ ಅವರ ಮಗಳು ರಾಜೋಶಿ ಬರುವಾ ಅವರ ಜೊತೆ ಸಪ್ತಪದಿ ತುಳಿದಿದ್ದರು. ಇದೀಗ ಎರಡನೇ ಬಾರಿ ಮದುವೆಯಾಗಿದ್ದಾರೆ. ರೂಪಾಲಿ ಮೂಲತಃ ಗುವಾಹಟಿಯವರು. ಇವರು ಕೊಲ್ಕತ್ತಾದ ಫ್ಯಾಷನ್ ಸ್ಟೋರ್ ಜೊತೆ ಕೆಲಸ ಮಾಡುತ್ತಾರೆ. ಆಶಿಶ್ ಮತ್ತು ರೂಪಾಲಿ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್‌ ಆಗಿದ್ದಾರೆ ಎಂದು ಹೇಳಲಾಗಿದೆ. ಇವರು ಮದುವೆ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. 

ಇದನ್ನೂ ಓದಿ: ಕಾರ್ತಿ ಸಿನಿಮಾಗೆ ಡಿವೈನ್ ಸ್ಟಾರ್ ಸಾಥ್‌, ʻಜಪಾನ್ʼ ಟೀಸರ್ ರಿಲೀಸ್ ಮಾಡಿದ ರಿಷಬ್ ಶೆಟ್ಟಿ

ಆಶಿಶ್ ವಿಧ್ಯಾರ್ಥಿ 11 ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಜನಪ್ರಿಯ ನಟ ಈ ಹಿಂದೆ ಭಾರತೀಯ ನಟಿ, ಗಾಯಕಿ ಮತ್ತು ರಂಗಭೂಮಿ ಕಲಾವಿದೆ ರಾಜೋಶಿ ಬರುವಾ ಅವರನ್ನು ವಿವಾಹವಾಗಿದ್ದರು. ಅವರು ಹಿಂದಿನ ಕಾಲದ ನಟಿ ಶಕುಂತಲಾ ಬರುವಾ ಅವರ ಮಗಳು. 

ಅವರ ಮದುವೆಯ ನಂತರ ಆಶಿಶ್ ವಿದ್ಯಾರ್ಥಿ, ನನ್ನ ಜೀವನದ ಈ ಹಂತದಲ್ಲಿ, ರೂಪಾಲಿಯನ್ನು ಮದುವೆಯಾಗುವುದು ಅಸಾಮಾನ್ಯ ಭಾವನೆಯಾಗಿದೆ. ನಾವು ಬೆಳಿಗ್ಗೆ ಕೋರ್ಟ್‌ ಮ್ಯಾರೇಜ್‌ ಆಗಿದ್ದೇವೆ. ನಂತರ ಸಂಜೆ ಗೆಟ್-ಟುಗೆದರ್ ಮಾಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಪುಷ್ಪ 2 ಸಿನಿಮಾದಲ್ಲಿ ರಣವೀರ್ ಸಿಂಗ್.. ಈ ಪಾತ್ರದಲ್ಲಿ ಬಾಲಿವುಡ್‌ ಸ್ಟಾರ್‌!!

ಹಲವಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ಹೆಸರುವಾಸಿಯಾದ ಹಿರಿಯ ನಟ ದೆಹಲಿಯಲ್ಲಿ ಜೂನ್ 19, 1962 ರಂದು ಜನಿಸಿದರು. ಆಶಿಶ್ ವಿದ್ಯಾರ್ಥಿ ಹಲವಾರು ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಇಂಗ್ಲಿಷ್, ಒಡಿಯಾ, ಮರಾಠಿ ಮತ್ತು ಬಂಗಾಳಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News