ಮಲ್ಲಿಕಾರ್ಜುನ್‌ ನಾಪತ್ತೆ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ರೋಚಕ ಪೋಸ್ಟ್‌ ಶೇರ್‌ ಮಾಡಿದ ಭಾವನಾ ಬೆಳಗೆರೆ

Mallikarjun: ರೇಣುಕಾ ಸ್ವಾಮಿ ಕೇಸ್‌ನಲ್ಲಿ ಅರೆಸ್ಟ್‌ ಆಗಿರುವ ದರ್ಶನ್‌ ಮಾಜಿ ಮ್ಯಾನೇಜರ್‌ ಕುರಿತು ಭಾವನಾ ಬೆಳಗೆರೆ ಸ್ಪೋಟಕ ಪೋಸ್ಟ್‌ ಮಾಡಿದ್ದಾರೆ.  

Written by - Zee Kannada News Desk | Last Updated : Jun 16, 2024, 11:50 AM IST
  • ಮಲ್ಲಿಕಾರ್ಜುನ್‌ ನಾಪತ್ತೆ ಕುರಿತು ಭಾವನಾ ಬೇಳಗೆರೆ ಪೋಸ್ಟ್‌
  • ಮಲ್ಲಿಕಾರ್ಜುನ್‌ ಕಾಣೆಯಾಗಲುವಲ್ಲಿ ದರ್ಶನ್‌ ಪಾತ್ರವಿದೆ ಎಂದ ಭಾವನಾ.
  • ಏಳು ವರ್ಷಗಳ ನಂತರ ಸದ್ದು ಮಾಡುತ್ತಿದೆ ಮಲ್ಲಿ ಮಿಸ್ಸಿಂಗ್‌ ಕೇಸ್‌
ಮಲ್ಲಿಕಾರ್ಜುನ್‌ ನಾಪತ್ತೆ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ರೋಚಕ ಪೋಸ್ಟ್‌ ಶೇರ್‌ ಮಾಡಿದ ಭಾವನಾ ಬೆಳಗೆರೆ title=

Mallikarjun Missing: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಸದ್ಯಕ್ಕೆ  ದರ್ಶನ್‌ ಅಂದರ್‌ ಆಗಿದ್ದಾರೆ. ಗೆಳತಿ ಪವಿತ್ರಾ ಗೌಡಾಗೆ ಅಶ್ಲೀಲವಾಗಿ ಕಾಮೆಂಟ್‌ ಮಾಡಿದ ಕಾರಣಕ್ಕೆ ಡಿ ಗ್ಯಾಂಗ್‌ ರೆಣುಕಾ ಸ್ವಾಮಿಯನ್ನು ಕೊಂದು ಮುಗಿಸಿದ್ದರು.

ಅದ್ಯಕ್ಕೆ ಪೋಲಿಸ್‌ ಕಸ್ಟಡಿಯಲ್ಲಿರುವ ದರ್ಶನ್‌ರ ಹಳೆಯ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರ್ತಿವೆ. ಅದರಲ್ಲೂ ಭಾರಿ ಸದ್ದು ಮಾಡುತ್ತಿರುವುದು ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಬಿ ಸಂಕೇಗೌಡರ್‌ ನಾಪತ್ತೆ ಪ್ರಕರಣ.

2018, ಜೂನ್‌ ನಲ್ಲಿ ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ್‌ ಕೇಸ್‌ ಈಗ ದಿಢೀರನೇ ಮತ್ತೊಮ್ಮೆ ಜ್ವಾಲೆಯಂತೆ ಹರಡಿಕೊಂಡಿದೆ. ಇದರ ಬೆನ್ನಲ್ಲೆ ಭಾವನಾ ಬೆಳಗೆರೆ ಈ ಕುರಿತು ಮಾಡಿರುವ ಫೋಸ್ಟ್‌ ಒಂದು ಭರ್ಜರಿ ಸೌಂಡ್‌ ಮಾಡುತ್ತಿದೆ. ಹಾಗಾದರೆ ನಟಿ ಭಾವನಾ ಬೆಳಗೆರೆ ಮಾಡಿರುವ ಆ ಪೋಸ್ಟ್‌ ಆದರೂ ಏನು? ಮುಂದೆ ಓದಿ...

ಇದನ್ನೂ ಓದಿ: ಮಲ್ಲಿ ಮಿಸ್ಸಿಂಗ್‌ ಕುರಿತು ಹೆಚ್ಚಿದ ಅನುಮಾನ: ಸಿನಿಮಾ ಬ್ಯಾನರ್‌ ಇನ್ನೂ ಆಕ್ಟೀವ್‌..!

ಕಾಣೆಯಾದ ಮಲ್ಲಿ ಎಲ್ಲಿ ?

"ಮಲ್ಲಿಕಾರ್ಜುನ್‌ ಬಿ ಸಂಕೇಗೌಡರ್‌ ದರ್ಶನ್‌ನ ಮ್ಯಾನೇಜರ್‌ ಆಗಿದ್ದ. ಬೃಂದಾವನ ಎನ್ನುವ ಸಿನಿಮಾ 2013ರಲ್ಲಿ ರಿಲೀಸ್‌ ಆಗಿತ್ತು ಅದರೆ ಅಷ್ಟರ ಮಟ್ಟಿಗೆ ಸಿನಿಮಾ ಸಕ್ಸಸ್‌ ಕಾಣದೆ ಪ್ಲಾಫ್‌ ಆಗಿತ್ತು. ಇದೊಂದೇ ಅಲ್ಲ ಅದರ ನಂತರ ಬಂದ ಹಲವು ಸಿನಿಮಾಗಳು ಪ್ಲಾಫ್‌ ಆಗಿದ್ದವು. ಇದರಿಂದ ಈ ಸಿನಿಮಾಗಳನ್ನ ಥಿಯೇಟರ್‌ನಲ್ಲಿ ಓಡಿಸಲು ದರ್ಶನ್‌ ಡೇಟ್‌ ಕೊಡುಸುತ್ತಾರೆ ಎಂದು ಮಲ್ಲಿಕಾರ್ಜುನ್‌ ಹಲವು ನಿರ್ಮಾಕರ ಬಳಿ ಹಣ ಪೀಕಿದ್ದ. ಹೀಗೆ ಸಿನಿಮಾ ಓಡಿಸುತ್ತೇವೆ ಅಂತಾ ಹೇಳಿ ಮಲ್ಲಿಕಾರ್ಜುನ್‌ ವಸೂಲಿ ಮಾಡಿದ್ದು ಸುಮಾರು 20ರಿಂದ 30 ಕೋಟಿ. ಈ ರೀತಿ ನಿರ್ಮಾಕರ ಬಳಿ ಹಣ ವಸೂಲಿ ಮಾಡು ಅಂತ ಹೇಳಿದ್ದೆ ದರ್ಶನ್‌. ನಿರ್ಮಾಕರು ಕೆಲವು ದಿನ ಆದಮೇಲೆ ಸಿನಿಮಾ ರಿಲೀಸ್‌ಗೆ ಡೇಟ್‌ ಕೊಡಿ ಇಲ್ವಾ ನಮ್ಮ ದುಡ್ಡು ವಾಪಸ್‌ ಕೊಡಿ ಎಂದು ಕೇಳಿದಾಗ ದರ್ಶನ್‌, ನೀವೇನು ದುಡ್ಡು ನನಗೆ ಕೊಟ್ರಾ ಯಾರಿಗೆ ಕೊಟ್ರೋ ಅವರನ್ನ ಕೇಳಿ ಅಂತಾ ಹೇಳಿ ಕೈ ಎತ್ತಿದ್ದರು. ದುಡ್ಡು ಕೇಳಲು ಬಂದ ನಿರ್ಮಾಕರಿಗೆ ದಮ್ಕಿ ಹಾಕಿ ಓಡಿಸಿದ್ದರು. ಅಂದು ನಾಪತ್ತೆಯಾದವನು ಇಂದಿಗೂ ಪತ್ತೆಯಿಲ್ಲ" ಎಂದು ಹಾಯ್‌ ಬೆಂಗಳೂರು ಪತ್ರಿಕೆಯಲ್ಲಿ 13ರ 2024 ರಲ್ಲಿ ಬಂದಿದ್ದ ಸುದ್ದಿಯನ್ನು ಪೋಸ್ಟ್‌ ಮಾಡಿ ಭಾವನಾ "ಇದುವೇ ಹಾಯ್‌ನ ತಾಕತ್ತು, ಈ ಸುದ್ದಿ ಹೋಗಿದ್ದು ನಮ್ಮಲ್ಲೆ ಮೊದಲು" ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ದರ್ಶನ್ ಗೆ ಕೈ ಕೊಟ್ಟು ಓಡಿ ಹೋಗಿದ್ದ ಮ್ಯಾನೇಜರ್..! ಏಳು ...

ಮಲ್ಲಿಕಾರ್ಜುನ್‌ ನಾಪತ್ತೆಯ ಸುತ್ತ ಎಷ್ಟೇ ಅಂತೆ ಕಂತೆಗಳು ಹರಿದಾಡಿದರೂ ಸತ್ಯ ಏನು ಎಂಬುದು ಇನ್ನೂ ಮುಂದೆ ತನಿಖೆ ನಡೆದರೆ ಅಷ್ಟೇ ಹೊರಬೀಳಲಿದೆ. ಆದರೆ ಮಲ್ಲಿಕಾರ್ಜುನ್‌ ಕುಂಟುಂಬದವರು ಹೇಳುತ್ತಿರುವುದು ಏನೆಂದರೆ. ಆತ ಮನೆ ಬಿಟ್ಟು ಹೋಗುವಾಗ ಪತ್ರ ಬರೆದು ಇಟ್ಟಿದ್ದ ಸಾಲದ ಕಾರಣ ಮನೆ ಬಿಟ್ಟು ಹೋಗಿತ್ತಿದ್ದೇನೆ ಎಂದು ಕಾರಣ ನೀಡಿದ್ದ ಎಂದು ಕಂಪ್ಲೆಂಟ್‌ ಕೂಡ ಕೊಡದೆ ಮೌನ ವಹಿಸಿರೋದು ಅಚ್ಚರಿ.

Trending News