ತಾನೆಂದರೇನಂತ ತೋರಿಸೋಕೆ ಅಂತ ʻಭೂಮಿಗೆ ಬಂದ ಭಗವಂತʼ.!

bhoomige banda bhagavantha : ಕನ್ನಡ ಕಿರುತೆರೆಯಲ್ಲಿ ಹೊಸದೊಂದು ಸಂಚಲನ ಸೃಷ್ಟಿಸಿರುವ ಧಾರಾವಾಹಿ  "ಭೂಮಿಗೆ ಬಂದ ಭಗವಂತ". ಖ್ಯಾತ ನಿರ್ದೇಶಕ ಆರೂರು ಜಗದೀಶ್ ಸಾರಥ್ಯದ ಈ ಧಾರಾವಾಹಿ ಇದೀಗ ಅದರ ಶೀರ್ಷಿಕೆ ಗೀತೆಯನ್ನು  ಬಿಡುಗಡೆ ಮಾಡಿದೆ.   

Written by - Chetana Devarmani | Last Updated : Mar 28, 2023, 01:49 PM IST
  • ಕನ್ನಡ ಕಿರುತೆರೆಯಲ್ಲಿ ಹೊಸದೊಂದು ಸಂಚಲನ
  • ಖ್ಯಾತ ನಿರ್ದೇಶಕ ಆರೂರು ಜಗದೀಶ್ ಸಾರಥ್ಯದ ಧಾರಾವಾಹಿ
  • ತಾನೆಂದರೇನಂತ ತೋರಿಸೋಕೆ ಅಂತ ʻಭೂಮಿಗೆ ಬಂದ ಭಗವಂತʼ
ತಾನೆಂದರೇನಂತ ತೋರಿಸೋಕೆ ಅಂತ ʻಭೂಮಿಗೆ ಬಂದ ಭಗವಂತʼ.! title=

bhoomige banda bhagavantha Kannada Serial : "ಭೂಮಿಗೆ ಬಂದ ಭಗವಂತ" ಜೀ ಕನ್ನಡ ವಾಹಿನಿಯಲ್ಲಿ ಕಳೆದ ವಾರವಷ್ಟೇ ಆರಂಭಗೊಂಡು ಕನ್ನಡ ಕಿರುತೆರೆಯಲ್ಲಿ ಹೊಸದೊಂದು ಸಂಚಲನ ಸೃಷ್ಟಿಸಿರುವ ಧಾರಾವಾಹಿ. ಬಿಡುಗಡೆಯಾದ ಪ್ರೋಮೊಗಳಿಂದ ಈವರೆಗೂ ಪ್ರಸಾರವಾದ ಸಂಚಿಕೆಗಳವರೆಗೂ ವೀಕ್ಷಕರಿಂದ ಭಾರೀ ಮೆಚ್ಚುಗೆ ಸಂಪಾದಿಸಿರುವ ಈ ಧಾರಾವಾಹಿ ಇದೀಗ ಅದರ ಶೀರ್ಷಿಕೆ ಗೀತೆಯನ್ನು  ಬಿಡುಗಡೆ ಮಾಡಿದೆ. 

ಭೂಮಿಗೆ ಬಂದ ಭಗವಂತ ಸಂಗೀತ, ಸಾಹಿತ್ಯ ಮತ್ತು ಗಾಯನ ಎಲ್ಲದರಲ್ಲೂ ವಿಶೇಷತೆ ಹೊಂದಿದೆ. ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮ ಅವರ ಅದ್ಭುತ ಸಂಯೋಜನೆಗೆ ಸುಧೀಂದ್ರ ಭಾರದ್ವಾಜ್ ಮತ್ತು ರಾಘವೇಂದ್ರ ಸಿವಿ ಅವರ ಸಾಹಿತ್ಯವಿದೆ. ಇನ್ನೂ ಈ ಹಾಡಿಗೆ ಭಾರತ ದೇಶ ಕಂಡ ಶ್ರೇಷ್ಠ ಗಾಯಕ ಶಂಕರ್ ಮಹಾದೇವನ್ ಅವರು ದನಿಗೂಡಿಸಿ ಬದುಕಿನರ್ಥ ತಿಳಿಸುವ  ಈ ಹಾಡಿನ ಘನತೆ ಹೆಚ್ಚಿಸಿದ್ದಾರೆ.

ಇದನ್ನೂ ಓದಿ : ಶಾರುಖ್ ಖಾನ್ ಖರೀಸಿದ್ರು 10 ಕೋಟಿ ಮೌಲ್ಯದ Rolls-Royce ಕಾರು.. ಇಲ್ಲಿದೆ ನೋಡಿ ವಿಡಿಯೋ

ಮಿಡಲ್ ಕ್ಲಾಸ್ ಬದುಕಿನ ಒಬ್ಬ ಪ್ರಾಮಾಣಿಕ ವ್ಯಕ್ತಿಗೆ  ದಿನನಿತ್ಯದ ಜಂಜಾಟ ಜೊತೆಗೆ ಸುಳ್ಳು, ಮೋಸ, ಅಪ್ರಮಾಣಿಕತೆ, ಸಂಸಾರದ  ತಾಪತ್ರಯ ಎಂಬ ಅಡತಡೆಗಳು ಎದುರಾದಾಗ ಖುದ್ದು ಭಗವಂತ ಭೂಮಿಗೆ ಬಂದು ಸ್ನೇಹಿತನಾಗಿ ಕೈಹಿಡಿದು ಹೇಗೆ ನಡೆಸುತ್ತಾನೆ ಎನ್ನುವುದ ಈ ಕತೆಯ ಸಾರಾಂಶವಾಗಿದ್ದು ನೋಡುಗರಲ್ಲಿ ಕುತೂಹಲ ಹೆಚ್ಚಿಸಿದೆ. 

ಇನ್ನೂ ಖ್ಯಾತ ನಿರ್ದೇಶಕ ಆರೂರು ಜಗದೀಶ್ ಸಾರಥ್ಯದ ಈ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ನಟ - ನಿರ್ದೇಶಕ ನವೀನ್ ಕೃಷ್ಣ, ನಟಿ ಕೃತ್ತಿಕಾ ರವೀಂದ್ರ ಮತ್ತು ಭಗವಂತನಾಗಿ ಕಾರ್ತಿಕ್ ಸಾಮಗ ಕಾಣಿಸಿಕೊಂಡಿದ್ದಾರೆ. ಸೋಮವಾರದಿಂದ ಶುಕ್ರವಾರ ರಾತ್ರಿ 10ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ.

ಇದನ್ನೂ ಓದಿ : ಕೋಮಲ್ ನಟನೆಯ "ಯಲಾಕುನ್ನಿ" ಚಿತ್ರಕ್ಕೆ ಮುಹೂರ್ತ.. ವಜ್ರಮುನಿ ಮೊಮ್ಮಗ ಸಿನಿರಂಗಕ್ಕೆ ಗ್ರ್ಯಾಂಡ್ ಎಂಟ್ರಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News