Adipusush ಚಿತ್ರ ನಿರ್ಮಾಪಕರಿಗೆ ಬಿಗ್ ಶಾಕ್, ಎಲ್ಲಾ ಪ್ರಯತ್ನಗಳ ಹೊರತಾಗಿ ಚಿತ್ರ ಆನ್ಲೈನ್ ನಲ್ಲಿ ಸೋರಿಕೆ

Adipurush Online Leak: ಬಾಲಿವುಡ್ ಸಿನಿಮಾಗಳಿಗೆ ಪೈರಸಿ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಚಿತ್ರಗಳು ಸೋರಿಕೆಯಾಗುತ್ತಿವೆ. ದೇಶದ ಅತ್ಯಂತ ದುಬಾರಿ ಚಿತ್ರ ಎಂದೇ  ಹೇಳಲಾಗುತ್ತಿರುವ ''ಆದಿಪುರುಷ ಚಿತ್ರವೂ ಇದೀಗ ಆನ್ಲೈನ್ ಸೋರಿಕೆಗೆ ಗುರಿಯಾಗಿದೆ.  

Written by - Nitin Tabib | Last Updated : Jun 17, 2023, 08:03 PM IST
  • ಅಂದಹಾಗೆ, ಶುಕ್ರವಾರ ಬಿಡುಗಡೆಯಾದ ನಂತರ ಆದಿಪುರುಷ ವಿವಾದದಲ್ಲಿ ಸಿಲುಕಿದೆ.
  • ಚಿತ್ರದಲ್ಲಿ ರಾಮ, ಹನುಮಂತ ಮತ್ತು ರಾವಣನ ಪಾತ್ರಗಳನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಹಲವರು ಚಿತ್ರವನ್ನೂ ವಿರೋಧಿಸುತ್ತಿದ್ದಾರೆ.
  • ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ನಿರ್ದೇಶಕ ಓಂ ರಾವುತ್ ಅವರ ಚಿತ್ರವು
  • ಕಳೆದ ವರ್ಷ ಟೀಸರ್ ಬಿಡುಗಡೆಯಾದಾಗಿನಿಂದ ಸಾಕಷ್ಟು ಪ್ರತಿಭಟನೆಗಳನ್ನು ಎದುರಿಸಿದೆ.
Adipusush ಚಿತ್ರ ನಿರ್ಮಾಪಕರಿಗೆ ಬಿಗ್ ಶಾಕ್, ಎಲ್ಲಾ ಪ್ರಯತ್ನಗಳ ಹೊರತಾಗಿ ಚಿತ್ರ ಆನ್ಲೈನ್ ನಲ್ಲಿ ಸೋರಿಕೆ title=

Adipurush Online Leak: ಪ್ರಭಾಸ್ ಮತ್ತು ಕೃತಿ ಸನನ್ ಅಭಿನಯದ ಆದಿಪುರುಷ ಚಿತ್ರ ಶುಕ್ರವಾರ ಬಿಡುಗಡೆಯಾದ ಬೆನ್ನಲ್ಲೇ ಪೈರಸಿಗೆ ಬಲಿಯಾಗಿದೆ. ಇದು ದುರದೃಷ್ಟಕರ ವಿಷಯವಾಗಿದೆ, ಏಕೆಂದರೆ ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ, ಚಲನಚಿತ್ರಗಳ ಆನ್‌ಲೈನ್ ಸೋರಿಕೆ ಸಮಸ್ಯೆ ಕೊನೆಗೊಳ್ಳುವ ಮಾತೆ ಎತ್ತುತ್ತಿಲ್ಲ ಎಂಬಂತೆ ತೋರುತ್ತಿದೆ. ಇದರ ವಿರುದ್ಧ ನಿರ್ಮಾಪಕರು ಹಲವು ಬಾರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆದಿಪುರುಷ ಚಿತ್ರ ಬಿಡುಗಡೆಗೂ ಮುನ್ನ ಚಿತ್ರ ಸೈಬರ ಖದೀಮರಿಗೆ ಅದನ್ನು ಕಾಪಿ ಮಾಡಲು ಮತ್ತು ಅಂತರ್ಜಾಲದಲ್ಲಿ ಅಕ್ರಮವಾಗಿ ಸೋರಿಕೆ ಮಾಡಲು ಬರದಂತೆ ಚಿತ್ರದ ನಿರ್ಮಾಪಕರು ಇಂತಹ ಹಲವು ತಾಂತ್ರಿಕ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬ ವರದಿಗಳು ಮುನ್ನೆಲೆಗೆ ಬಂದಿದ್ದವು. ಆದರೆ ಅದು ಸಾಧ್ಯವಾಗಿಲ್ಲ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. 

ಇದನ್ನೂ ಓದಿ-MP: 'ಮುಸ್ಲಿಂ ಯುವತಿಯರನ್ನು ವಿವಾಹವಾಗುವ ಹಿಂದೂ ಯುವಕರಿಗೆ 11 ಸಾವಿರ ನಗದು ಬಹುಮಾನ'

ಶಂಕೆಯಲ್ಲಿ ಹೆಚ್ಚಳ
ಮಾಧ್ಯಮ ವರದಿಗಳ ಪ್ರಕಾರ, ಮಹತ್ವಾಕಾಂಕ್ಷೆಯ ಚಲನಚಿತ್ರವು ತಮಿಳುರಾಕರ್ಸ್, ಫಿಲ್ಮಿಜಿಲ್ಲಾ, ಮೂವೀರುಲ್ಜ್ ಸೇರಿದಂತೆ ಹಲವಾರು ಪೈರೇಟೆಡ್ ವೆಬ್‌ಸೈಟ್‌ಗಳಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸ್ಟ್ರೀಮಿಂಗ್ ಮತ್ತು ಡೌನ್‌ಲೋಡ್‌ಗೆ ಲಭ್ಯವಾಗಿದೆ. ಚಿತ್ರದ ಸೋರಿಕೆಯಿಂದಾಗಿ, ನಿರ್ಮಾಪಕರಿಗೆ ಭಾರಿ ದೊಡ್ಡ ಹೊಡೆತ ಬಿದ್ದಿದೆ. ಏಕೆಂದರೆ ಈ ಚಿತ್ರವನ್ನು ಇದುವರೆಗೆ ಭಾರತದ ಅತ್ಯಂತ ಭಾರೀ ಬಜೆಟ್ ಚಿತ್ರ ಎಂದು ಹೇಳಲಾಗುತ್ತಿದೆ. ಚಿತ್ರದ ನಿರ್ಮಾಣ ಮತ್ತು ಪ್ರಚಾರಕ್ಕಾಗಿ ಸುಮಾರು 600 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ. ಇಂತಹ ಸಂದರ್ಭದಲ್ಲಿ ಆದಿಪುರುಷ ಆನ್ಲೈನ್ ನಲ್ಲಿ ಸೋರಿಕೆಯಾಗಿರುವುದು ನಿರಾಶಾದಾಯಕ ಸುದ್ದಿ ಎಂದರೆ ತಪ್ಪಾಗಲಾರದು. ಇದರಿಂದಾಗಿ ಚಿತ್ರದ ಬಾಕ್ಸ್ ಆಫೀಸ್ ಪ್ರದರ್ಶನದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವ  ಸಾಧ್ಯತೆ ಇದೆ.

ಇದನ್ನೂ ಓದಿ-Adipurush: 'ಕೀಳು ರಾಜಕೀಯಕ್ಕಾಗಿ ತಾಯಿ ಸೀತೆ - ಶ್ರೀರಾಮನಿಗೆ ಅವಮಾನ'', 'ಆದಿಪುರುಷ್ ಚಿತ್ರದ ವಿರುದ್ಧ ಆಪ್ ಅಸಮಾಧಾನ

ಆರಂಭದಿಂದಲೂ ಪ್ರತಿರೋಧ
ಅಂದಹಾಗೆ, ಶುಕ್ರವಾರ ಬಿಡುಗಡೆಯಾದ ನಂತರ ಆದಿಪುರುಷ ವಿವಾದದಲ್ಲಿ ಸಿಲುಕಿದೆ. ಚಿತ್ರದಲ್ಲಿ ರಾಮ, ಹನುಮಂತ ಮತ್ತು ರಾವಣನ ಪಾತ್ರಗಳನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಹಲವರು ಚಿತ್ರವನ್ನೂ ವಿರೋಧಿಸುತ್ತಿದ್ದಾರೆ. ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ನಿರ್ದೇಶಕ ಓಂ ರಾವುತ್ ಅವರ ಚಿತ್ರವು ಕಳೆದ ವರ್ಷ ಟೀಸರ್ ಬಿಡುಗಡೆಯಾದಾಗಿನಿಂದ ಸಾಕಷ್ಟು ಪ್ರತಿಭಟನೆಗಳನ್ನು ಎದುರಿಸಿದೆ. ನಂತರ ಅವರು ಪಾತ್ರಗಳಿಗೆ  ವಿಎಫ್‌ಎಕ್ಸ್  ಅನ್ವಯಿಸುವ ಮೂಲಕ ಸುಧಾರಿಸುತ್ತಿದ್ದಾರೆ ಎಂದು ಚಿತ್ರವನ್ನು ಉಲ್ಲೇಖಿಸಿ ವರದಿಗಳು ಪ್ರಕಟಗೊಂಡಿವೆ. ಇದಲ್ಲದೆ ಚಿತ್ರವು ಪ್ರಮುಖವಾಗಿ 3D ಆವೃತ್ತಿಯಲ್ಲಿರುವ ಕಾರಣ ಜನರಿಗೆ ಪಾತ್ರಗಳ ಬಗ್ಗೆ ದೂರು ಇರುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ಬಿಡುಗಡೆಯಾದ ನಂತರ ಪ್ರೇಕ್ಷಕರಿಗೆ ತೃಪ್ತಿಯಾಗುತ್ತಿಲ್ಲ ಮತ್ತು. ಚಿತ್ರವು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ ಮತ್ತು ಅದರಲ್ಲಿ ದೇವದೇವತೆಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದೆ. ಸಿನಿಮಾವನ್ನು ಬ್ಯಾನ್ ಮಾಡುವಂತೆ ಹಲವರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News