ಬಿಗ್‌ಬಾಸ್‌ನಲ್ಲಿ ನೋಣಗಳ ಗಣಗಣ : ಫನ್ನಿಯಾಗಿತ್ತು ಟಂಗ್ ಟ್ವಿಸ್ಟಿಂಗ್ ಟಾಸ್ಕ್

ಬಿಗ್‌ ಬಾಸ್‌ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಟಾಸ್ಕ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸದ್ಯ ದೊಡ್ಮನೆ ಸದಸ್ಯರು ಬಿಗ್‌ಬಾಸ್‌ ನೀಡಿದ್ದ ಟಂಗ್‌ ಟ್ವಿಸ್ಟಿಂಗ್‌ ಟಾಸ್ಕ್‌ ಮುಗಿಸಲು ಹರಸಾಹಸ ಪಟ್ಟರು. ಒಬ್ಬರೂ ಸಹ ಈ ಸ್ಪರ್ಧೆಯಲ್ಲಿ ಗೆಲ್ಲಲೇ ಇಲ್ಲ ಬದಲಿಗೆ ಬಿಗ್‌ಹೌಸ್‌ ತುಂಬಾ ನಗು ಕೇಳಿ ಬಂತು.

Written by - Krishna N K | Last Updated : Oct 12, 2022, 02:57 PM IST
  • ಬಿಗ್‌ಬಾಸ್‌ ನೀಡಿದ್ದ ಟಂಗ್‌ ಟ್ವಿಸ್ಟಿಂಗ್‌ ಟಾಸ್ಕ್‌ ಮುಗಿಸಲು ಮನೆಯ ಸದಸ್ಯರ ಹರಸಾಹಸ
  • ಫನ್ನಿ ಟಂಗ್ ಟ್ವಿಸ್ಟಿಂಗ್ ಟಾಸ್ಕ್‌ಗೆ ಬಿದ್ದು ಬಿದ್ದು ನಕ್ಕ ಸ್ಪರ್ಧಿಗಳು
  • ಎಷ್ಟೇ ಪ್ರಯತ್ನ ಪಟ್ಟರೂ ಒಬ್ಬರೂ ಸಹ ಟಾಸ್ಕ್‌ ಮಗಿಸಲೇ ಇಲ್ಲ
ಬಿಗ್‌ಬಾಸ್‌ನಲ್ಲಿ ನೋಣಗಳ ಗಣಗಣ : ಫನ್ನಿಯಾಗಿತ್ತು ಟಂಗ್ ಟ್ವಿಸ್ಟಿಂಗ್ ಟಾಸ್ಕ್  title=

BBKS 9 : ಬಿಗ್‌ ಬಾಸ್‌ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಟಾಸ್ಕ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸದ್ಯ ದೊಡ್ಮನೆ ಸದಸ್ಯರು ಬಿಗ್‌ಬಾಸ್‌ ನೀಡಿದ್ದ ಟಂಗ್‌ ಟ್ವಿಸ್ಟಿಂಗ್‌ ಟಾಸ್ಕ್‌ ಮುಗಿಸಲು ಹರಸಾಹಸ ಪಟ್ಟರು. ಒಬ್ಬರೂ ಸಹ ಈ ಸ್ಪರ್ಧೆಯಲ್ಲಿ ಗೆಲ್ಲಲೇ ಇಲ್ಲ ಬದಲಿಗೆ ಬಿಗ್‌ಹೌಸ್‌ ತುಂಬಾ ನಗು ಕೇಳಿ ಬಂತು.

ಹೌದು.. ದೊಡ್ಮನೆಯಲ್ಲಿ ಗಳಿಗೆ ಗಳಿಗೆಗೆ ಒಂದು ಟ್ವಿಸ್ಟ್‌ ನಡೆಯುತ್ತಿದೆ, ಇದರ ನಡುವೆ ಮನೆಯ ಸದಸ್ಯರಿಗೆ ಬಿಗ್‌ಬಾಸ್‌ ಟಂಗ್‌ ಟ್ವಿಸ್ಟಿಂಗ್‌ ಟಾಸ್ಕ್‌ ನೀಡಿದೆ. ಎಲ್ಲರೂ ಕ್ಯಾಮರಾ ಮುಂದೆ ಬಂದು ನಿಂತು ಹೇಳಲು ಪ್ರಯತ್ನಿಸಿದರೂ ಯಾರಿಗೂ ಸಾಧ್ಯವಾಗಿಲ್ಲ. ʼನಳದೊಳಗೆ ನೋಣಗಳ ಗಣಗಣ ಕೇಳಿ ಕ್ಷಣದೊಳಗಣ ಗಣಗಣʼ ಎಂಬ ಲೈನ್‌ ಹೇಳಲು ಎಲ್ಲರೂ ಒದ್ದಾಡಬೇಕಾಯಿತು. ಆರ್ಯವರ್ಧನ್‌ ಗುರೂಜಿ ಮಾತ್ರ ನನಗೆ ಇದಕ್ಕೆ ಯಾವುದೇ ಸಂಬಂಧವಿಲ್ಲ ಎನ್ನುವಂತಿದ್ದರು.

ಇದನ್ನೂ ಓದಿ: ʼಅಮಿರ್‌ ಖಾನ್‌ ಇನ್ಸಲ್ಟ್‌ ಹಿಂದೂ ʼ : ಮತ್ತೆ ಟ್ರೋಲ್‌ಗೆ ಗುರಿಯಾದ ಮಿಸ್ಟರ್ ಪರ್ಫೆಕ್ಷನಿಸ್ಟ್

ರಾಕೇಶ್‌ ಅಡಿಗ ಟಾಸ್ಕ್‌ ಮುಗಿಸುವಂತೆ ಎದೆ ಹುಬ್ಬಿಸಿಕೊಂಡು ಕ್ಯಾಮೆರಾ ಮುಂದೆ ಬಂದು ಗಣಗಣ ಮನಗಣಗಣ ಎಂದು ಏನೇನೋ ಹೇಳಿ ಹೋದ್ರೆ, ಅನುಪಮಾ ಅದೇಷ್ಟೇ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ದಿವ್ಯಾ ಉರುಡುಗ ಕಿವಿ ಮುಚ್ಚಿಕೊಂಡು ಬಾಯಿಪಾಠ ಮಾಡಿದ್ರೂ ನಗು ಬಂತೇ ಹೊರತು ಟಂಗ್‌ ಟ್ವಿಸ್ಟಿಂಗ್‌ಗಾಗಿ ಕೊಟ್ಟ ಲೈನ್ಸ್‌ ಬರಲೇ ಇಲ್ಲ. ಇನ್ನೂ ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಪಾಠವನ್ನು ಓದಿದಂತೆ ಓದಿದರು. ಮಯೂರಿ ಅಂತೂ ನೋಣಗಳು ಅಂತಾ ಹೇಳ್ತಾನೆ ಜೋರಾಗಿ ನಗಲು ಪ್ರಾರಂಭಿಸಿದರು ಹೀಗೆ ಮನೆ ಮಂದಿಯೆಲ್ಲ ಪ್ರಯತ್ನ ಪಟ್ಟರು ಬಿಗ್‌ಬಾಸ್‌ ಟಾಸ್ಕ್‌ ಪೂರ್ತಿಯಾಗಲೇ ಇಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News