Kiccha ‌Sudeep: ಬಿಗ್‌ಬಾಸ್‌ Promo ಶೂಟ್‌ ವಿಡಿಯೋ ಲೀಕ್! ಟ್ವೀಟ್‌ ಮೂಲಕ ನಟ ಸುದೀಪ್‌ ಸ್ಪಷ್ಟನೆ

Bigg Boss Kannada Promo Shoot video: ಕನ್ನಡ ಕಿರುತೆರೆಯಲ್ಲಿ ಎಷ್ಟೇ ರಿಯಾಲಿಟಿ ಶೋಗಳು ಬಂದರೂ ಸಹ ಬಿಗ್‌ ಬಾಸ್‌ ಮಾತ್ರ ಎಂದಿಗೂ ಜನರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿಯೇ ಉಳಿದಿದೆ. ಈ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ಗಾಗಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ. 

Written by - Chetana Devarmani | Last Updated : Jul 13, 2022, 05:51 PM IST
  • ಕನ್ನಡ ಕಿರುತೆರೆಯ ಫೇಮಸ್ ರಿಯಾಲಿಟಿ ಶೋ‌ ಬಿಗ್‌ ಬಾಸ್‌
  • ಬಿಗ್‌ಬಾಸ್‌ Promo ಶೂಟ್‌ ವಿಡಿಯೋ ಲೀಕ್!
  • ಟ್ವೀಟ್‌ ಮೂಲಕ ನಟ ಸುದೀಪ್‌ ಸ್ಪಷ್ಟನೆ
Kiccha ‌Sudeep: ಬಿಗ್‌ಬಾಸ್‌ Promo ಶೂಟ್‌ ವಿಡಿಯೋ ಲೀಕ್! ಟ್ವೀಟ್‌ ಮೂಲಕ ನಟ ಸುದೀಪ್‌ ಸ್ಪಷ್ಟನೆ  title=
ಬಿಗ್‌ ಬಾಸ್‌

Bigg Boss Season 9 Promo: ಕನ್ನಡ ಕಿರುತೆರೆಯಲ್ಲಿ ಎಷ್ಟೇ ರಿಯಾಲಿಟಿ ಶೋಗಳು ಬಂದರೂ ಸಹ ಬಿಗ್‌ ಬಾಸ್‌ ಮಾತ್ರ ಎಂದಿಗೂ ಜನರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿಯೇ ಉಳಿದಿದೆ. ಈ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ಗಾಗಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಅದರಲ್ಲೂ ಈ ಬಾರಿ ಎರಡೆರಡು ಬಿಗ್‌ ಬಾಸ್‌ ಇರಲಿದ್ದು, ಎಲ್ಲರೂ ಸಂತಸಗೊಂಡಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿ ಸಹ ಕಿಚ್ಚ ಸುದೀಪ್‌ ಈ ಕಾರ್ಯಕ್ರಮವನ್ನು ಹೋಸ್ಟ್‌ ಮಾಡಲಿದ್ದಾರೆ. 

ಇದನ್ನೂ ಓದಿ: ಕ್ರೇಜಿಸ್ಟಾರ್ ಮನೆಯಲ್ಲಿ ಮದುವೆ ಸಂಭ್ರಮ.. ಹಸೆಮಣೆ ಏರಲಿದ್ದಾರೆ ಮನೋರಂಜನ್ ರವಿಚಂದ್ರನ್!

ಈ ನಡುವೆ ಬಿಗ್‌ ಬಾಸ್‌ ಆಯೋಜಕ ಪರಮೇಶ್ವರ್‌ ಗುಂಡ್ಕಲ್‌ ಹೊಸ ಅಪ್‌ಡೇಟ್‌ ನೀಡಿದ್ದು, ಜನರಲ್ಲಿ ಖುಷಿ ಹೆಚ್ಚಾಗಿದೆ. ಬಿಗ್‌ ಬಾಸ್‌ ಆರಂಭಕ್ಕೆ ಕಾಯುತ್ತಿರುವ ಜನರಿಗೆ ಪರಮೇಶ್ವರ್‌ ಗುಂಡ್ಕಲ್‌ ಸಂತಸದ ಸುದ್ದಿಯನ್ನು ನೀಡಿದ್ದಾರೆ. ಈಗಾಗಲೇ ಬಿಗ್‌ ಬಾಸ್‌ಗೆ ಸಿದ್ಧತೆ ಶುರುವಾಗಿದ್ದು, ಈ ಬಗ್ಗೆ ಕೆಲವು ಫೊಟೋಗಳನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 9 ಕ್ಕೆ ಭರದ ಸಿದ್ಧತೆ ನಡೆಯುತ್ತಿರುವ ಬಗ್ಗೆ ಪರಮೇಶ್ವರ್‌ ಗುಂಡ್ಕಲ್‌ ಮಾಹಿತಿ ಹಂಚಿಕೊಂಡಿದ್ದಾರೆ. 

 

 

ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್, ಪ್ರೋಮೋ ಶೂಟಿಂಗ್ ಮುಗಿದಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕಿಚ್ಚ ಸುದೀಪ್‌ ಜೊತೆ ನಿಂತಿರುವ ಫೋಟೋವೊಂದನ್ನು ಶೇರ್‌ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ ಬಾಸ್‌ ಸೀಸನ್‌ 9 ರ ಪ್ರೋಮೋ ಕೂಡ ಹೊರ ಬೀಳಲಿದೆ. ಕನ್ನಡದ ಈ ಹಿಂದೆ ಬಂದ ಎಲ್ಲ ಸೀಸನ್‌ಗಳ ಪ್ರೋಮೋಗಳು ಬಲು ವಿಶೇಷವಾಗಿದ್ದವು. ಅಂತೆಯೇ ಈ ಬಾರಿ ಯಾವ ರೀತಿಯಲ್ಲಿ ಪ್ರೋಮೋ ಮೂಡಿ ಬರಲಿದೆ ಎಂದು ಕಾದು ನೋಡಬೇಕಿದೆ. ಈ ಪ್ರೋಮೋ ಶೂಟ್‌ಗಾಗಿ ಕಿಚ್ಚ ಸುದೀಪ್ ಪ್ರತಿ ಬಾರಿಯೂ ವಿಭಿನ್ನವಾದ ಗೆಟಪ್ ಹಾಕಿದ್ದರು. ಈ ಸಲ ಸುದೀಪ್‌ ಯಾವ ರೀತಿ ಪ್ರೋಮೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 

 

 

ಇದನ್ನೂ ಓದಿ: Bigg Boss Kannada: ಶುರುವಾಯ್ತು ತಯಾರಿ.. ಪ್ರೋಮೋ ಶೂಟ್‌ನಲ್ಲಿ ಕಿಚ್ಚ ಸುದೀಪ್‌ ಭಾಗಿ

ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಇದೀಗ ಬಿಗ್‌ ಬಾಸ್‌ ಪ್ರೋಮೋ ಶೂಟ್‌ ವಿಡಿಯೋ ಲೀಕ್‌ ಆಗಿದೆ. ಎಲ್ಲಡೆ ಈ ವಿಡಿಯೋ ಸಖತ್‌ ವೈರಲ್‌ ಆಗಿದೆ. ಈ ಬಗ್ಗೆ ನಟ ಕಿಚ್ಚ ಸುದೀಪ್‌ ಸಹ ಟ್ವೀಟ್‌ ಮಾಡಿದ್ದು, "ಹೊಸ #BigBossKannada ಗಾಗಿ ಅತ್ಯಾಕರ್ಷಕ ಪ್ರೋಮೋ ಶೂಟ್. ಎಲ್ಲಾ ಪ್ರಯತ್ನಗಳಿಗಾಗಿ ಇಡೀ ತಂಡಕ್ಕೆ ಧನ್ಯವಾದಗಳು. ಚಿತ್ರೀಕರಣದಲ್ಲಿ ಭಾಗವಹಿಸಿದ ಎಲ್ಲ ಸುಂದರ ವ್ಯಕ್ತಿಗಳಿಗೂ ಧನ್ಯವಾದಗಳು. ಶೀಘ್ರದಲ್ಲೇ ಪ್ರೋಮೋ ನಿಮ್ಮೆದುರು ಬರಲಿದೆ.." ಎಂದು  ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News