Bigg Boss Kannada Season 10: ‘ಬಿಗ್‍ಬಾಸ್‍’ ಮನೆಯಲ್ಲಿ ನಾಮಿನೇಷನ್‌ ಹೀಟ್ ಶುರು!

Bigg Boss Kannada Season 10: ತನಿಷಾ ಪರ ಕಾರ್ತಿಕ್ ವಾದ ಮಾಡಿದ್ದಾರೆ. ಅದಕ್ಕೆ ವಿರುದ್ಧವಾಗಿ ವರ್ತೂರು ಸಂತೋಷ್, ‘ನಾವಿಲ್ಲಿ ತ್ಯಾಗಮೂರ್ತಿಗಳಾಗೋಕೆ ಬಂದಿಲ್ಲ. ತನಿಷಾನ ನಾನು ಬೇಕಂತ ಹೋಗಿ ತಳ್ಳಿಲ್ಲ. ಹಾಗಾಗಿ ಅವ್ರಿಗೆ ಇನ್ನೊಂದು ಚಾನ್ಸ್ ಸಿಗಲಿ ಎಂದೂ ಹೇಳಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ.

Written by - YASHODHA POOJARI | Edited by - Puttaraj K Alur | Last Updated : Dec 4, 2023, 03:49 PM IST
  • ‘ಬಿಗ್‌ಬಾಸ್’ ಸ್ಪರ್ಧಿಗಳ ಮುಖದಲ್ಲಿ ಇದೀಗ ನಾಮಿನೇಷನ್ ಹೀಟ್ ಎದ್ದು ಕಾಣುತ್ತಿದೆ
  • JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ನಾಮಿನೇಷನ್ ಝಲಕ್
  • ವರ್ತೂರ್ ಮಾತಿನಿಂದ ಖುಷಿಯಾಗಿ ಕೇಕೆ ಹಾಕಿದ ನಮ್ರತಾ, ಶಾಕ್ ಆದ ತನಿಷಾ
Bigg Boss Kannada Season 10: ‘ಬಿಗ್‍ಬಾಸ್‍’ ಮನೆಯಲ್ಲಿ ನಾಮಿನೇಷನ್‌ ಹೀಟ್ ಶುರು! title=
ವರ್ತೂರ್ ಹೇಳಿಕೆಯಿಂದ ತನಿಷಾಗೆ ಶಾಕ್!

ಬೆಂಗಳೂರು: ಬೆಳಿಗ್ಗೆಯಷ್ಟೇ ತಮಾಷೆಯ ಟಾಸ್ಕ್‌ನಲ್ಲಿ ನಕ್ಕು ನಲಿದಿದ್ದ ‘ಬಿಗ್‌ಬಾಸ್’ ಸ್ಪರ್ಧಿಗಳ ಮುಖದಲ್ಲಿ ಇದೀಗ ನಾಮಿನೇಷನ್ ಹೀಟ್ ಎದ್ದು ಕಾಣುತ್ತಿದೆ. ಅದರ ಒಂದು ಝಲಕ್‌ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿದೆ.

‘ವಿಶೇಷ ಅಧಿಕಾರದ ಅಂಗವಾಗಿ ನಾಮಿನೇಟ್ ಮಾಡುವ ಅಧಿಕಾರ ಸ್ನೇಹಿತ್ ಅವರಿಗಷ್ಟೇ ಇರುತ್ತದೆ’ ಎಂದು ಬಿಗ್‌ಬಾಸ್ ಹೇಳಿದ್ದಾರೆ. ವಿಶೇಷ ಅಧಿಕಾರದ ಆಸನದ ಮೇಲೆ ಸ್ಟೈಲಿಶ್ ಆಗಿ ಕೂತಿರುವ ಸ್ನೇಹಿತ್ ಅವರ ಎದುರು ಮನೆಯ ಸದಸ್ಯರು, ತಮ್ಮನ್ನು ಸೇವ್ ಮಾಡಿ ಎಂದು ಸ್ನೇಹಿತ್ ಅವರಿಗೆ ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: BBK 10: ಬಿಗ್‌ಬಾಸ್‌ನಲ್ಲಿ ಮಿಮಿಕ್ರಿ ಟಾಸ್ಕ್:‌ ತಮಾಷೆ ಹೋಗಿ ಅಮಾಸೆ ಆಗುತ್ತಾ ದೊಡ್ಮನೆಯ ಟಾಸ್ಕ್?

ತನಿಷಾ ಅವರ ಪರವಾಗಿ ಕಾರ್ತಿಕ್ ವಾದ ಮಾಡಿದ್ದಾರೆ. ಅದಕ್ಕೆ ವಿರುದ್ಧವಾಗಿ ವರ್ತೂರು ಸಂತೋಷ್ ಅವರು, ‘ನಾವಿಲ್ಲಿ ತ್ಯಾಗಮೂರ್ತಿಗಳಾಗೋಕೆ ಬಂದಿಲ್ಲ. ತನಿಷಾನ ನಾನು ಬೇಕಂತ ಹೋಗಿ ತಳ್ಳಿಲ್ಲ. ಹಾಗಾಗಿ ಅವ್ರಿಗೆ ಇನ್ನೊಂದು ಚಾನ್ಸ್ ಸಿಗಲಿ ಎಂದೂ ಹೇಳಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ.

ವರ್ತೂರ್ ಮಾತಿನಿಂದ ಖುಷಿಯಾಗಿ ನಮ್ರತಾ ಕೇಕೆ ಹಾಕಿದ್ದರೆ, ತನಿಷಾಗೆ ಶಾಕ್ ಆಗಿದೆ. ‘ವರ್ತೂರು ಅವರು ಮೊದಲ ದಿನದಿಂದಲೇ ಹೀಗೆ ಮಾತಾಡಿದ್ದರೆ ನಾನು ಒಪ್ಕೋತಾ ಇದ್ದೆ’ ಎಂದು ಕೋಪ ಮಾಡಿಕೊಂಡಿದ್ದಾರೆ. ಸ್ನೇಹಿತ್‌ ಕೈಗೆ ಸಿಕ್ಕಿರುವ ವಿಶೇಷ ಅಧಿಕಾರ ಹೇಗೆ ಕೆಲಸ ಮಾಡುತ್ತದೆ? ಯಾರ ನೆತ್ತಿ ಮೇಲೆ ತೂಗುಗತ್ತಿಯಾಗುತ್ತದೆ? ಯಾರಿಗೆ ಅಭಯಹಸ್ತವಾಗಿ ಬದಲಾಗುತ್ತದೆ? ಕಾದು ನೋಡಬೇಕಿದೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಈ ಗಂಡ ಹೆಂಡತಿಯರ ನಡುವಿರುವ ವಯಸ್ಸಿನ ಅಂತರ ಗೊತ್ತೇ!

ನೀವು ಇದೀಗ ಬಿಗ್‌ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannadaದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News