Lawyer Jagadish : ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಮನೆ ಸೇರಿರುವ ವಕೀಲ ಜಗದೀಶ್ ಪಡೆದಿದ್ದ ಲಾಯರ್ ಲೈಸೆನ್ಸ್ ಅನ್ನು ದೆಹಲಿ ಬಾರ್ ಕೌನ್ಸಿಲ್ ರದ್ದುಗೊಳಿಸಿದೆ. ಫೇಕ್ ಮಾರ್ಕ್ಸ್ ಕಾರ್ಡ್ ಕೊಟ್ಟು ಪದವಿ ಹಾಗೂ ಎಲ್‌ಎಲ್‌ಬಿ ಪದವಿ ಮಾಡಿ ಬಾರ್ ಕೌನ್ಸಿಲ್ ಅನುಮತಿ ಪಡೆದಿದ್ದರು ಎಂಬ ವಿಚಾರ ಬಹಿರಂಗವಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೊಡಿ..
ಹೌದು.. ಲಾಯರ್ ಜಗದೀಶ್ ಪಿಯುಸಿಯನ್ನೇ ಓದದೇ ನಕಲಿ ಮಾರ್ಕ್ಸ್ ಕಾರ್ಡ್ ಸೃಷ್ಟಿಸಿ, ಡಿಗ್ರಿ ಮಾಡಿದ್ದಾರೆ. ಅಲ್ಲದೆ, ಪದವಿ ಮೇಲೆ ಎಲ್‌ಎಲ್‌ಬಿ ಮಾಡಿ, ಬೆಂಗಳೂರಿನ ಬದಲು ದೆಹಲಿಗೆ ಹೋಗಿ ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ವಕೀಲಿಕೆ ಸನ್ನದು ಪಡೆದಿದ್ದಾರೆ.. ಹೀಗಾಗಿ ಅವರ ಬಾರ್ ಕೌನ್ಸಿಲ್ ಲೈಸೆನ್ಸ್ ರದ್ದತಿ ಕೋರಿ ಹಿಮಾಂಶು ಭಾಟಿ ಎನ್ನುವವರು ಕೌನ್ಸಿಲ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದನ್ನು ಪರಿಗಣಿಸಿದ ದೆಹಲಿ ಬಾರ್ ಕೌನ್ಸಿಲ್ ವಕೀಲ ಜಗದೀಶ್ ಅವರಿಗೆ ನೀಡದಲಾಗಿದ್ದ ಅನುಮತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿತ್ತು..
ಇದನ್ನೂ ಓದಿ:ಬಿಗ್‌ಬಾಸ್ ಮನೆಯಿಂದ ಲಾಯರ್ ಜಗದೀಶ್ ಔಟ್..!? ಕಿಚ್ಚ Vs ವಕೀಲ್ ವಾರ್..!!
ನಂತರ ಎಲ್ಲ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಯಿತು. 2024ರ ಏಪ್ರಿಲ್‌ನಲ್ಲಿ ನಡೆದ ಬಾರ್ ಕೌನ್ಸಿಲ್ ಸಭೆಯಲ್ಲಿ ಕೆ.ಎನ್. ಜಗದೀಶ್ ಕುಮಾರ್ ಅವರು ಸಲ್ಲಿಕೆ ಮಾಡಿದ ಪಿಯುಸಿ ಅಂಕಪಟ್ಟಿ ನಕಲಿ ಎಂದು ತಿಳಿದು ಬಂದಿತ್ತು. ಹೀಗಾಗಿ ಕೆ.ಎನ್ ಜಗದೀಶ್ ಕುಮಾರ್ ಅವರ ವಕೀಲಿಕೆ ಸನ್ನದು ಅನ್ನು ರದ್ದುಗೊಳಿಸಲಾಗಿದೆ ಎಂದು ಅಧಿಸೂಚನೆ ಹೊರಡಿಸಿದೆ.
ಇದೀಗ ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಈ ಕುರಿತ ದಾಖಲೆಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಅಲ್ಲದೆ, ʼBigg boss ಜಗದೀಶನ ಲಾ ಡಿಗ್ರಿ ಕ್ಯಾನ್ಸಲ್ ಆಗಿದೆ. ಆತನ 2nd PUC ಮಾರ್ಕ್ಸ್ ಕಾರ್ಡ್ ನಕಲಿ ಆಗಿರುವುದರಿಂದ, ನಂತರದ ಡಿಗ್ರಿಗಳು (ಕಾನೂನು ಡಿಗ್ರಿ ಸೇರಿ) ಮಾನ್ಯವಲ್ಲದಿದ್ದುದರಿಂದ ಆತನ ಸನ್ನದ್ದು ವಾಪಾಸ್ ಕೊಡುವಂತೆ ಬಾರ್ ಕೌನ್ಸಿಲ್ ಆದೇಶ ನೀಡಿದೆ. Don't call him lawyer shaeeb. It's an insult to advocates. ಎಂದು ಸಂಬರಗಿ ಬರೆದುಕೊಂಡಿದ್ದಾರೆ..
ಸಧ್ಯ ಜಗದೀಶ್ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ದೊಡ್ಮನೆ ಸೇರಿದ್ದಾರೆ. ಅಲ್ಲದೆ, ಬಿಗ್ ಬಾಸ್ ವಿರುದ್ಧ ತಮ್ಮದೇ ಮಾತಿನ ದಾಟಿ ಗುಡುಗಿರುವ ಅವರು, ನನ್ನನ್ನು ಹೊರಗೆ ಕಳಿಸಿದರೆ.. ಬಿಗ್ ಬಾಸ್ ಮನೆಯಲ್ಲಿ ನಡೆಸುವ ಎಲ್ಲಾ ರಹಸ್ಯಗಳನ್ನು ಬಹಿರಂಗಗೊಳಿಸುತ್ತೇನೆ.. ಅದು ಹೇಗೆ ಕರ್ನಾಟಕದಲ್ಲಿ ಬಿಗ್‌ಬಾಸ್ ಶೋ ನಡೆಸುತ್ತೀರಿ ಅಂತ ನೋಡ್ತೀನಿ ಅಂತ ಎಂದು ಬೆದರಿಕೆ ಹಾಕಿದ್ದಾರೆ.
ಆದರೆ ಇದೀಗ ಪ್ರಶಾಂತ್ ಸಂಬರಗಿ ಅವರು ಜಗದೀಶ್ ಲಾಯರ್ ಅಲ್ಲ.. ಅವರನ್ನ ವಕೀಲರು ಅಂತ ಕರೆಯಬೇಡಿ.. ಅಂತ ದಾಖಲೆಗಳನ್ನು ಹಂಚಿಕೊಂಡಿದ್ದಾರೆ.. ಅಲ್ಲದೆ, ಬಿಗ್ ಬಾಸ್‌ಗೆ ಅವಾಜ್ ಹಾಕಿರುವ ಜಗದೀಶ್ ಈ ವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಅವರ ಮಾತುಗಳನ್ನು ಎದುರಿಸಬೇಕಾಗುತ್ತದೆ.. ಒಟ್ಟಿನಲ್ಲಿ ವಾರದ ಕೊನೆಗೆ ದೊಡ್ಮನೆಯಲ್ಲಿ ಏನಾಗುತ್ತೆ ಎನ್ನುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.