Bigg Boss Kannada OTT : ಆರ್ಯವರ್ಧನ್‌ ಗುರೂಜಿ ಬಿಗ್‌ಬಾಸ್‌ ಮನೆಯಿಂದ ಹೊರಗೆ ಹೋ...

ಈ ವೇಳೆ ಭಾರಿ ಕುತೂಹಲ ಕೆರಳಿಸಿದ್ದ ಆರ್ಯವರ್ಧನ್‌ ಗುರೂಜಿ ಎಲಿಮಿನೇಷನ್‌ ವಿಚಾರ ದೊಡ್ಡ ಚರ್ಚೆಗೆ ಕಾರಣವಾಯಿತು. ಆದರೆ ಅಂತಿಮವಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಡಿಫರೆಂಟ್‌ ರಿಸಲ್ಟ್‌ ಕೊಟ್ಟರು.

Written by - Malathesha M | Last Updated : Aug 27, 2022, 02:11 PM IST
  • 'ಬಿಗ್‌ಬಾಸ್‌' ಓಟಿಟಿ ಸೀಸನ್-1‌ನಲ್ಲಿ ಇಂದು ಎಲಿಮಿನೇಷನ್‌ ನಡೆಯಿತು
  • ಭಾರಿ ಕುತೂಹಲ ಕೆರಳಿಸಿದ್ದ ಆರ್ಯವರ್ಧನ್‌ ಗುರೂಜಿ ಎಲಿಮಿನೇಷನ್‌
  • ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಡಿಫರೆಂಟ್‌ ರಿಸಲ್ಟ್‌ ಕೊಟ್ಟರು.
Bigg Boss Kannada OTT : ಆರ್ಯವರ್ಧನ್‌ ಗುರೂಜಿ ಬಿಗ್‌ಬಾಸ್‌ ಮನೆಯಿಂದ ಹೊರಗೆ ಹೋ... title=

ಇಷ್ಟುದಿನ ಟೆಲಿವಿಷನ್‌ನಲ್ಲಿ 'ಬಿಗ್‌ಬಾಸ್‌.. ಬಿಗ್‌ಬಾಸ್‌..' ಅಂತಾ ಸದ್ದು ಕೇಳಿದ್ದ ಪ್ರೇಕ್ಷಕರಿಗೆ ಇದೀಗ ಕೈಬೆರಳಿನ ತುದಿಯಲ್ಲೇ 'ಬಿಗ್‌ಬಾಸ್‌' ಶೋ ಸಿಗುತ್ತಿದೆ. 'ಬಿಗ್‌ಬಾಸ್‌' ಓಟಿಟಿ ಸೀಸನ್-1‌ನಲ್ಲಿ ಇಂದು ಎಲಿಮಿನೇಷನ್‌ ನಡೆಯಿತು. ಈ ವೇಳೆ ಭಾರಿ ಕುತೂಹಲ ಕೆರಳಿಸಿದ್ದ ಆರ್ಯವರ್ಧನ್‌ ಗುರೂಜಿ ಎಲಿಮಿನೇಷನ್‌ ವಿಚಾರ ದೊಡ್ಡ ಚರ್ಚೆಗೆ ಕಾರಣವಾಯಿತು. ಆದರೆ ಅಂತಿಮವಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಡಿಫರೆಂಟ್‌ ರಿಸಲ್ಟ್‌ ಕೊಟ್ಟರು.

ಹೌದು, ಆರ್ಯವರ್ಧನ್‌ ಗುರೂಜಿ ಬಿಗ್‌ಬಾಸ್‌ ಮನೆಯಿಂದ ಹೊರಗೆ ಹೋಗಿಲ್ಲ. ಬದಲಾಗಿ ಈ ವಾರ ಆರ್ಯವರ್ಧನ್‌ ಗುರೂಜಿ ಸೇಫ್‌ ಆಗಿ ಉಳಿದಿದ್ದಾರೆ. ಆರ್ಯವರ್ಧನ್‌ ಗುರೂಜಿ ಎಲ್ಲರ ಜೊತೆ ಬೆರೆಯುತ್ತಾ, ಟಾಸ್ಕ್‌ ಬಂದಾಗ ಆಕ್ಟಿವ್‌ ಆಗಿ ಸಖತ್‌ ಎಂಟರ್‌ಟೈನ್‌ ಮಾಡುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಎಲ್ಲರ ಗಮನವಿತ್ತು. ಆದರೆ ನಾಮಿನೇಷನ್‌ ಆಗಿರುವ ಹಿನ್ನೆಲೆ ಆರ್ಯವರ್ಧನ್‌ ಗುರೂಜಿ ಎಲಿಮಿನೇಷಟ್‌ ಆಗಬಹುದು ಎನ್ನಲಾಗಿತ್ತು. ಆದರೆ ಕಿಚ್ಚ ಸುದೀಪ್‌ ಅವರು ತುಂಬಾ ವಿಶಿಷ್ಟವಾದ ರಿಸಲ್ಟ್‌ ಕೊಟ್ಟರು.

ಇದನ್ನೂ ಓದಿ : Bigg Boss Kannada OTT: ಬಿಗ್‌ಬಾಸ್‌ ಮನೆಯಿಂದ ಸೋನು ಗೌಡ ಈ ವಾರ ಔಟ್..?

ಸಿಕ್ಕಾಪಟ್ಟೆ ಟ್ರೋಲ್

ಬಿಗ್‌ಬಾಸ್‌ ಶೋ ಆರಂಭಕ್ಕೂ ಮೊದಲೇ ಆರ್ಯವರ್ಧನ್‌ ಗುರೂಜಿ ಸಖತ್‌ ಚರ್ಚೆಯಲ್ಲಿದ್ದರು. ಅದರಲ್ಲೂ ಟ್ರೋಲರ್ಸ್‌ ಸೇರಿದಂತೆ ಸೋಷಿಯಲ್‌ ಮೀಡಿಯಾದಲ್ಲಿ ಆರ್ಯವರ್ಧನ್‌ ಗುರೂಜಿ ಸಿಕ್ಕಾಪಟ್ಟೆ ಟಾರ್ಗೆಟ್‌ ಆಗ್ತಾ ಇದ್ದರು. ಇದೀಗ ಬಿಗ್‌ಬಾಸ್‌ ಮನೆ ಸೇರಿರುವ ಅವರು ಎಲ್ಲರ ಮನಸ್ಸನ್ನೂ ಗೆಲ್ಲುತ್ತಿದ್ದಾರೆ. ಇಂದು ನಡೆದ ಎಲಿಮಿನೇಷನ್‌ ರೌಂಡ್‌ನಲ್ಲಿ ಗೆದ್ದಿದ್ದಾರೆ. ಮುಂದಿನ ಒಂದು ವಾರದ ಮಟ್ಟಿಗೆ ಸೇಫ್‌ ಆಗಿದ್ದು, ಮುಂದಿನ ವಾರ ಯಾವ ರೀತಿಯ ರಿಸಲ್ಟ್‌ ಬರುತ್ತೆ ಕಾದು ನೋಡಬೇಕಿದೆ.

ಬಿಗ್‌ಬಾಸ್‌ ಓಟಿಟಿ ಸೀಸನ್-1‌ ಕೇವಲ 42 ದಿನಗಳ ಕಾಲ ನಡೆಯಲಿದೆ. ಇದೇ ಕಾರಣಕ್ಕೆ 16 ಸ್ಪರ್ಧಿಗಳಲ್ಲಿ ಯಾರು ಹೊರಗೆ ಹೋಗುತ್ತಾರೆ ಅನ್ನೋದು ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಆರ್ಯವರ್ಧನ್‌ ಗುರೂಜಿ ಸೇಫ್‌ ಆಗಿದ್ದು, ಸೋನು ಶ್ರೀನಿವಾಸ್‌ ಗೌಡ ಉಳಿತಾರಾ ಅಥವಾ ಎಲಿಮಿನೇಟ್‌ ಆಗ್ತಾರಾ ಅನ್ನೋ ವಿಚಾರ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇವತ್ತೇ ಇದಕ್ಕೆಲ್ಲಾ ಬಿಗ್‌ಬಾಸ್‌ ಮನೆಯಲ್ಲಿ ಪಕ್ಕಾ ಉತ್ತರ ಸಿಗಲಿದೆ.

ಇದನ್ನೂ ಓದಿ : BiggBoss OTT: ಸಾನಿಯಾ ಬೆನ್ನುಬಿಡುತ್ತಿಲ್ಲ ರೂಪೇಶ್! ಬಿಗ್ ಮನೆಯಲ್ಲಿ ಮತ್ತೊಂದು ಪ್ರೇಮಪುರಾಣ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News