BiggBoss Kannada: ಫ್ರೆಂಡ್‌ಷಿಪ್‌ ಬ್ರೇಕಪ್! ಸಂಗೀತಾ ಹಾರ್ಟ್‌ ಬ್ರೋಕಪ್

ತನಿಷಾ, ‘ನಾವು ಎದುರಾಳಿ ತಂಡದಿಂದ ಸಿರಿ ಅವರನ್ನು ಸೇವ್ ಮಾಡುತ್ತೇವೆ’ ಎಂದು ಘೋಷಿಸಿದರು. ಅದುವರೆಗೆ ನಗುನಗುತ್ತ ಕುಣಿದಾಡುತ್ತಿದ್ದ ಸಂಗೀತಾ ಮುಖದಲ್ಲಿ ಒಮ್ಮೆಲೇ ದುಮ್ಮಾನ ಕಾಣಿಸಿಕೊಂಡಿತ್ತು. ಮೇಲ್ನೋಟಕ್ಕೆ ಆ ಕ್ಷಣದಲ್ಲಿ ಅದು ಮುಗಿದು ಹೋದಂತೆ ಕಂಡರೂ ಸಂಗೀತಾ ಮನಸಲ್ಲಿ ಈ ವಿಷಯ ಬೆಳಯುತ್ತಲೇ ಇದ್ದ ಹಾಗಿದೆ.

Written by - Yashaswini V | Last Updated : Nov 16, 2023, 10:30 AM IST
  • ಇಂದಿನ ಪ್ರೋಮೊದಲ್ಲಿ ಸಂಗೀತಾ ಮತ್ತು ತನಿಷಾ ಪರಸ್ಪರ ವಾದ ಮಾಡಿಕೊಳ್ಳುತ್ತಿರುವ, ಕೊನೆಯಲ್ಲಿ ಸಂಗೀತಾ, ‘ಕಿರುಚಬೇಡಿ ತನಿಷಾ’ ಎಂದು ಗಟ್ಟಿಯಾಗಿ ಹೇಳಿದ್ದರ ವಿಷುವಲ್ಸ್ ಇದೆ.
  • ಒಂದು ಕಡೆ ಸಂಗೀತಾ ಕಾರ್ತಿಕ್ ಬಳಿ, ‘ನಿಮ್ಮ ಕೈಯಲ್ಲಿ ನನ್ನನ್ನು ಸೇವ್ ಮಾಡುವ ಚಾನ್ಸ್ ಇತ್ತು’ ಎಂದು ಹೇಳಿದ್ದಾರೆ.
  • ಇನ್ನೊಂದೆಡೆಗೆ ತನಿಷಾ ಬಳಿ, ‘ನೀವು ನನ್ನನ್ನ ಸೇವ್ ಮಾಡ್ಲಿಲ್ಲ’ ಎಂದೂ ಹೇಳಿದ್ದಾರೆ.
BiggBoss Kannada: ಫ್ರೆಂಡ್‌ಷಿಪ್‌ ಬ್ರೇಕಪ್! ಸಂಗೀತಾ ಹಾರ್ಟ್‌ ಬ್ರೋಕಪ್ title=

ಬಿಗ್‌ಬಾಸ್‌ ಕನ್ನಡ ಈ ಸೀಸನ್‌ ಆರಂಭದಿಂದಲೂ ಒಂದು ಮನ ಮೂರು ದೇಹ ಅನ್ನುವಂತಿದ್ದವರು ಸಂಗೀತಾ-ಕಾರ್ತಿಕ್ ಮತ್ತು ತನಿಷಾ. ಹಲವು ಸಂಕಷ್ಟದ ಸಂದರ್ಭಗಳಲ್ಲಿಯೂ ಮೂವರೂ ಒಬ್ಬರಿಗೊಬ್ಬರು ಹೆಗಲೆಣೆಯಾಗಿ ನಿಂತುಕೊಂಡಿದ್ದರು. ಪ್ರತಿಸ್ಪರ್ಧಿಗಳನ್ನು ಒಟ್ಟಾಗಿ ಎದುರಿಸಿದ್ದರು. ಸಂಗೀತಾ ಜೈಲಿಗೆ ಹೋದ ಸಂದರ್ಭದಲ್ಲಂತೂ ಕಾರ್ತಿಕ್, ‘ನಾವು ಮೂರು ಜನರೂ ಈ ಮನೆಗೆ ಬಂದ ದಿನದಿಂದಲೂ ಒಟ್ಟಿಗಿದ್ದೇವೆ. ಮುಂದೆಯೂ ಒಟ್ಟಿಗಿರುತ್ತೇವೆ. ಫ್ರೆಂಡ್‌ಗೆ ತೊಂದರೆಯಾದಾಗ ಅವರನ್ನು ಬೆಂಬಲಿಸುವುದು ನನ್ನ ಕರ್ತವ್ಯ. ಅವರ ಜೊತೆ ನಾನು ನಿಂತೇ ನಿಲ್ಲುತ್ತೇನೆ’ ಎಂದು ಗಟ್ಟಿಯಾಗಿ ಹೇಳಿದ್ದರು. 
ಆದರೆ ಈಗ ಈ ಮೂವರ ಫ್ರೆಂಡ್‌ಷಿಪ್‌ ಗಾಳಿಪಟದ ಸೂತ್ರ ಹರಿದಂತಿದೆ. 

ಹೌದು, ಇತ್ತೀಚೆಗೆ JioCinema ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಈ ಮೂವರ ನಡುವಿನ ಭಿನ್ನಾಭಿಪ್ರಾಯ ಸ್ಪಷ್ಟವಾಗಿಯೇ ಜಾಹೀರಾಗಿದೆ. ನಿನ್ನೆಯ ಎಲಿಮಿನೇಷನ್‌ನ ಲೂಡೋ ಟಾಸ್ಕ್‌ನಲ್ಲಿ ಒಂದು ಹಂತದಲ್ಲಿ ಕಾರ್ತಿಕ್ ಮತ್ತು ತನಿಷಾಗೆ ಎದುರಾಳಿ ತಂಡದ ಒಬ್ಬರನ್ನು ಸೇವ್ ಮಾಡುವ ಅವಕಾಶ ಸಿಕ್ಕಿತ್ತು. ಅವರು ವರ್ತೂರು ಸಂತೋಷ್ ಅವರ ಜೊತೆಗೂಡಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಎದುರಾಳಿ ತಂಡದಲ್ಲಿದ್ದ ಸಂಗೀತಾ, ತನ್ನನ್ನೇ ಸೇವ್ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. 
ಆದರೆ ಆದದ್ದೇ ಬೇರೆ! 

ತನಿಷಾ, ‘ನಾವು ಎದುರಾಳಿ ತಂಡದಿಂದ ಸಿರಿ ಅವರನ್ನು ಸೇವ್ ಮಾಡುತ್ತೇವೆ’ ಎಂದು ಘೋಷಿಸಿದರು. ಅದುವರೆಗೆ ನಗುನಗುತ್ತ ಕುಣಿದಾಡುತ್ತಿದ್ದ ಸಂಗೀತಾ ಮುಖದಲ್ಲಿ ಒಮ್ಮೆಲೇ ದುಮ್ಮಾನ ಕಾಣಿಸಿಕೊಂಡಿತ್ತು. ಮೇಲ್ನೋಟಕ್ಕೆ ಆ ಕ್ಷಣದಲ್ಲಿ ಅದು ಮುಗಿದು ಹೋದಂತೆ ಕಂಡರೂ ಸಂಗೀತಾ ಮನಸಲ್ಲಿ ಈ ವಿಷಯ ಬೆಳಯುತ್ತಲೇ ಇದ್ದ ಹಾಗಿದೆ.

ಇದನ್ನೂ ಓದಿ- BBK10: "ಅಪ್ಪನನ್ನು ನೋಡ್ಬೇಕು, ತಾಯಿ ಹೇಗಿದ್ದಾರೆ ತಿಳಿಯಬೇಕು": ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್​!

ಇಂದಿನ ಪ್ರೋಮೊದಲ್ಲಿ ಸಂಗೀತಾ ಮತ್ತು ತನಿಷಾ ಪರಸ್ಪರ ವಾದ ಮಾಡಿಕೊಳ್ಳುತ್ತಿರುವ, ಕೊನೆಯಲ್ಲಿ ಸಂಗೀತಾ, ‘ಕಿರುಚಬೇಡಿ ತನಿಷಾ’ ಎಂದು ಗಟ್ಟಿಯಾಗಿ ಹೇಳಿದ್ದರ ವಿಷುವಲ್ಸ್ ಇದೆ. ಒಂದು ಕಡೆ ಸಂಗೀತಾ ಕಾರ್ತಿಕ್ ಬಳಿ, ‘ನಿಮ್ಮ ಕೈಯಲ್ಲಿ ನನ್ನನ್ನು ಸೇವ್ ಮಾಡುವ ಚಾನ್ಸ್ ಇತ್ತು’ ಎಂದು ಹೇಳಿದ್ದಾರೆ. ಇನ್ನೊಂದೆಡೆಗೆ ತನಿಷಾ ಬಳಿ, ‘ನೀವು ನನ್ನನ್ನ ಸೇವ್ ಮಾಡ್ಲಿಲ್ಲ’ ಎಂದೂ ಹೇಳಿದ್ದಾರೆ.

ಈ ಚರ್ಚೆಯಲ್ಲಿ ತನಿಷಾ, ‘ವರ್ತೂರು ಅವರು ಸಂಗೀತಾನ ಸೇವ್ ಮಾಡೋದು ಬೇಡ ಅಂತ ಹೇಳಿದ್ರು’ ಎಂದು ಹೇಳಿದ್ದಾರೆ. ಸಂಗೀತಾ ನೇರವಾಗಿ ವರ್ತೂರ್ ಬಳಿ ವಿಚಾರಿಸಿದಾಗ, ‘ಸಂಗೀತಾ ಅನ್ನೋ ಹೆಸರೇ ಬಂದಿರಲಿಲ್ಲ’ ಎಂದಿದ್ದಾರೆ. ಅಲ್ಲಿಗೆ ಸಂಗೀತಾಗೆ ತನಿಷಾ ಸುಳ್ಳು ಹೇಳಿದ್ದಾರೆ ಎಂಬುದು ಗೊತ್ತಾಗಿದೆ.

'ನಮ್ಮಲ್ಲೊಂದು ಫ್ರೆಂಡ್‌ಷಿಪ್ ಇತ್ತು. ಒಂದು ನಂಬಿಕೆ ಇತ್ತು. ಆ ನಂಬಿಕೆ ಬ್ರೇಕ್ ಆಗಿದೆ' ಎಂದು ಹೇಳಿ ತನಿಷಾ ಮತ್ತು ಕಾರ್ತಿಕ್ ಜೊತೆಗಿನ ಫ್ರೆಂಡ್‌ಷಿಪ್ ಅನ್ನು ಕೊನೆಗೊಳಿಸಿದ್ದಾರೆ. ಯಾವಾಗಲೂ ಒಬ್ಬರಿಗೊಬ್ಬರು ಗಟ್ಟಿಯಾಗಿ ನಿಂತಿದ್ದ ಈ ಮೂವರ ಫ್ರೆಂಡ್‌ಷಿಪ್‌ ಅಲ್ಲಿಗೆ ಕೊನೆಗೊಂಡಂತಾಗಿದೆ. ಇದರಿಂದಾಗಿ ಇಡೀ ಮನೆಯ ಸಮತೋಲನವೇ ಹೆಚ್ಚೂಕಮ್ಮಿ ಆಗುವ ಸಾಧ್ಯತೆಯಂತೂ ಇದ್ದೇ ಇದೆ. 

ಇದನ್ನೂ ಓದಿ- ಪ್ರತಾಪ್ ನನ್ನು ಹೊಗಳಿದ ವಿನಯ್!!

ಹಾಗಾದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಏನಾಗಬಹುದು? ಸ್ನೇಹಿತರನ್ನು ಕಳೆದುಕೊಂಡ ಸಂಗೀತಾ ಪುಟಿದೇಳುತ್ತಾರಾ? ಅಥವಾ ಕುಸಿದುಹೋಗುತ್ತಾರಾ? ಇಷ್ಟು ದಿನ ಒಟ್ಟಿಗಿದ್ದ ಸ್ನೇಹಿತೆಯನ್ನು ತನಿಷಾ ಮತ್ತು ಕಾರ್ತಿಕ್ ಅಷ್ಟು ಸುಲಭಕ್ಕೆ ಬಿಟ್ಟುಕೊಡುತ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ JioCinemaದಲ್ಲಿ 24ಗಂಟೆ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News