Bisilu Kudure: 50 ದಿನ ಪೂರೈಸಿದ ಹೃದಯ ಶಿವ ನಿರ್ದೇಶನದ ʻಬಿಸಿಲು ಕುದುರೆʼ

Bisilu Kudure: ಹೃದಯ ಶಿವ ನಿರ್ದೇಶನದ ಬಿಸಿಲು ಕುದುರೆ ಸಿನಿಮಾ ಇದೀಗ ಐವತ್ತು ದಿನಗಳನ್ನು ಕಂಪ್ಲೀಟ್‌ ಮಾಡಿದೆ. ಕಾಡಂಚಿನ ರೈತನ ಕರುಣಾಜನಕ ಕಥೆಯನ್ನು ನೋಡಿ ಜನರು ಮೆಚ್ಚಿಕೊಂಡಿದ್ದಾರೆ. ಚಿತ್ರತಂಡ ಸಿನಿಮಾದ ಯಶಸ್ಸನ್ನು ಸೆಲಿಬ್ರೇಟ್‌ ಮಾಡಿದೆ. 

Written by - Chetana Devarmani | Last Updated : Jun 14, 2023, 10:26 AM IST
  • ಹೃದಯ ಶಿವ ನಿರ್ದೇಶನದ ಬಿಸಿಲು ಕುದುರೆ ಸಿನಿಮಾ
  • 50 ದಿನ ಪೂರೈಸಿದ ಬಿಸಿಲು ಕುದುರೆ
  • ಕಾಡಂಚಿನ ರೈತನ ಕರುಣಾಜನಕ ಕಥೆ
Bisilu Kudure: 50 ದಿನ ಪೂರೈಸಿದ ಹೃದಯ ಶಿವ ನಿರ್ದೇಶನದ ʻಬಿಸಿಲು ಕುದುರೆʼ  title=

Bisilu Kudure: ಹೃದಯ ಶಿವ ಎಂದರೆ ನೆನಪಗೋದು ಅವರು ಬರೆದ ಸುಂದರ ಹಾಡುಗಳು. ಕನ್ನಡದ ಸೂಪರ್ ಹಿಟ್ ಚಿತ್ರಗಳಿಗೆ ಸೊಗಸಾದ ಹಾಡುಗಳನ್ನು ಬರೆದಿರುವ ಹೃದಯ ಶಿವ ಬಿಸಿಲು ಕುದುರೆ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ಏಪ್ರಿಲ್ 21 ರಂದು ರಿಲೀಸ್‌ ಆಗಿತ್ತು. ಬಿಸಿಲು ಕುದುರೆ ಸಿನಿಮಾ ಈಗ ಐವತ್ತು ದಿನಗಳನ್ನು ಪೂರೈಸಿದೆ. ಈ ಸಂತಸವನ್ನು ಚಿತ್ರತಂಡ 

ಅರಣ್ಯದಂಚಿನಲ್ಲಿ ತುಂಡುಭೂಮಿ ಹೊಂದಿರುವ ರೈತನ ಪಾಡು ಏನಾಗುತ್ತದೆ ಎಂಬ ಕುರಿತಾದ ಕಥೆಯನ್ನು ಈ ಸಿನಿಮಾ ಹೊಂದಿದೆ. ಈ ಕಾಡಂಚಿನ ರೈತನ ಕರುಣಾಜನಕ ಕಥೆಯನ್ನು ನೋಡಿ ಜನರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ರಾಜ್ಯದ ವಿವಿಧ ಕಡೆ ಬಿಡುಗಡೆಯಾಗಿ ಪ್ರದರ್ಶನ ಕಂಡಿತ್ತು. ಇದೀಗ ಐವತ್ತನೇ ದಿನ ಪೂರೈಸಿದ ಸಂಭ್ರಮದಲ್ಲಿದೆ. ತೆರೆ ಮೇಲೆ ಮಿಂಚಿರುವ ಸಿನಿಮಾ ಬಿಸಿಲು ಕುದುರೆ ಶೀಘ್ರದಲ್ಲೇ ಓಟಿಟಿಯಲ್ಲೂ ರಿಲೀಸ್‌ ಆಗಲಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನಿರ್ದೇಶಕ ಹೃದಯ ಶಿವ ಧನ್ಯವಾದ ತಿಳಿಸಿದ್ದಾರೆ. ಸದ್ಯದಲ್ಲೇ ಹೃದಯ ಶಿವ ನಿರ್ದೇಶನದಲ್ಲಿ ಮತ್ತೆರಡು ಹೊಸ ಚಿತ್ರಗಳ ಶೂಟಿಂಗ್‌ ಶುರುವಾಗಲಿದೆ. ಅದರಲ್ಲಿ ಒಂದು ಬಿಗ್ ಬಜೆಟ್ ಸಿನಿಮಾ ಆಗಿರಲಿದೆ ಎಂದು ನಿರ್ದೇಶಕ ಹೃದಯ ಶಿವ ತಿಳಿಸಿದ್ದಾರೆ.

ಇದನ್ನೂ ಓದಿ: ಗುಟ್ಟಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟ ಪ್ರಥಮ್‌; ಕಾರಣವೇನು ಗೊತ್ತಾ?

ಐವತ್ತನೇ ದಿನದ ಸೆಲಿಬೆಷನ್‌ ವೇಳೆ ಮಾತನಾಡಿದ ನಟ ಸಂಪತ್ ಮೈತ್ರೇಯ, ನಾನು ಚಿತ್ರದ ಕುರಿತು ಬಿಡುಗಡೆ ಪೂರ್ವದಲ್ಲೇ ಸಾಕಷ್ಟು ಮಾತನಾಡಿದ್ದೇನೆ. ಈಗ ಐವತ್ತನೇ ದಿನ ಪೂರೈಸಿರುವುದು ಸಂತೋಷ ಉಂಟುಮಾಡಿದೆ. ಅದನ್ನು ನಾನು ಸಂಭ್ರಮಿಸುತ್ತಿದ್ದೇನೆ ಎಂದು ತಿಳಿಸಿದರು. 

ಸುನೀತಾ, ಕರಿಸುಬ್ಬು, ವಿಕ್ಚರಿ ವಾಸು, ಸಂಗೀತ ನಿರ್ದೇಶಕ ಇಮ್ತಿಯಾಜ್ ಸುಲ್ತಾನ್, ಛಾಯಾಗ್ರಾಹಕ ನಾಗಾರ್ಜುನ, ಸಂಕಲನಕಾರ ಕೆಂಪರಾಜ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಬಿಸಿಲು ಕುದರೆ ಸಕ್ಸಸ್‌ ಬಗ್ಗೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡರು. ಇದೇ ವೇಳೆ ಡೈರೆಕ್ಟರ್‌ ಹೃದಯ ಶಿವ ಚಿತ್ರತಂಡದವರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಿದರು.

ಇದನ್ನೂ ಓದಿ:  ವಿಜಯ್ ವರ್ಮಾ ಜೊತೆಗಿನ ಸಂಬಂಧವನ್ನು ಖಚಿತಪಡಿಸಿದ ತಮನ್ನಾ ಭಾಟಿಯಾ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News