Tamannaah Bhatia and Vijay Varma : ತಮನ್ನಾ ಭಾಟಿಯಾ ಕೊನೆಗೂ ವಿಜಯ್ ವರ್ಮಾ ಅವರೊಂದಿಗಿನ ಸಂಬಂಧವನ್ನು ಖಚಿತಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, "ವಿಜಯ್ ನನ್ನ ಬಗ್ಗೆ ತುಂಬಾ ಕಾಳಜಿ ವಹಿಸುವ ವ್ಯಕ್ತಿ. ಅವರು ನನ್ನ ಸಂತೋಷದ ಗೂಡು" ಎಂದು ತಮನ್ನಾ ಭಾಟಿಯಾ ಹೇಳಿದ್ದಾರೆ.
ಫಿಲ್ಮ್ ಕಂಪ್ಯಾನಿಯನ್ ಜೊತೆಗಿನ ಸಂದರ್ಶನದಲ್ಲಿ ವಿಜಯ್ ಬಗ್ಗೆ ಮಾತನಾಡಿದ ತಮನ್ನಾ, "ನಿಮ್ಮ ಸಹ ನಟ ಎಂಬ ಕಾರಣ ಯಾರೂ ಒಬ್ಬ ವ್ಯಕ್ತಿಯನ್ನು ಆಕರ್ಷಿಸಲು ಸಾಧ್ಯವಿಲ್ಲ. ನಾನು ಅನೇಕ ಸಹ-ನಟರ ಜೊತೆ ಕೆಲಸ ಮಾಡಿರುವೆ. ಯಾರಿಗಾದರೂ ಬೀಳಬೇಕಾದರೆ, ಆ ಭಾವನೆ ಅನುಭವಿಸಬೇಕಾದರೆ ಅದು ಖಂಡಿತವಾಗಿಯೂ ಹೆಚ್ಚು ವೈಯಕ್ತಿಕವಾಗಿರುತ್ತದೆ. ಒಟ್ಟಿಗೆ ನಟಿಸುವುದು ಇದಕ್ಕೆ ಕಾರಣ ಎಂದು ನನಗೆ ಅನಿಸಲ್ಲ" ಎಂದಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಅಂಬಿ ಪುತ್ರನ ಬೀಗರೂಟ.. 15 ಎಕರೆ ಪ್ರದೇಶದಲ್ಲಿ ಭರ್ಜರಿ ಸಿದ್ಧತೆ!
"ಅವರು ನಾನು ನಿಜವಾಗಿಯೂ ಎದುರು ನೋಡುತ್ತಿದ್ದ ವ್ಯಕ್ತಿ. ಅವರು ನನ್ನ ಜತೆ ಬಾಂಧವ್ಯ ಹೊಂದಿದ್ದ ವ್ಯಕ್ತಿ. ನೀವು ಕೇವಲ ನೀವೇ ಆಗಿರಲು ಮೊಟ್ಟೆಯ ಚಿಪ್ಪಿನ ಮೇಲೆ ನಡೆಯಬೇಕಾಗಿಲ್ಲ. ಒಬ್ಬ ಮಹಿಳೆ ತನ್ನ ಸಂಪೂರ್ಣ ಜೀವನವನ್ನು ಯಾರಿಗಾದರೂ ಬದಲಾಯಿಸಬೇಕಾಗುತ್ತದೆ. ಸಂಗಾತಿಯನ್ನು ಹುಡುಕುವಾಗ ಆ ವ್ಯಕ್ತಿಯ ಆಸೆಯನ್ನು ಪೂರೈಸುವ ಅನೇಕ ಕೆಲಸಗಳನ್ನು ಮಾಡಬೇಕಾಗಬಹುದು. ಆದರೆ ನಾನು ನನ್ನದೇ ಜಗತ್ತನ್ನು ಸೃಷ್ಟಿಸಿಕೊಂಡವಳು. ಇಲ್ಲಿ ನಾನು ಏನನ್ನೂ ಮಾಡದೆಯೇ ಆ ಜಗತ್ತನ್ನು ಅರ್ಥಮಾಡಿಕೊಂಡ ವ್ಯಕ್ತಿ ಇದ್ದಾರೆ" ಎಂದು ತಮನ್ನಾ ಹೇಳಿದ್ದಾರೆ.
ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಅವರ ಡೇಟಿಂಗ್ ವದಂತಿಗಳು ಅನೇಕ ದಿನಗಳಿಂದ ಹರಿದಾಡುತ್ತಿವೆ. ಗೋವಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪರಸ್ಪರ ಚುಂಬಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಇಬ್ಬರ ಡೇಟಿಂಗ್ ಊಹಾಪೋಹಗಳುಇಗೆ ಪುಷ್ಠಿ ಸಿಕ್ಕಂತಾಯಿತು. ತಮನ್ನಾ ಮತ್ತು ವಿಜಯ್ ಲಸ್ಟ್ ಸ್ಟೋರೀಸ್ 2 ನಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದು ಜೂನ್ 29 ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗಲಿದೆ.
ಇದನ್ನೂ ಓದಿ: ಇವರೇ ನೋಡಿ ದಕ್ಷಿಣ ಭಾರತದ ಶ್ರೀಮಂತ ನಟಿ.. ಸಮಂತಾ, ತಮನ್ನಾ, ಅನುಷ್ಕಾ, ರಶ್ಮಿಕಾ ಅಲ್ಲವೇ ಅಲ್ಲ.!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.