close

News WrapGet Handpicked Stories from our editors directly to your mailbox

ಫೋರ್ಬ್ಸ್‌ ಹೈಯೆಸ್ಟ್ ಪೇಯ್ಡ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಕ್ಷಯ್ ಕುಮಾರ್‌ಗೆ ಸ್ಥಾನ! ವಾರ್ಷಿಕ ಸಂಪಾದನೆ ಎಷ್ಟು ಗೊತ್ತಾ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ 100 ಸೆಲೆಬ್ರಿಟಿಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಅಕ್ಷಯ್ ಕುಮಾರ್ ಪಾತ್ರರಾಗಿದ್ದಾರೆ. 

IANS | Updated: Jul 11, 2019 , 09:10 PM IST
ಫೋರ್ಬ್ಸ್‌ ಹೈಯೆಸ್ಟ್ ಪೇಯ್ಡ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಕ್ಷಯ್ ಕುಮಾರ್‌ಗೆ  ಸ್ಥಾನ! ವಾರ್ಷಿಕ ಸಂಪಾದನೆ ಎಷ್ಟು ಗೊತ್ತಾ?

ಲಾಸ್ ಏಂಜಲೀಸ್: ಫೋರ್ಬ್ಸ್‌ನ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗ ಹೆಮ್ಮೆ ಪಡುವಂತಾಗಿದೆ. 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ 100 ಸೆಲೆಬ್ರಿಟಿಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಅಕ್ಷಯ್ ಕುಮಾರ್ ಪಾತ್ರರಾಗಿದ್ದಾರೆ. 

ವಾರ್ಷಿಕ 444 ಕೋಟಿ ರೂ. ಮೌಲ್ಯದ ಗಳಿಕೆಯೊಂದಿಗೆ 33 ನೇ ರ್ಯಾಂಕ್ ಪಡೆದಿರುವ ಅಕ್ಷಯ್, ಜನಪ್ರಿಯ ಅಂತರರಾಷ್ಟ್ರೀಯ ಸೆಲೆಬ್ರಿಟಿಗಳಾದ ರಿಹಾನ್ನಾ, ಜಾಕಿ ಚಾನ್, ಸ್ಕಾರ್ಲೆಟ್ ಜೋಹಾನ್ಸನ್, ಕ್ರಿಸ್ ಇವಾನ್ಸ್ ಮತ್ತು ಕೇಟಿ ಪೆರಿಯನ್ನೂ ಹಿಂದಿಕ್ಕಿದ್ದಾರೆ.

ಫೋರ್ಬ್ಸ್ ಪ್ರಕಾರ, "ಕೇಸರಿ" ನಟ ಅಕ್ಷಯ್ ಕುಮಾರ್ ಪ್ರತಿ ಸಿನಿಮಾಕ್ಕೆ ಕನಿಷ್ಠ 5 ಮಿಲಿಯನ್ ಡಾಲರ್ ನಿಂದ 10 ಮಿಲಿಯನ್ ಡಾಲರ್'ವರೆಗೆ, ಅಂದರೆ  35 ರಿಂದ 70 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಇದರ ಜೊತೆಗೆ ಟಾಟಾ ಮತ್ತು ಹಾರ್ಪಿಕ್ ಸೇರಿದಂತೆ ಸುಮಾರು 20ಕ್ಕೂ ಅಧಿಕ ಬ್ರಾಂಡ್‌ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗುವ ಮೂಲಕ ಲಕ್ಷಾಂತರ ಸಂಭಾವನೆ ಪಡೆದಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ. 

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಅವರು ಪ್ರಸ್ತುತ ಜಗನ್ ಶಕ್ತಿಯ 'ಮಿಷನ್ ಮಂಗಲ್', ಫರ್ಹಾದ್ ಸಂಜಿಯ 'ಹೌಸ್ ಫುಲ್ 4', ರಾಜ್ ಮೆಹ್ತಾ ಅವರ 'ಗುಡ್ ನ್ಯೂಸ್', ರಾಘವ ಲಾರೆನ್ಸ್ ಅವರ 'ಲಕ್ಷ್ಮಿ ಬಾಂಬ್' ಮತ್ತು ರೋಹಿತ್ ಶೆಟ್ಟಿಯ 'ಸೂರ್ಯವಂಶಿ' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.