ಇಂಡಸ್ಟ್ರಿಯಲ್ಲಿ ಮತ್ತೊಂದು ವಿಚ್ಚೇದನದ ಸದ್ದು.. ಡಿವೋರ್ಸ್‌ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್‌ ನಟ!! ‌ಯಾರದು ಗೊತ್ತೇ?

Saif Ali Khan on divorce: ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಶೀಘ್ರದಲ್ಲೇ ವಿಚ್ಚೇದನ ಪಡೆಯಲಿದ್ದಾರೆ ಎಂದು ವದಂತಿ ಹಬ್ಬಿತ್ತು.. ಇದೀಗ ನಟ ಇವುಗಳಿಗೆ ಸ್ಪಷ್ಟತೆ ನೀಡಿದ್ದಾರೆ.    

Written by - Savita M B | Last Updated : Dec 1, 2024, 07:44 PM IST
  • ನಟ ಸೈಫ್ ಅಲಿ ಖಾನ್ ಮತ್ತು ನಟಿ ಅಮೃತಾ ಸಿಂಗ್ ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು
  • ಸುಮಾರು 13 ವರ್ಷಗಳ ದಾಂಪತ್ಯದ ನಂತರ ಸೈಫ್ ಮತ್ತು ಅಮೃತಾ ವಿಚ್ಛೇದನ ಪಡೆದರು.
ಇಂಡಸ್ಟ್ರಿಯಲ್ಲಿ ಮತ್ತೊಂದು ವಿಚ್ಚೇದನದ ಸದ್ದು.. ಡಿವೋರ್ಸ್‌ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್‌ ನಟ!! ‌ಯಾರದು ಗೊತ್ತೇ? title=

Saif Ali Khan: ನಟ ಸೈಫ್ ಅಲಿ ಖಾನ್ ಮತ್ತು ನಟಿ ಅಮೃತಾ ಸಿಂಗ್ ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ 1991 ರಲ್ಲಿ ಮದುವೆಯಾಗಲು ನಿರ್ಧರಿಸಿದರು. ಆದರೆ ಅವರ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. ಅಂತಿಮವಾಗಿ, ಇಬ್ಬರು ಮಕ್ಕಳ ಜನನದ ನಂತರ, ಸೈಫ್ ಮತ್ತು ಅಮೃತಾ ಬೇರೆಯಾಗಲು ನಿರ್ಧರಿಸಿದರು. ಸುಮಾರು 13 ವರ್ಷಗಳ ದಾಂಪತ್ಯದ ನಂತರ ಸೈಫ್ ಮತ್ತು ಅಮೃತಾ ವಿಚ್ಛೇದನ ಪಡೆದರು.  

ವರದಿಗಳ ಪ್ರಕಾರ, ವಿಚ್ಛೇದನದ ನಂತರ ಸೈಫ್ ಅಲಿಖಾನ್ ಅಮೃತಾಗೆ ಜೀವನಾಂಶವಾಗಿ 5 ಕೋಟಿ ರೂ. ಅಲ್ಲದೆ, ಸೈಫ್ ತನ್ನ ಮಗ ಇಬ್ರಾಹಿಂಗೆ 18 ವರ್ಷ ತುಂಬುವವರೆಗೆ ತಿಂಗಳಿಗೆ 1 ಲಕ್ಷ ರೂಪಾಯಿಯನ್ನು ವೆಚ್ಚವಾಗಿ ನೀಡುವುದಾಗಿ ತನ್ನ ಮೊದಲ ಪತ್ನಿ ಅಮೃತಾಗೆ ಹೇಳಿದ್ದರು ಎನ್ನಲಾಗಿದೆ.. 

ಇದನ್ನೂ ಓದಿ-Viral Video: 50 ವರ್ಷದ ಸ್ವಂತ ತಂದೆಯನ್ನೇ ಮದುವೆಯಾದ 24 ವರ್ಷದ ಮಗಳು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತಿರಾ!! 

ಅಷ್ಟೇ ಅಲ್ಲ ಸಂದರ್ಶನವೊಂದರಲ್ಲಿ ಸೈಫ್ ವಿಚ್ಛೇದನದ ಬಗ್ಗೆ ಹಾಸ್ಯಮಯ ಹೇಳಿಕೆ ನೀಡಿದ್ದಾರೆ. 'ಒಂದು ನಿರ್ದಿಷ್ಟ ಅವಧಿಯ ನಂತರ ನಾವೆಲ್ಲರೂ ಸಂಬಂಧದಲ್ಲಿ ಸಿಲುಕಿಕೊಳ್ಳುತ್ತೇವೆ... ಅನೇಕ ವಿಷಯಗಳು ಬದಲಾಗುತ್ತವೆ... ಪ್ರೀತಿಯಲ್ಲಿ ನಾವಿಬ್ಬರು ವಿಭಿನ್ನ ವ್ಯಕ್ತಿಗಳು ಎಂದು ನಮಗೆ ತಿಳಿದಿರುವುದಿಲ್ಲ... ಆದರೂ ಒಂದಾಗುತ್ತೇವೆ' ಅಲ್ಲದೇ.. 'ಸಂಗಾತಿಯಲ್ಲಿ ನೀವು ಪ್ರೀತಿಸುವ ಮತ್ತು ಗೌರವಿಸುವ ವಿಷಯಗಳೂ ಇರುತ್ತವೆ.. ತಪ್ಪು ವ್ಯಕ್ತಿಯೊಂದಿಗೆ ದಾಂಪತ್ಯದಲ್ಲಿ ಸಿಲುಕಿರುವ ಅನೇಕ ಜನರಿದ್ದಾರೆ.. ಹಾಗೆಂದ ಮಾತ್ರಕ್ಕೆ ಪ್ರತಿಬಾರಿಯೂ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ...' ಎಂದು ಸೈಫ್ ಹೇಳಿದ್ದಾರೆ. ಇದರಿಂದ ಹಲವು ವದಂತಿಗಳಿಗೆ ತೆರೆಬಿದ್ದಂತಾಗಿದೆ.. 

ಇದನ್ನೂ ಓದಿ-ಆತ್ಮಹತ್ಯೆಗೆ ಶರಣಾದ ಬ್ರಹ್ಮಗಂಟು ಸಿರೀಯಲ್‌ ನಟಿ!   

ಇನ್ನು ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಸಂಬಂಧದ ಬಗ್ಗೆ ಮಾತನಾಡುವುದಾದರೇ ಸೈಫ್ ಮದುವೆಯಾದಾಗ ಕೇವಲ 21 ವರ್ಷ. ಅಮೃತಾ ಮತ್ತು ಸೈಫ್ ನಡುವೆ 13 ವರ್ಷಗಳ ಅಂತರವಿದೆ. ಇಬ್ಬರೂ ಕೂಡ ಗುಟ್ಟಾಗಿ ಮದುವೆಯಾಗಿದ್ದರು. ಅವರ ಮದುವೆಯ ಬಗ್ಗೆ ಕುಟುಂಬದವರಿಗೂ ತಿಳಿದಿರಲಿಲ್ಲ. 

ಅಮೃತಾಗೆ ವಿಚ್ಛೇದನ ನೀಡಿದ ಕೆಲವು ವರ್ಷಗಳ ನಂತರ, ಸೈಫ್ ನಟಿ ಕರೀನಾ ಕಪೂರ್ ಅವರನ್ನು ವಿವಾಹವಾದರು. ಕರೀನಾ ಸೈಫ್ ಅವರನ್ನು ಮದುವೆಯಾಗಲು ನಿರ್ಧರಿಸಿದ್ದಕ್ಕಾಗಿ ಟ್ರೋಲ್ ಕೂಡಾ ಆಗಿದ್ದರು.. ಆದರೆ ಈಗ ಸೈಫ್ ಮತ್ತು ಕರೀನಾ ಸಂತೋಷದ ಜೀವನ ನಡೆಸುತ್ತಿದ್ದಾರೆ. ಮದುವೆಯ ನಂತರ, ಕರೀನಾ ತೈಮೂರ್ ಮತ್ತು ಜೆಹ್ ಅವರಿಗೆ ಜನ್ಮ ನೀಡಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News