Cuckoo Moray: ಹಿಂದಿ ಚಿತ್ರರಂಗದ ಗತಕಾಲವು ಅನೇಕ ತಾರೆಯರನ್ನು ಹೊಂದಿತ್ತು. ಅದರಲ್ಲಿ ಕೆಲವರ ಜೀವನ ಜನರಿಗೆ ವಿಚಿತ್ರ ಎನಿಸುವಂತಿತ್ತು. ಒಂದು ಕಾಲದಲ್ಲಿ ಈ ತಾರೆಯರು ಸಿನಿರಂಗವನ್ನೇ ಆಳಿದ್ದರು. ಅಂತಹ ಒಂದು ಹೆಸರು ಕುಕ್ಕು ಮೋರೆ. ಕುಕ್ಕು ಚಿತ್ರರಂಗದ ಮೊದಲ ಐಟಂ ಗರ್ಲ್ ಎಂದು ಕರೆಯುತ್ತಾರೆ. ಹೆಲೆನ್ ಉದ್ಯಮದಲ್ಲಿ ಮಿಂಚುವ ಮುಂಚೆಯೇ, ಕುಕ್ಕು ಹಿಂದಿ ಚಲನಚಿತ್ರಗಳ ಪ್ರಸಿದ್ಧ ಕ್ಯಾಬರೆ ರಾಣಿಯಾಗಿದ್ದರು. ಅವಳು ಹೊಳೆಯುವ ನಕ್ಷತ್ರವಾಗಿದ್ದಳು. ಒಂದು ಕಾಲದಲ್ಲಿ ಐಷಾರಾಮಿ ಜೀವನ ನಡೆಸಿದ ಅವರು ನಾಳೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಅದ್ದೂರಿಯಾಗಿ ಕಳೆಯುತ್ತಿದ್ದರು. ಅವರು 1950 ರ ದಶಕದಲ್ಲಿ ಮೂರು ಕಾರುಗಳನ್ನು ಹೊಂದಿದ್ದರು. ಒಂದನ್ನು ತಮಗಾಗಿ ಬಳಸುತ್ತಿದ್ದರು. ತಮ್ಮ ನಾಯಿಗಳಿಗಾಗಿಯೇ ಮತ್ತೊಂದು ಕಾರನ್ನು ಬಳಸುತ್ತಿದ್ದರು.
1950 ಮತ್ತು 1960 ರ ದಶಕದಲ್ಲಿ, ಕುಕ್ಕು ಒಂದು ನೃತ್ಯಕ್ಕೆ 6000 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆ ಸಮಯದಲ್ಲಿ ಜನರು ಕಾರ್ಖಾನೆಗಳು ಮತ್ತು ಕಚೇರಿಗಳಲ್ಲಿ 200 ರೂಪಾಯಿ ಸಂಬಳವನ್ನು ಪಡೆಯುವುದೇ ದೊಡ್ಡ ಸಂಗತಿ ಆಗಿತ್ತು. ಇಡೀ ಚಿತ್ರಕ್ಕೆ ನಾಯಕ ನಟ-ನಟಿಯರಿಗೆ 5000 ರೂ. ಸಂಭಾವನೆ ಸಿಗುತ್ತಿತ್ತು.
ಇದನ್ನೂ ಓದಿ : ಬಿಗ್ ಬಾಸ್ ಧ್ವನಿಯ ಹಿಂದಿರುವ ಆ ವ್ಯಕ್ತಿ ಯಾರು ಗೊತ್ತಾ?
ಕುಕ್ಕು 1928 ರಲ್ಲಿ ಆಂಗ್ಲೋ-ಇಂಡಿಯನ್ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೂ ಅವರಿಗೆ ನೃತ್ಯದ ಬಗ್ಗೆ ಒಲವು ಇತ್ತು. 1946 ರಲ್ಲಿ, ಅರಬ್ ಕಾ ಸಿತಾರಾ ಚಿತ್ರದಲ್ಲಿ ನೃತ್ಯ ಮಾಡಲು ಅವರಿಗೆ ಮೊದಲ ಅವಕಾಶ ಸಿಕ್ಕಿತು. ಇದರ ನಂತರ, ನಿರ್ಮಾಪಕ-ನಿರ್ದೇಶಕರು ಅವಳ ನೃತ್ಯವನ್ನು ನಿರ್ದಿಷ್ಟವಾಗಿ ಚಿತ್ರದಲ್ಲಿ ಸೇರಿಸಲು ಪ್ರಾರಂಭಿಸಿದರು. ಕುಕ್ಕು ಹಿಂದಿ ಚಿತ್ರರಂಗದ ಮೊದಲ ಐಟಂ ಗರ್ಲ್ ಆದರು. ಅವರಿಗೆ ಸ್ಟಾರ್ ಸ್ಥಾನಮಾನ ಸಿಕ್ಕಿತು. ಸಂಪತ್ತು ಮತ್ತು ಖ್ಯಾತಿಯನ್ನು ಪಡೆದರು. ಅವರು ಮುಂಬೈನಲ್ಲಿ ಭವ್ಯವಾದ ಬಂಗಲೆಯನ್ನು ನಿರ್ಮಿಸಿದರು. ಕಾರುಗಳನ್ನು ಖರೀದಿಸಿದರು. ಅವರು ನಾಯಿಗಳನ್ನು ತುಂಬಾ ಪ್ರೀತಿಸುತ್ತಿದ್ದರು. ಮನೆಯಲ್ಲಿ ಹಲವು ನಾಯಿಗಳನ್ನು ಸಾಕಿದ್ದರು. ನಾಯಿಗಳ ಓಡಾಟಕ್ಕೆ ಪ್ರತ್ಯೇಕ ಕಾರನ್ನು ಇಟ್ಟುಕೊಂಡಿದ್ದರು. ಮುಂಬೈನ ಪಂಚತಾರಾ ಹೋಟೆಲ್‌ಗಳಿಂದ ಪ್ರತಿದಿನ ಆಹಾರ ಬರುತ್ತಿತ್ತು ಎನ್ನಲಾಗಿದೆ. ಕುಕ್ಕು ಉತ್ತುಂಗದಲ್ಲಿದ್ದಾಗ ಹಣವನ್ನು ನೀರಿನಂತೆ ಖರ್ಚು ಮಾಡಿದ್ದರು.
ಕ್ರಮೇಣ ಹೆಲೆನ್ ಮತ್ತು ವೈಜಂತಿಮಾಲರಂತಹ ನರ್ತಕಿಯರ ಆಗಮನದೊಂದಿಗೆ, ಕುಕ್ಕು ಖ್ಯಾತಿ ಕಡಿಮೆ ಆಗ ತೊಡಗಿತು ಎನ್ನಲಾಗುತ್ತದೆ. ಐಷಾರಾಮಿ ಜೀವನಶೈಲಿಯಿಂದಾಗಿ, ಅವರ ಕಾರು ಮತ್ತು ನಂತರ ಬಂಗಲೆ ಹೀಗೆ ಒಂದೊಂದಾಗಿ ಮಾರಾಟವಾಯಿತು. ಅವರು ನಿರ್ದೇಶಕರ ಜೊತೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತದೆ. ಅವರ ವೃತ್ತಿಜೀವನ ಮುಗಿದ ನಂತರ ಅವರು ಬೇರ್ಪಟ್ಟರು ಎನ್ನಲಾಗಿದೆ. ಅಲ್ಲದೇ ಆದಾಯ ತೆರಿಗೆ ವಿಷಯದಲ್ಲಿ ಸಿಕ್ಕಿಬಿದ್ದು ಸಾಕಷ್ಟು ಹಣ ಮತ್ತು ಆಸ್ತಿಯನ್ನು ಕಳೆದುಕೊಂಡರು ಎನ್ನಲಾಗುತ್ತದೆ. ಪರಿಣಾಮವಾಗಿ, ಕುಕ್ಕು ಬೀದಿಗೆ ಬಂದರು. ಬಾಡಿಗೆ ಮನೆಯಲ್ಲಿ ವಾಸ ಮಾಡಬೇಕಾಯಿತು. ಕ್ರಮೇಣ ಬಾಡಿಗೆ ಕಟ್ಟಲು ಸಹ ಹಣ ಉಳಿಯಲಿಲ್ಲ ಮತ್ತು ಆಹಾರ ಸಿಗದ ಪರಿಸ್ಥಿತಿ ಉಂಟಾಯಿತು. ರಸ್ತೆಯಿಂದ ತರಕಾರಿ ಸಂಗ್ರಹಿಸಿ ಅಡುಗೆ ಮಾಡುತ್ತಿದ್ದರು ಎನ್ನಲಾಗುತ್ತದೆ.
1980ರಲ್ಲಿ ಕುಕ್ಕು ಕ್ಯಾನ್ಸರ್‌ಗೆ ತುತ್ತಾದರು. ಔಷಧಿಗೆ ಹಣವಿಲ್ಲದ ಕಾರಣ ಬೀದಿಗಿಳಿದು ಭಿಕ್ಷೆ ಬೇಡಲು ಹೊರಟರು. ಇಂಡಸ್ಟ್ರಿಯಲ್ಲಿರುವವರಿಗೆ ವಿಷಯ ತಿಳಿದಾಗ ಕೆಲವರು ಸಹಾಯ ಮಾಡಲು ಪ್ರಯತ್ನಿಸಿದರು, ಆದರೆ ಅದು ತುಂಬಾ ತಡವಾಗಿತ್ತು. ಕುಕ್ಕು ಸೆಪ್ಟೆಂಬರ್ 30 ರಂದು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ 52 ನೇ ವಯಸ್ಸಿನಲ್ಲಿ ನಿಧನರಾದರು. ಜನರು ಒಂದು ನೋಟಕ್ಕಾಗಿ ಹಾತೊರೆಯುತ್ತಿದ್ದ ಈ ತಾರೆ.. ತೀವ್ರ ಬಡತನ, ಒಂಟಿತನ ಮತ್ತು ಹಸಿವಿನಿಂದ ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆದರು. ಯೂಟ್ಯೂಬ್‌ನಲ್ಲಿ ಬರ್ಸಾತ್, ಪತಂಗಾ, ಚಲ್ತಿ ಕಾ ನಾಮ್ ಗಾಡಿ, ಖೋಟಾ ಪೈಸಾ, ಫಗುನ್ ಮುಂತಾದ ಚಿತ್ರಗಳಲ್ಲಿ ಅವರ ನೃತ್ಯವನ್ನು ಇಂದಿಗೂ ವೀಕ್ಷಿಸಬಹುದು.
ಇದನ್ನೂ ಓದಿ : ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ತೇಜಸ್ವಿನಿ : ಬೇಬಿ ಬಂಪ್ಸ್ ಫೋಟೋಸ್ ಇಲ್ಲಿವೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.