Nanu Bhagya: ತನ್ನನ್ನು ತಾನು ಕಂಡುಕೊಂಡ ಭಾಗ್ಯಳ ದಿಟ್ಟ ಪಯಣದಿಂದ ಹುರುಪು ಪಡೆದು ಅವಳಂತೆ ಎಲ್ಲ ಎಲ್ಲೆಗಳನ್ನು ದಾಟಬಯಸುವ ಹೆಂಗಳೆಯರ ಕೆಚ್ಚು ಹಾಗೂ ಸ್ಥೈರ್ಯವನ್ನು ಸಂಭ್ರಮಿಸುವುದೇ “ನಾನು ಭಾಗ್ಯ” ಅಭಿಯಾನದ ಗುರಿ.
ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರೂ, ತನಗೊದಗಿದ ಪರಿಸ್ಥಿತಿಯನ್ನು ಎದುರಿಸುತ್ತಾ ಕೆಚ್ಚು, ಮಹತ್ವಾಕಾಂಕ್ಷೆಗಳ ಹಾದಿ ತುಳಿದ ಭಾಗ್ಯಳ ಪಯಣ ವೀಕ್ಷಕರ ಮನಸನ್ನು ಇನ್ನಿಲ್ಲದಂತೆ ತಟ್ಟಿದೆ. ಎದುರಾದ ಸವಾಲುಗಳನ್ನೆಲ್ಲಾ ನಿಭಾಯಿಸುತ್ತಾ, ಎಲ್ಲ ನಿರೀಕ್ಷೆಗಳು ಹುಸಿಯಾಗುವಂತೆ ಬೆಳೆಯುತ್ತಿರುವ ಭಾಗ್ಯಳ ಕತೆ ನಾಡಿನ ಹೆಣ್ಣು ಮಕ್ಕಳಿಗೆ ಹೊಸ ಹುರುಪು ತುಂಬುತ್ತಿದೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ʼಭಾಗ್ಯಲಕ್ಷ್ಮಿʼ ಇದೀಗ ಏಳುನೂರನೇ ಸಂಚಿಕೆಯ ಹೊಸಿಲಿನಲ್ಲಿದ್ದು, ಭಾಗ್ಯ ತನ್ನ ಬದುಕಿನ ನಿರ್ಣಾಯಕ ತಿರುವಿನಲ್ಲಿ ನಿಂತಿದ್ದಾಳೆ. ಇಲ್ಲಿಂದ ಮುಂದಕ್ಕೆ ಕತೆ ಭಾರೀ ಬದಲಾವಣೆ ಕಾಣಲಿದೆ.
ಆರಂಭದಲ್ಲಿ ತನ್ನ ಗಂಡನ ಸಾಂಪ್ರದಾಯಿಕ ಮನೆಗೆ ತಕ್ಕ ಸೊಸೆಯಾಗಲು ಹೆಣಗಿದ ಭಾಗ್ಯಳ ಪ್ರೀತಿ ಮತ್ತು ತಾಳ್ಮೆ ಅವಳ ಅತ್ತೆ ಕುಸುಮಳ ಮನಗೆದ್ದಿದ್ದವು. ಅದೇ ಉತ್ಸಾಹದಲ್ಲಿ ಎರಡು ಮಕ್ಕಳಾದ ಮೇಲೂ ಮತ್ತೆ ಶಾಲೆಗೆ ಸೇರಿ ಹತ್ತನೇ ಕ್ಲಾಸಿನ ಪರೀಕ್ಷೆಯನ್ನೂ ಮುಗಿಸಿದ ಭಾಗ್ಯ ತನ್ನ ಕುಟುಂಬ ಹಾಗೂ ಮಕ್ಕಳ ಗೌರವ ಗಳಿಸಿದಳು. ಹೆಸರಾಂತ ಫೈವ್ ಸ್ಟಾರ್ ಹೋಟೆಲಿನಲ್ಲಿ ಮುಖ್ಯ ಶೆಫ್ ಆಗಿ ಕೆಲಸ ಶುರುಮಾಡಿದಾಗಲಂತೂ ಅವಳ ಪಯಣ ಹೊಸ ಮಜಲಿಗೇರಿತ್ತು.
ಆದರೂ ಇದೀಗ ಭಾಗ್ಯ ತನ್ನ ಕುಟುಂಬದ ತಳಪಾಯವನ್ನೇ ಅಲುಗಾಡಿಸುವಂಥ ಸತ್ಯಕ್ಕೆ ಮುಖಾಮುಖಿಯಾಗಿದ್ದಾಳೆ. ತನ್ನ ಗಂಡ ತಾಂಡವನ ಮೋಸ ಬಟಾಬಯಲಾಗಿ ಕಂಗೆಟ್ಟ ಅವಳಿಗೆ ಸಂಸಾರದಲ್ಲಿ ಉಳಿಯಬೇಕೋ ಬೇಡವೊ ಅನ್ನುವ ಪ್ರಶ್ನೆ ಎದುರಾಗಿತ್ತು. ಸಂಸಾರದೊಳಗೇ ಇದ್ದು ತನ್ನನ್ನು ತಾನು ಮರಳಿ ಕಂಡುಕೊಳ್ಳುವ ಕೆಚ್ಚಿನ ನಿರ್ಧಾರ ತೆಗೆದುಕೊಂಡಿರುವ ಭಾಗ್ಯಳ ಇದುವರೆಗೆ ಕಂಡಿರದ ಹೊಸ ಮುಖದ ಪರಿಚಯ ವೀಕ್ಷಕರಿಗೆ ಮುಂಬರುವ ಸಂಚಿಕೆಗಳಲ್ಲಿ ಆಗಲಿದೆ. ತನ್ನನ್ನು ತಾನು ಸಂಪೂರ್ಣವಾಗಿ ಬದಲಾಯಿಸಿಕೊಂಡು ತನ್ನ ಮುಂದಿನ ಹೆಜ್ಜೆಗಳನ್ನು ದೃಢವಾಗಿ ಇಡಲಿರುವ ಸ್ವತಂತ್ರ ಭಾಗ್ಯಳನ್ನು ಅವರು ನೋಡಲಿದ್ದಾರೆ.
ಭಾಗ್ಯಳ ಈ ದಿಟ್ಟ ತಿರುವಿನ ಕ್ಷಣವನ್ನು ಸಂಭ್ರಮಿಸಲು ಕಲರ್ಸ್ ಕನ್ನಡ “ನಾನು ಭಾಗ್ಯ” ಅನ್ನುವ ಅಭಿಯಾನವೊಂದನ್ನು ಆರಂಭಿಸಿದೆ. ಈ ಅಭಿಯಾನಕ್ಕೆಂದೇ #IAMBHAGYA ಅನ್ನುವ ಹ್ಯಾಷ್ ಟ್ಯಾಗ್ ಆರಂಭಿಸಲಾಗಿದೆ. ಇದರ ಮುಖಾಂತರ ಎಲ್ಲ ಹೆಣ್ಣುಮಕ್ಕಳನ್ನು ಸಮಾಜದ ಒತ್ತಡಗಳನ್ನು ಮೀರಿ ತಮ್ಮ ಕನಸನ್ನು ಬೆಂಬತ್ತುವಂತೆ ಉತ್ತೇಜಿಸುವುದು ಕಲರ್ಸ್ ಕನ್ನಡದ ಉದ್ದೇಶ. ಇದಕ್ಕಾಗಿ ಪ್ರೊಮೊ ಹಾಡೊಂದನ್ನು ಸಹ ನಿರ್ಮಿಸಲಾಗಿದೆ. ಈ ಹಾಡಿಗೆ ಗಿರಿಧರ್ ದಿವಾನ್ ಸಂಗೀತ ನೀಡಿದ್ದು, ಪ್ರದ್ಯುಮ್ನ ಗೀತೆ ರಚಿಸಿದ್ದಾರೆ.
ಭಾಗ್ಯಳ ಮುಂದಿನ ಹೆಜ್ಜೆಗಳು ಅವಳನ್ನು ಎಲ್ಲಿಗೆ ಕರೆದೊಯ್ಯಲಿವೆ ಎಂಬ ಕುತೂಹಲ ತಣಿಯಲು ನೀವು ಕಲರ್ಸ್ ಕನ್ನಡ ವೀಕ್ಷಿಸುವುದನ್ನು ಮರೆಯಬೇಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.