ʼಹೌದು ನನ್ನ ಬಾಯ್‌ಫ್ರೆಂಡ್‌ ಕ್ರಿಕೆಟರ್..ʼ ಶುಭ್ಮನ್‌ ಗಿಲ್‌ ಜೊತೆಗಿನ ಲವ್‌ ರೂಮರ್ಸ್‌ ಮಧ್ಯೆ ಶಾಕಿಂಗ್‌ ಹೇಳಿಕೆ ನೀಡಿದ ಸಾರಾ!

 Sara alikhan: ಇಲ್ಲಿಯವರೆಗೆ ನಟಿ ಸಾರಾ ಅಲಿ ಖಾನ್ ಅನೇಕ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ ಈ ಬಾಲಿವುಡ್‌ ಬೆಡಗಿ ಶಾಕಿಂಗ್‌ ಹೇಳಿಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 

Written by - Savita M B | Last Updated : Oct 7, 2024, 02:06 PM IST
  • ಬಾಲಿವುಡ್‌ ಬ್ಯೂಟಿ ಸಾರಾ ವೃತ್ತಿಯೊಂದಿಗೆ ಅವರ ವೈಯಕ್ತಿಕ ಜೀವನವೂ ಸುದ್ದಿಯಲ್ಲಿದೆ
  • ಬಾಯ್‌ಫ್ರೆಂಡ್ಸ್ ಮತ್ತು ಬ್ರೇಕಪ್‌ಗಳ ಬಗ್ಗೆ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದರು.
ʼಹೌದು ನನ್ನ ಬಾಯ್‌ಫ್ರೆಂಡ್‌ ಕ್ರಿಕೆಟರ್..ʼ ಶುಭ್ಮನ್‌ ಗಿಲ್‌ ಜೊತೆಗಿನ ಲವ್‌ ರೂಮರ್ಸ್‌ ಮಧ್ಯೆ ಶಾಕಿಂಗ್‌ ಹೇಳಿಕೆ ನೀಡಿದ ಸಾರಾ!  title=

Sara alikhan Talk About her Boyfriend: ಬಾಲಿವುಡ್‌ ಬ್ಯೂಟಿ ಸಾರಾ ವೃತ್ತಿಯೊಂದಿಗೆ ಅವರ ವೈಯಕ್ತಿಕ ಜೀವನವೂ ಸುದ್ದಿಯಲ್ಲಿದೆ.. ಸಾರಾ ಅವರ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ತಳುಕುಹಾಕಿಕೊಂಡಿತ್ತು... ಇಷ್ಟೇ ಅಲ್ಲ, ಸ್ವತಃ ನಟಿಯೇ ತನ್ನ ಬಾಯ್‌ಫ್ರೆಂಡ್ಸ್ ಮತ್ತು ಬ್ರೇಕಪ್‌ಗಳ ಬಗ್ಗೆ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದರು. 

ಬಾಲಿವುಡ್‌ನ ಖ್ಯಾತ ಮತ್ತು ಜನಪ್ರಿಯ ನಿರ್ದೇಶಕ ಕರಣ್ ಜೋಹರ್ ಅವರ 'ಕಾಫಿ ವಿತ್ ಕರಣ್' ಶೋನಲ್ಲಿ ಸಾರಾ ತಮ್ಮ ಖಾಸಗಿ ಜೀವನದ ಬಗ್ಗೆ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದರು. ಕಾರ್ಯಕ್ರಮದಲ್ಲಿ ಕರಣ್ ಸಾರಾಗೆ 'ಆಕೆಗೆ ಬಾಯ್ ಫ್ರೆಂಡ್ ಹೇಗೆ ಬೇಕು... ಎಂಬ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ನಟಿ ನೀಡಿದ ಉತ್ತರ ಇನ್ನೂ ಚರ್ಚೆಯಲ್ಲಿದೆ.

ಈ ಪ್ರಶ್ನೆಗೆ ಉತ್ತರಿಸಿದ ಸಾರಾ ‘ನಟನಂತೆ ಸ್ಫುರದ್ರೂಪಿ, ಕ್ರಿಕೆಟಿಗನಂತೆ ಗಟ್ಟಿಮುಟ್ಟಾದ, ಉದ್ಯಮಿಯಂತೆ ಶ್ರೀಮಂತನಾದ ಗೆಳೆಯ ನನಗೆ ಬೇಕು...’ ಎಂದಿದ್ದರು.. ಸದ್ಯ ಈ ಹೇಳಿಕೆ ಸೋಷಿಯಲ್‌ ಮಿಡಿಯಾದಲ್ಲಿ ಹಾಟ್‌ ಟಾಫಿಕ್‌ ಆಗಿದೆ..  

ಇದನ್ನೂಓದಿ-ಬಿಗ್‌ ಬಾಸ್‌ ನಿಂದ ಎಲಿಮಿನೇಟ್‌ ಆದ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಎಷ್ಟು ?

ಸಾರಾ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೇ, ಸಾರಾ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಇಬ್ಬರ ಸಂಬಂಧದ ಚರ್ಚೆಯೂ ಎಲ್ಲೆಡೆ ವೇಗ ಪಡೆದುಕೊಂಡಿತ್ತು.. ಆದರೆ ನಟನ ಮರಣದ ನಂತರ, ಸಾರಾ ತಾನು ಸುಶಾಂತ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಒಪ್ಪಿಕೊಂಡರು.

ನಟ ಕಾರ್ತಿಕ್ ಆರ್ಯನ್ ಅವರೊಂದಿಗೂ ಸಾರಾ ಹೆಸರನ್ನು ಚರ್ಚಿಸಲಾಗಿದೆ. ಇಬ್ಬರೂ ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ‘ಲವ್ ಆಜ್ ಕಲ್ 2’ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಆದರೆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತಿತ್ತು. ಇಷ್ಟೇ ಅಲ್ಲ ಕ್ರಿಕೆಟಿಗ ಶುಭ್ಮನ್‌ ಗಿಲ್‌ ಜೊತೆಗೂ ನಟಿಯ ಹೆಸರು ತಳುಕು ಹಾಕಿಕೊಂಡಿತ್ತು.. 

ಈಗ ಸಾರಾ ಜೀವನದಲ್ಲಿ ವಿಶೇಷ ವ್ಯಕ್ತಿ ಇಲ್ಲ ಎನ್ನಲಾಗುತ್ತಿದೆ. ನಟಿ ಈಗ ತನ್ನ ಸಂಪೂರ್ಣ ಗಮನವನ್ನು ಕೆಲಸದ ಮೇಲೆ ಕೇಂದ್ರೀಕರಿಸಿದ್ದಾರೆ. ಸಾರಾ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಆಕೆಗೆ ಅಪಾರ ಅಭಿಮಾನಿಗಳಿದ್ದಾರೆ.

ಇದನ್ನೂಓದಿ-ಲಾಯರ್‌ ಜಗದೀಶ್‌ ಮುಖಕ್ಕೆ ಮಸಿ ಬಳಿದ ಸಹ ಸ್ಪರ್ಧಿಗಳು! ಅಷ್ಟೆ..ರಣಾಂಗನ ಆಗಿಯೇ ಹೋಯ್ತು ಬಿಗ್‌ಬಾಸ್‌ ಮನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News