ಸಂಚಲನ ಸೃಷ್ಟಿಸಿದ ನಟಿ ತಮನ್ನಾ ಹಾಗೂ ಪಾಕ್ ಕ್ರಿಕೆಟಿಗ ಅಬ್ದುಲ್ ರಜಾಕ್ ಪೋಟೋ

ಸಾಮಾಜಿಕ ಮಾಧ್ಯಮದಲ್ಲಿ ಈಗ ನಟಿ ತಮನ್ನಾ ಭಾಟಿಯಾ ಹಾಗೂ ಪಾಕ್ ನ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರು ಜೊತೆಗಿರುವ ಪೋಟೋ ಹರಿದಾಡುತ್ತಿದೆ.

Last Updated : May 6, 2020, 03:46 PM IST
ಸಂಚಲನ ಸೃಷ್ಟಿಸಿದ ನಟಿ ತಮನ್ನಾ ಹಾಗೂ ಪಾಕ್ ಕ್ರಿಕೆಟಿಗ ಅಬ್ದುಲ್ ರಜಾಕ್ ಪೋಟೋ  title=

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಈಗ ನಟಿ ತಮನ್ನಾ ಭಾಟಿಯಾ ಹಾಗೂ ಪಾಕ್ ನ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರು ಜೊತೆಗಿರುವ ಪೋಟೋ ಹರಿದಾಡುತ್ತಿದೆ.

ಈಗ ಇದು ಸಾಕಷ್ಟು ವೈರಲ್ ಕೂಡ ಆಗುತ್ತಿದೆ, ಆದರೆ ವಿಷಯ ಏನಪ್ಪಾ ಅಂದ್ರೆ ಈ ಪೋಟೋ ಹಳೆಯದು ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ ದುಬೈನಲ್ಲಿ 2017 ರಲ್ಲಿ ನಡೆದ ಆಭರಣ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಇಬ್ಬರನ್ನು ಆಹ್ವಾನಿಸಲಾಗಿದೆ. ವೈರಲ್ ಫೋಟೋದಲ್ಲಿ ಪೋಸ್ ನೀಡುವಾಗ ತಮನ್ನಾ ಮತ್ತು ರಜಾಕ್ ಕೆಲವು ಆಭರಣ ವಸ್ತುಗಳನ್ನು ಹಿಡಿದಿರುವುದನ್ನು ಕಾಣಬಹುದು. ಈ ಪೋಟೋವನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ

.

ಇನ್ನೊಂದೆಡೆಗೆ ಕೊರೊನಾವೈರಸ್ ವಿರುದ್ಧ ಹೋರಾಡಲು ಸೆಲೆಬ್ರಿಟಿಗಳು ಹಲವು ಸೃಜನಶೀಲ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ತಮನ್ನಾ ಕೂಡ ತನ್ನ ಪಾಕದ ಕೌಶಲ್ಯವನ್ನು ವೀಡಿಯೊಗಳು ಮತ್ತು ಚಿತ್ರಗಳನ್ನು ಪೋಸ್ಟ್ ಮಾಡುವುದರ ಮೂಲಕ ತೋರಿಸಿದ್ದಾರೆ.ಅಲ್ಲದೆ,# ಪಿಲ್ಲೊಚಾಲೆಂಜ್ ಅನ್ನು ಕೈಗೆತ್ತಿಕೊಂಡು ಮತ್ತು ಡಿಸೈನರ್ ಬೆಲ್ಟ್ನಲ್ಲಿ ಸಿಕ್ಕಿಸಿದ ದೊಡ್ಡ ಬಿಳಿ ದಿಂಬಿನಲ್ಲಿ ಪೋಸ್ ನೀಡಿದರು. ಈ ಪೋಟೋ ಅಂತೂ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನೇ ಸೃಷ್ಟಿಸಿತೆಂದರೆ ಅಡ್ಡಿಯಿಲ್ಲ.

ತಮನ್ನಾ ಭಾಟಿಯಾ ಕೊನೆಯ ಬಾರಿಗೆ ಸೈ ರಾ ನರಸಿಂಹ ರೆಡ್ಡಿ, ಪೆಟ್ರೋಮ್ಯಾಕ್ಸ್ ಮತ್ತು ಆಕ್ಷನ್ ನಲ್ಲಿ ಕಾಣಿಸಿಕೊಂಡಿದ್ದರು.ಮಹೇಶ್ ಬಾಬು ಅವರ 2020 ರ ಬಿಡುಗಡೆಯಾದ 'ಸರಿಲೆರು ನೀಕೇವರ' ಚಿತ್ರದಲ್ಲಿ 'ಡಾಂಗ್ ದಾಂಗ್' ಹಾಡಿಗೆ ನೃತ್ಯ ಮಾಡಿದ್ದರು.

Trending News