Aman Dhaliwal : ನಟನ ಮೇಲೆ ಚಾಕುವಿನಿಂದ ಮಾರಣಾಂತಿಕ ದಾಳಿ..! ರಕ್ತ ಸುರಿಯುತ್ತಿದ್ದರೂ ಶತ್ರುವನ್ನು ಬಿಡಲಿಲ್ಲ

ಪಂಜಾಬಿ ಮತ್ತು ಬಾಲಿವುಡ್ ನಟ ಅಮನ್ ಧಲಿವಾಲ್ ಅವರು ಇತ್ತೀಚೆಗೆ ಅಮೆರಿಕದ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬನಿಂದ ಹಲ್ಲೆಗೊಳಗಾಗಿದ್ದಾರೆ. ಜಿಮ್‌ನಲ್ಲಿ ಅಮನ್‌ ಮೇಲೆ ಹಲ್ಲೆ ನಡೆಸಿದ ವಿಡಿಯೋ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ವರದಿಯ ಪ್ರಕಾರ, ಅಮನ್‌ ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿದ್ದು, ದಾಳಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಯುಎಸ್‌ನ 3685 ಗ್ರಾಂಡ್ ಓಕ್ಸ್‌ನಲ್ಲಿರುವ ಪ್ಲಾನೆಟ್ ಫಿಟ್‌ನೆಸ್ ಜಿಮ್‌ನಲ್ಲಿ ಬೆಳಿಗ್ಗೆ 9.20 ರ ಸುಮಾರಿಗೆ ಈ ಘಟನೆ ನಡೆದಿದೆ.

Written by - Krishna N K | Last Updated : Mar 16, 2023, 05:29 PM IST
  • ಪಂಚಾಬಿ, ಬಾಲಿವುಡ್‌ ನಟ ಅಮನ್ ಧಲಿವಾಲ್ ಮೇಲೆ ಹಲ್ಲೆ.
  • ಯುಸ್‌ನ ಜಿಮ್‌ವೊಂದರಲ್ಲಿ ನಡೆದ ಘಟನೆ.
  • ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌.
Aman Dhaliwal : ನಟನ ಮೇಲೆ ಚಾಕುವಿನಿಂದ ಮಾರಣಾಂತಿಕ ದಾಳಿ..! ರಕ್ತ ಸುರಿಯುತ್ತಿದ್ದರೂ ಶತ್ರುವನ್ನು ಬಿಡಲಿಲ್ಲ title=

Attack on Aman Dhaliwal : ಪಂಜಾಬಿ ಮತ್ತು ಬಾಲಿವುಡ್ ನಟ ಅಮನ್ ಧಲಿವಾಲ್ ಅವರು ಇತ್ತೀಚೆಗೆ ಅಮೆರಿಕದ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬನಿಂದ ಹಲ್ಲೆಗೊಳಗಾಗಿದ್ದಾರೆ. ಜಿಮ್‌ನಲ್ಲಿ ಅಮನ್‌ ಮೇಲೆ ಹಲ್ಲೆ ನಡೆಸಿದ ವಿಡಿಯೋ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ವರದಿಯ ಪ್ರಕಾರ, ಅಮನ್‌ ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿದ್ದು, ದಾಳಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಯುಎಸ್‌ನ 3685 ಗ್ರಾಂಡ್ ಓಕ್ಸ್‌ನಲ್ಲಿರುವ ಪ್ಲಾನೆಟ್ ಫಿಟ್‌ನೆಸ್ ಜಿಮ್‌ನಲ್ಲಿ ಬೆಳಿಗ್ಗೆ 9.20 ರ ಸುಮಾರಿಗೆ ಈ ಘಟನೆ ನಡೆದಿದೆ.

ಇನ್ನು ವೈರಲ್‌ ಆಗಿರುವ ವೀಡಿಯೊದಲ್ಲಿ, ಆರೋಪಿಯು ಅಮನ್‌ನನ್ನು ಚಾಕುವಿನಿಂದ ಹಿರಿದ ಘಟನೆ ಕಾಣಬಹುದು. ಅಲ್ಲದೆ, ಆರೋಪಿಯ ಒಂದು ಕೈಯಲ್ಲಿ ಕೊಡಲಿಯಂತಹ ಮಾರಕಾಸ್ತ್ರ ಮತ್ತು ಇನ್ನೊಂದು ಕೈಯಲ್ಲಿ ಚಾಕು ಇದೆ. ಕೊಡಲಿ ಹಿಡಿದಿದ್ದ ಕೈಯನ್ನು ಅಮನ್‌ ಅವರು ಗಟ್ಟಿಯಾಗಿ ಹಿಡಿದುಕೊಂಡಿದ್ದಾರು. ಆಗ ಇನ್ನೊಂದು ಕೈಯಲ್ಲಿದ್ದ ಜಾಕುವಿನಿಂದ ನಟನ ಮೇಲೆ ಆಗಂತುಕ ಹಲ್ಲೆ ನಡೆಸಿದ್ದಾನೆ. ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಅಮನ್‌ ಕೊನೆಗೂ ಆರೋಪಿಯನ್ನು ಜಿಮ್‌ನಲ್ಲಿದ್ದ ಇತರರ ಸಹಾಯದಿಂದ ಹೆಡೆಮುರಿ ಕಟ್ಟಿದ್ದಾರೆ. ಅಮನ್ ರಕ್ತಸ್ರಾವವನ್ನು ಕಾಣಬಹುದು.

ಇದನ್ನೂ ಓದಿ: ತಾಪ್ಸಿ ತಿಂಗಳ ಬಾಡಿ ಮೆಂಟೈನ್‌ ಖರ್ಚು ಎಷ್ಟು ಗೊತ್ತಾ..! ಗೆಸ್‌ ಮಾಡೋಕು ಆಗಲ್ಲ ನಿಮ್ಗೆ

ಅಮನ್ ಇಕ್ ಕುಡಿ ಪಂಜಾಬ್ ಡಿ, ಅಜ್ ದೇ ರಂಜೆ ಮತ್ತು ಹೆಚ್ಚಿನ ಪಂಜಾಬಿ ಸಿನಿಮಾಗಳಲ್ಲಿ ಭಾಗವಾಗಿದ್ದಾರೆ. ಅಲ್ಲದೆ, ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ಬಚ್ಚನ್ ನಟನೆಯ ಜೋಧಾ ಅಖ್ಬರ್ ಸೇರಿದಂತೆ ಮುಂತಾದ ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಚಲನಚಿತ್ರಗಳ ಹೊರತಾಗಿ, ಅಮನ್ ಇಷ್ಕ್ ಕಾ ರಂಗ್ ಸಫೇದ್, ಪೋರಸ್ ಮತ್ತು ವಿಘ್ನಹರ್ತ ಗಣೇಶ್‌ನಂತಹ ಟಿವಿ ಶೋಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಮಾಡೆಲಿಂಗ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.

 

 

Trending News