Gandhadagudi: ‘ಗಂಧದ ಗುಡಿ’ ಪ್ರೀ ಬುಕಿಂಗ್ ಆರಂಭ, ಇಂದೇ ಟಿಕೆಟ್ ಬುಕ್ ಮಾಡಿ

ಬಹುನಿರೀಕ್ಷಿತ ‘ಗಂಧದಗುಡಿ’ ಸಿನಿಮಾ ಅಕ್ಟೋಬರ್ 28ಕ್ಕೆ ತೆರೆಗೆ ಅಪ್ಪಳಿಸಲಿದೆ. ಸೋಮವಾರದಿಂದಲೇ ಈ ಸಿನಿಮಾದ ಪ್ರಿ ಬುಕ್ಕಿಂಗ್ ಆರಂಭವಾಗಿದೆ.

Written by - Puttaraj K Alur | Last Updated : Oct 24, 2022, 10:03 PM IST
  • ಅ.28ರಂದು ಬಹುನಿರೀಕ್ಷಿತ ‘ಗಂಧದಗುಡಿ’ ದೇಶದಾದ್ಯಂತ ಬಿಡುಗಡೆ
  • ಸೋಮವಾರದಿಂದಲೇ ‘ಗಂಧದಗುಡಿ’ಯ ಪ್ರೀ ಬುಕ್ಕಿಂಗ್ ಆರಂಭ
  • ರಾಜ್ಯ ಸರ್ಕಾರದಿಂದ ‘ಗಂಧದ ಗುಡಿ’ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಣೆ
Gandhadagudi: ‘ಗಂಧದ ಗುಡಿ’ ಪ್ರೀ ಬುಕಿಂಗ್ ಆರಂಭ, ಇಂದೇ ಟಿಕೆಟ್ ಬುಕ್ ಮಾಡಿ   title=
‘ಗಂಧದಗುಡಿ’ಯ ಪ್ರೀ ಬುಕ್ಕಿಂಗ್ ಆರಂಭ 

ಬೆಂಗಳೂರು: ಕರುನಾಡ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸಿನ ಕೂಸು ‘ಗಂಧದ ಗುಡಿ’ ಬಿಡುಗಡೆಗೆ 4 ದಿನಗಳಷ್ಟೇ ಬಾಕಿ ಇದೆ. ಸ್ಯಾಂಡಲ್‍ವುಡ್ ರಾಜಕುಮಾರನ ‘ಗಂಧದಗುಡಿ’ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಮೊನ್ನೆಯಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಸಿನಿಮಾ ಪ್ರೀ ರಿಲೀಸ್ ಇವೆಂಟ್ ನಡೆಯಿತು. ‘ಪುನೀತ ಪರ್ವ’ದಲ್ಲಿ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗದರು ‘ಅಪ್ಪು’ವನ್ನ ಸ್ಮರಿಸಿದರು. ‘ಗಂಧದಗುಡಿ’ ಕೆಜಿಎಫ್ ಸಿನಿಮಾ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಬೇಕು ಎಂದು ರಾಕಿಂಗ್ ಸ್ಟಾರ್ ಯಶ್ ಹಾರೈಸಿದರು.    

ಇದನ್ನೂ ಓದಿ: Kantara: ‘ಕಾಂತಾರ’ ನೋಡಿ ತುಂಬಾ ಹೆಮ್ಮೆಯಾಗುತ್ತಿದೆ ಎಂದ ನಟಿ ಪೂಜಾ ಹೆಗ್ಡೆ

ಬಹುನಿರೀಕ್ಷಿತ ‘ಗಂಧದಗುಡಿ’ ಸಿನಿಮಾ ಅಕ್ಟೋಬರ್ 28ಕ್ಕೆ ತೆರೆಗೆ ಅಪ್ಪಳಿಸಲಿದೆ. ಸೋಮವಾರದಿಂದಲೇ ಈ ಸಿನಿಮಾದ ಪ್ರಿ ಬುಕ್ಕಿಂಗ್ ಆರಂಭವಾಗಿದೆ. ಈ ಬಗ್ಗೆ ಸ್ವತಃ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಾಹಿತಿ ನೀಡಿದ್ದಾರೆ. ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಗಂಧದಗುಡಿಯ ಪ್ರೀಮಿಯರ್ ಶೋಗಾಗಿ ಬುಕಿಂಗ್ಸ್ ಈಗ ಆರಂಭವಾಗಿದೆ’ ಎಂದು ಹೇಳಿದ್ದಾರೆ.   

ಈಗಾಗಲೇ ರಾಜ್ಯ ಸರ್ಕಾರವು ‘ಗಂಧದ ಗುಡಿ’ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿದೆ. ಹೀಗಾಗಿ ಟಿಕೆಟ್ ಬೆಲೆ ಬಹಳ ಕಡಿಮೆ ಇರಲಿದೆ. ಸಿನಿಮಾ ನೋಡಲು ಅಭಿಮಾನಿಗಳು ಈಗಲೇ ಟಿಕೆಟ್ ಬುಕ್ ಮಾಡಬಹುದು. ‘ಗಂಧದಗುಡಿ’ ಬಿಡುಗಡೆ ಹಿನ್ನೆಲೆ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಪುನೀತ್ ರಾಜ್‍ಕುಮಾರ್ ಅವರ ಬೃಹತ್ ಕಟೌಟ್‍ಗಳನ್ನು ಹಾಕಲಾಗಿದೆ. ‘ಅಪ್ಪು’ ಅವರ ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ: ʼಪುನೀತ್‌ ಪರ್ವʼಕ್ಕೆ ʼದರ್ಶನ್‌-ಸುದೀಪ್‌ʼ ಬಂದಿಲ್ಲ : ಇಬ್ಬರಿಗೂ ಅಪ್ಪು ಮೇಲೆ ಅಪಾರ ಪ್ರೀತಿ..!

ಗಂಧದಗುಡಿ’ ಸಿನಿಮಾದ ಅವಧಿ 1 ಗಂಟೆ 37 ನಿಮಿಷ ಇದೆ. ‘ಬುಕ್​ ಮೈ ಶೋ’ನಲ್ಲಿ ಟಿಕೆಟ್ ಬುಕ್‍ ಮಾಡಬಹುದು. ಕರುನಾಡಿನ ವಣ್ಯಜೀವಿ, ಪ್ರಕೃತಿ ಸಂಪತ್ತು, ಕಾಡು, ಗುಡ್ಡ-ಬೆಟ್ಟವನ್ನು ‘ಗಂಧದಗುಡಿ’ಯಲ್ಲಿ ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಪುನೀತ್ ರಾಜ್‍ಕುಮಾರ್ ಅವರಿಗೆ ಅಮೋಘವರ್ಷ ಅವರು ಸಾಥ್ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News