ʼಪುನೀತ್‌ ಪರ್ವʼಕ್ಕೆ ʼದರ್ಶನ್‌-ಸುದೀಪ್‌ʼ ಬಂದಿಲ್ಲ : ಇಬ್ಬರಿಗೂ ಅಪ್ಪು ಮೇಲೆ ಅಪಾರ ಪ್ರೀತಿ..!

ಪವರ್‌ ಸ್ಟಾರ್‌ ಡಾ. ಪುನೀತ್‌ ರಾಜಕುಮಾರ್‌ ಅವರ ಕನಸಿನ ಕೂಸು ಗಂಧದಗುಡಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ʼಪುನೀತ್‌ ಪರ್ವʼಕ್ಕೆ ಅಭಿನಯ ಚಕ್ರವರ್ತಿ ಸುದೀಪ್‌ ಹಾಗೂ ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ ಅವರು ಕಾರಣಾಂತರದಿಂದ ಗೈರಾಗಿದ್ದರು. ಆದ್ರೆ ಅವರಿಬ್ಬರಿಗೂ ಅಪ್ಪು ಅವರ ಮೇಲಿರುವ ಅಭಿಮಾನ, ಪ್ರೀತಿ ಮಾತ್ರ ಅಪಾರ. ಆದರೂ ಇಬ್ಬರೂ ನಟರು ಪುನೀತ್‌ ಪರ್ವಕ್ಕೆ ಯಾಕೆ ಬಂದಿಲ್ಲ ಎಂದು ನೆಟ್ಟಿಗರು ಮತ್ತು ಇಬ್ಬರು ಸ್ಟಾರ್‌ಗಳ ಫ್ಯಾನ್ಸ್‌ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಟಾಕ್‌ ವಾರ್‌ ಶುರುವಾಗಿದೆ.

Written by - Krishna N K | Last Updated : Oct 24, 2022, 06:10 PM IST
  • ದರ್ಶನ್‌, ಸುದೀಪ್‌ ಅವರಿಗೆ ಅಪ್ಪು ಮೇಲಿರುವ ಪ್ರೀತಿ ಯಾವತ್ತೂ ಕಡಿಮೆ ಆಗಿಲ್ಲ
  • ಆದರೂ ಇಬ್ಬರೂ ನಟರು ಪುನೀತ್‌ ಪರ್ವಕ್ಕೆ ಯಾಕೆ ಬಂದಿಲ್ಲ
  • ನೆಟ್ಟಿಗರು ಮತ್ತು ಇಬ್ಬರು ಸ್ಟಾರ್‌ಗಳ ಫ್ಯಾನ್ಸ್‌ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಟಾಕ್‌ ವಾರ್‌
ʼಪುನೀತ್‌ ಪರ್ವʼಕ್ಕೆ ʼದರ್ಶನ್‌-ಸುದೀಪ್‌ʼ ಬಂದಿಲ್ಲ : ಇಬ್ಬರಿಗೂ ಅಪ್ಪು ಮೇಲೆ ಅಪಾರ ಪ್ರೀತಿ..! title=

ಬೆಂಗಳೂರು : ಪವರ್‌ ಸ್ಟಾರ್‌ ಡಾ. ಪುನೀತ್‌ ರಾಜಕುಮಾರ್‌ ಅವರ ಕನಸಿನ ಕೂಸು ಗಂಧದಗುಡಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ʼಪುನೀತ್‌ ಪರ್ವʼಕ್ಕೆ ಅಭಿನಯ ಚಕ್ರವರ್ತಿ ಸುದೀಪ್‌ ಹಾಗೂ ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ ಅವರು ಕಾರಣಾಂತರದಿಂದ ಗೈರಾಗಿದ್ದರು. ಆದ್ರೆ ಅವರಿಬ್ಬರಿಗೂ ಅಪ್ಪು ಅವರ ಮೇಲಿರುವ ಅಭಿಮಾನ, ಪ್ರೀತಿ ಮಾತ್ರ ಅಪಾರ. ಆದರೂ ಇಬ್ಬರೂ ನಟರು ಪುನೀತ್‌ ಪರ್ವಕ್ಕೆ ಯಾಕೆ ಬಂದಿಲ್ಲ ಎಂದು ನೆಟ್ಟಿಗರು ಮತ್ತು ಇಬ್ಬರು ಸ್ಟಾರ್‌ಗಳ ಫ್ಯಾನ್ಸ್‌ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಟಾಕ್‌ ವಾರ್‌ ಶುರುವಾಗಿದೆ.

ಹೌದು... ಸುದೀಪ್‌ ಅವರಿಗೆ ಅಪ್ಪು ಕಂಡ್ರೆ ತುಂಬಾ ಪ್ರೀತಿ, ದರ್ಶನ್‌ ಅವರಿಗಂತೂ ಪುನೀತ್‌ ಬಲು ಅಚ್ಚುಮೆಚ್ಚು. ಅಪ್ಪು ಅವರನ್ನು ದರ್ಶನ್‌ ಹಾಗೂ ಸುದೀಪ್‌ ಅವರು ಅಪ್ಪಿಕೊಂಡಿರುವ ಅದೇಷ್ಟೋ ಫೋಟೋಗಳನ್ನ ನೋಡಿದ್ದೇವೆ. ಅಲ್ಲದೆ ದೊಡ್ಮನೆ ಮೇಲೆ ಇಬ್ಬರೂ ನಾಯಕರಿಗೆ ಅಷ್ಟೇ ಗೌರವವಿದೆ. ಇನ್ನು ಹುಬ್ಬಳ್ಳಿಯಲ್ಲಿ ನಡೆದ ಬನಾರಸ್‌ ಸಿನಿಮಾ ರಿಲೀಸ್‌ ಕಾರ್ಯಕ್ರಮದ ವೇಳೆ ಅಪ್ಪು ನೆನೆದು ದರ್ಶನ್ ಅವರು ತಮಗರಿವಿಲ್ಲದಂತೆ ಕಣ್ಣಿರಿಟ್ಟರು. ಕಾರಣಾಂತರದಿಂದ ಇಬ್ಬರೂ ಪುನೀತ್‌ ಪರ್ವಕ್ಕೆ ಹಾಜರಾಗಿಲ್ಲ ಅಷ್ಟೇ.. ಅದ್ರೆ ಇದ್ಯಾವುದನ್ನು ತಿಳಿಯದೇ ಸುಖಾ ಸುಮ್ಮನೆ ನೆಟ್ಟಿಗರು ಚರ್ಚೆಗಿಳಿದಿದ್ದಾರೆ.

ಇದನ್ನೂ ಓದಿ: ಕನ್ನಡಿಗರ ಕೆಚ್ಚೆದೆಯ ʼಮಯೂರʼ ಸಿನಿಮಾ ಶೂಟಿಂಗ್‌ ವೇಳೆ ಪುನೀತ್‌ ಜನನ..!

ಅಜಾತಶತ್ರು, ಕನ್ನಡದ ಕಂದ ಪುನೀತ್‌ ರಾಜಕುಮಾರ್‌ ಎಲ್ಲರಿಗೂ ಅಚ್ಚುಮೆಚ್ಚು, ಅಪ್ಪು ಅಗಲಿಕೆ ವೇಳೆ ದರ್ಶನ್‌ ಬಾವುಕರಾಗಿದ್ದು ಎಲ್ಲರೂ ನೋಡಿದ್ದಾರೆ. ಅಲ್ಲದೆ, ಸುದೀಪ್‌ ಅವರು ನೆಚ್ಚಿನ ಗೆಳೆಯನ್ನು ಕಳೆದುಕೊಂಡು ಕೊರಗಿದ್ದರು. ಇಂದಿಗೂ ಇಬ್ಬರಿಗೂ ಅಪ್ಪು ಮೇಲೆ ಕೊಂಚವೂ ಪ್ರೀತಿ ಕಡಿಮೆಯಾಗಿಲ್ಲ. ಆದ್ರೆ ಪುನೀತ್‌ ಪರ್ವಕ್ಕೆ ಇಬ್ಬರೂ ಬಾರದಿರುವುದು ನೆಟಿಜನ್ಸ್‌ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಜೊತೆ ಇಬ್ಬರ ಫ್ಯಾನ್ಸ್‌ ಅವರ ಜೊತೆ ಸಮರ್ಥನೆಗೆ ಇಳಿದಿದ್ದಾರೆ.

ಒಟ್ಟಾರೆಯಾಗಿ ಯಾರೂ ಬೇಕು ಅಂತ ಏನನ್ನೂ ಮಾಡುವುದಿಲ್ಲ. ಸಮಯ, ಸಂದರ್ಭ ಅಂತಹದ್ದು, ಅಷ್ಟಕ್ಕೇ ಅವರ ಮೇಲೆ ಗೂಬೆ ಕುರಿಸುವುದು ಸಮಂಜಸವಲ್ಲ ಎಂದು ಕೆಲ ಜನರು ಚರ್ಚೆಯನ್ನು ಇತ್ಯರ್ಥಗೊಳಿಸಲು ನೋಡುತ್ತಿದ್ದಾರೆ. ಆದ್ರೆ ಇನ್ನೂ ಕೆಲವರು ಅವರು ಮಾಡಿದ್ದು ತಪ್ಪು ಎನ್ನುತ್ತಿದ್ದಾರೆ. ಈ ವಿಚಾರ ಇನ್ನು ಎಲ್ಲಿಯವರೆಗೂ ಹೋಗುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News