ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಈ ಪ್ಯಾನ್ ಇಂಡಿಯಾ ಸಿನಿಮಾಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಡುಗಡೆಯಾದ 5 ಭಾಷೆಗಳಲ್ಲಿಯೂ ಸಿನಿಮಾ ಉತ್ತಮ ಗಳಿಕೆ ಮಾಡಿದೆ. ಸಿನಿ ಪ್ರೇಮಿಗಳು ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದ ಸ್ಟಾರ್ ನಟರು, ನಿರ್ದೇಶಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನಕ್ಕೆ ಮೆಚ್ಚುಗೆಯ ಮಹಾಪೂರವೇ ಬರುತ್ತಿದೆ. ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಇಂದಿಗೂ ಸಹ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಇದೀಗ ‘ಕಾಂತಾರ’ ನೋಡಿ ಕರಾವಳಿ ಮೂಲದ ನಟಿ ಪೂಜಾ ಹೆಗ್ಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ Instagram ಸ್ಟೋರಿಯಲ್ಲಿ ಬರೆದುಕೊಂಡಿರುವ ನಟಿ, ‘ಕಾಂತಾರ’ ಸಿನಿಮಾ ನೋಡಿ ಆಶ್ಚರ್ಯಚಕಿತಳಾದೆ, ನನಗೆ ತುಂಬಾ ಹೆಮ್ಮೆಯಾಗುತ್ತಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ʼಪುನೀತ್ ಪರ್ವʼಕ್ಕೆ ʼದರ್ಶನ್-ಸುದೀಪ್ʼ ಬಂದಿಲ್ಲ : ಇಬ್ಬರಿಗೂ ಅಪ್ಪು ಮೇಲೆ ಅಪಾರ ಪ್ರೀತಿ..!
Thank you, @hegdepooja.#Kantara @shetty_rishab @VKiragandur @hombalefilms @gowda_sapthami @HombaleGroup @AJANEESHB #ArvindKashyap @actorkishore @KantaraFilm pic.twitter.com/qIhaOsvOzE
— Kantara - A Legend (@KantaraFilm) October 24, 2022
ತೆಲುಗು ಭಾಷೆಯಲ್ಲಿ ‘ಕಾಂತಾರ’ ಸಿನಿಮಾ ನೋಡಿದ ಪೂಜಾ, ‘ನಿಮಗೆ ತಿಳಿದಿದ್ದನ್ನು ಬರೆಯಿರಿ. ನಿಮ್ಮ ಹತ್ತಿರದ ಹೃದಯಕ್ಕೆ ಹೃಯದಿಂದ ಕಥೆ ಹೇಳಿ. ಚಿತ್ರದ ಕೊನೆಯ 20 ನಿಮಿಷಗಳು ನನಗೆ ನಡುಕ ಹುಟ್ಟಿಸಿತು. ನಾನು ದಿಗ್ಭ್ರಮೆಗೊಂಡೆ ಮತ್ತು ಸಂಪೂರ್ಣ ವಿಸ್ಮಯಗೊಂಡಿದ್ದೇನೆ. ರಿಷಬ್ ಶೆಟ್ಟಿಯವರ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ನೋಡಿ ಹೆಮ್ಮೆಯಾಗುತ್ತಿದೆ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
‘ಕಾಂತಾರ’ ನೋಡಿ ನನ್ನ ಬಾಲ್ಯದ ನೆನಪುಗಳು ಮರುಕಳಿಸಿದವು. ನಾನು ಬಾಲ್ಯದಲ್ಲಿ ನೋಡಿದ ಕೋಲ, ಭೂತಗಳು, ದೈವಾರಾಧನೆ ಇವುಗಳ ಬಗ್ಗೆ ತುಂಬಾ ಗೌರವದಿಂದ ಮತ್ತು ಅಷ್ಟೇ ಸುಂದರವಾಗಿ ಸಿನಿಮಾ ಮಾಡಲಾಗಿದೆ. ಮತ್ತಷ್ಟು ಶಕ್ತಿ ಸಿಗಲಿ ನಿಮಗೆ. ಎಲ್ಲರೂ ಸಿನಿಮಾವನ್ನು ವೀಕ್ಷಿಸಿ’ ಎಂದು ನಟಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Diwali 2022 ಔತಣಕೂಟದಲ್ಲಿ ಪತಿಯೊಂದಿಗೆ ಬಹಿರಂಗವಾಗಿ ಲಿಪ್ ಲಾಕ್ ಮಾಡಿದ ಶ್ರೀಯಾ ಸರನ್.. ವಿಡಿಯೋ ನೋಡಿ
ನಟಿ ಪೂಜಾ ಹೆಗ್ಡೆ ಉಡುಪಿ ಜಿಲ್ಲೆಯ ಕಾರ್ಕಳ ಮೂಲದವರು. ಮಹಾರಾಷ್ಟ್ರದಲ್ಲಿಯೇ ಹುಟ್ಟಿ ಬೆಳೆದಿರುವ ಪೂಜಾ ಆಗಾಗ ತಮ್ಮೂರಿಗೆ ಬಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇತ್ತೀಚಿಗಷ್ಟೆ ಅವರು ಉಡುಪಿ ಜಿಲ್ಲೆಯ ಕಾಪು ಮಾರಿ ಗುಡಿಗೆ ಭೇಟಿ ನೀಡಿದ್ದರು. ‘ಕಾಂತಾರಾ’ ಸಿನಿಮಾ ಈಗಾಗಲೇ 100 ಕೋಟಿ ರೂ. ಕ್ಲಬ್ ಸೇರಿದ್ದು ಹಲವು ಹೊಸ ದಾಖಲೆಗಳನ್ನು ಮಾಡಿದೆ. IMDBಯಲ್ಲಿ ದಾಖಲೆಯ 10ಕ್ಕೆ 9.3 ರೇಟಿಂಗ್ ಪಡೆದರೆ, ಬುಕ್ ಮೈ ಶೋನಲ್ಲಿ 9.9 ರೇಟಿಂಗ್ ಪಡೆದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ