29 ನೇ ವಸಂತಕ್ಕೆ ಕಾಲಿಟ್ಟ ರಾಕ್ ಸ್ಟಾರ್ ಚಂದನ್ ಶೆಟ್ಟಿ

ರಾಕ್ ಸ್ಟೈಲ್ ಮ್ಯೂಸಿಕ್ ನಿಂದಲೇ ಫೇಮಸ್ ಆಗಿರುವ ಚಂದನ್ ಶೆಟ್ಟಿ 

Last Updated : Sep 17, 2018, 07:14 AM IST
29 ನೇ ವಸಂತಕ್ಕೆ ಕಾಲಿಟ್ಟ ರಾಕ್ ಸ್ಟಾರ್ ಚಂದನ್ ಶೆಟ್ಟಿ  title=

ಬೆಂಗಳೂರು: ರಾಕ್ ಸ್ಟಾರ್ ಚಂದನ್ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 29 ನೇ ವಸಂತಕ್ಕೆ ಕಾಲಿಟ್ಟ ರಾಕ್ ಸ್ಟಾರ್ ತಡರಾತ್ರಿಯೇ ಕುಟುಂಬಸ್ಥರು, ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಮತ್ತು ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು.

ನಗರದ ನಾಗರಬಾವಿಯ ತಮ್ಮ ನಿವಾಸದಲ್ಲಿ ಕುಟುಂಬ ಸಮೇತ ತಡರಾತ್ರಿ ಕೇಕ್ ಕತ್ತರಿಸುವುದರ ಮುಖಾಂತರ ಚಂದನ್ ಶೆಟ್ಟಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ನಿವಾಸದ ಬಳಿ ಸಾಕಷ್ಟು ಮಂದಿ ಅಭಿಮಾನಿಗಳು ಸೇರಿದ್ದರು. ಇನ್ನು ಇದೇ ವೇಳೆ ಮೈಸೂರಿನಿಂದ ನಿವೇಧಿತ ಹಾಗೂ ಆಕೆಯ ತಂದೆ ತಾಯಿ ಕೂಡ ಚಂದನ್ ಹುಟ್ಟ ಹಬ್ಬ ಆಚರಿಸಲು ಆಗಮಿಸಿದ್ದರು.

ಈ ವೇಳೆ ಅಭಿಮಾನಿಗಳ ಕಂಡು ಸಂತಸ ವ್ಯಕ್ತ ಪಡಿಸಿದ ಚಂದನ್, ಬಿಗ್ ಬಾಸ್ ನನಗೆ ಬಿಗ್ ಟರ್ನಿಂಗ್  ನೀಡಿದೆ. ಜನ ನನ್ನ ಹೆಚ್ಚು ಗುರುತಿಸಿದ್ದಾರೆ. ನನ್ನ ಸಾಂಗ್ ಗಳನ್ನು ಇಷ್ಟ ಪಟ್ಟಿದ್ದಾರೆ. ಅತಿ ಶೀಘ್ರದಲ್ಲಿ ಹೊಸ ಆಲ್ಬಂ ಕೂಡ ಬಿಡುಗಡೆ ಮಾಡೋದಾಗಿ ತಿಳಿಸಿದರು.

"CS" ಎಂದು ವಿನೂತನವಾಗಿ ರೆಡಿ ಮಾಡಿದ್ದ ಕೇಕ್ ಕತ್ತರಿಸಿದ ಚಂದನ್ ಶೆಟ್ಟಿಗೆ ನೂರಾರು ಅಭಿಮಾನಿಗಳು ಶುಭಾಶಯ ಕೋರಿದರು. ಆ ವಿಡಿಯೋವನ್ನು ನೀವೂ ಒಮ್ಮೆ ನೋಡಿ..

ಇನ್ನು ಚಂದನ್ ಹುಟ್ಟು ಹಬ್ಬಕ್ಕೆ ಶುಭಾಕೋರಿರುವ ಅಭಿಮಾನಿಗಳು, ನಿಮ್ಮ ಎಲ್ಲಾ ಕನಸು ನನಸಾಗಲಿ. ನಿಮ್ಮ ಗುರಿ ತಲುಪಲು, ನಿಮ್ಮ ಅಭಿಮಾನಿಗಳ ಪ್ರೋತ್ಸಾಹ ಯಾವಾಗಲೂ ನಿಮ್ಮ ಜೊತೆ ಇರುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳುಹಿಸುತ್ತಿದ್ದಾರೆ.

Trending News