Jailer Movie : ರಜನಿಕಾಂತ್ ಅಭಿನಯದ ಜೈಲರ್ ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬಸ್ಟರ್ ಕಲೆಕ್ಷನ್ ಗಳೊಂದಿಗೆ ಮೇಲುಗೈ ಸಾಧಿಸುತ್ತಿದೆ. ಜೈಲರ್ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಯಿತು ಮತ್ತು ಬಹಳ ಸಮಯದ ನಂತರ ರಜನಿಕಾಂತ್ ಅವರಿಗೆಹಿಟ್ ನೀಡಿತು. ಆದರೆ ರಜನಿಕಾಂತ್ ಅವರಿಗಿಂತ ಮೊದಲು ಜೈಲರ್ ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರದಲ್ಲಿ ನಟಿಸಲು ಮತ್ತೊಬ್ಬ ನಟನನ್ನು ಆಯ್ಕೆ ಮಾಡಿದ್ದರು ಎನ್ನಲಾಗಿದೆ. ವರದಿಗಳ ಪ್ರಕಾರ, ನಿರ್ದೇಶಕ ನೆಲ್ಸನ್ ಚಿತ್ರದಲ್ಲಿ ಮೊದಲು ರಜನಿ ಪಾತ್ರವನ್ನು ಚಿರಂಜೀವಿ ಮಾಡಲು ಚಿಂತಿಸಿದ್ದರು. ಜೈಲರ್ ನಲ್ಲಿ ಮಾಸ್ ಸಾಂಗ್ ಸೀನ್ ಗಳು ಮತ್ತು ಡ್ಯಾನ್ಸ್ ಮೂಮೆಂಟ್ ಗಳು ಇಲ್ಲದ ಕಾರಣ ಚಿರಂಜೀವಿ ಜೈಲರ್ ಗೆ ಕಮಿಟ್ ಆಗಿಲ್ಲ ಎಂದು ಹೇಳಲಾಗುತ್ತಿದೆ.
ಮೆಗಾಸ್ಟಾರ್ ಚಿರಂಜೀವಿ ತೆಲುಗು ಚಿತ್ರರಂಗದ ಪ್ರಮುಖ ನಾಯಕರಲ್ಲಿ ಒಬ್ಬರು. ಮಾಸ್ ಹೀರೋ ಆಗಿ ಬರುತ್ತಿರುವ ಚಿರಂಜೀವಿ ಈ ಕಾರಣಕ್ಕೆ ಜೈಲರ್ ಚಿತ್ರದಲ್ಲಿ ನಟಿಸಲು ಒಪ್ಪಿರಲಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಜೈಲರ್ ಬೇಡ ಎನ್ನದೆ ನಿರ್ದೇಶಕ ನೆಲ್ಸನ್ ಗೆ ‘ನಾವು ಆಮೇಲೆ ನೋಡೋಣ’ ಎಂದು ಹೇಳಿದ್ದರು ಎಂದು ಹೇಳಲಾಗುತ್ತಿದೆ. ಇದನ್ನು ಯಾರೂ ಅಧಿಕೃತವಾಗಿ ದೃಢಪಡಿಸದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವ್ಯಾಪಕ ಚರ್ಚೆಯಾಗುತ್ತಿದೆ.
ಇದನ್ನೂ ಓದಿ : ರಾಜಕಾರಣಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ ವಿಜಯಲಕ್ಷ್ಮಿಗೆ ಸಂಕಷ್ಟ!
ಸದ್ಯಕ್ಕೆ, ಜೈಲರ್ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ 650 ಕೋಟಿ ರೂ ಕಲೆಕ್ಷನ್ ಮಾಡಿದೆ. ಶಾರುಖ್ ಖಾನ್ ಅಭಿನಯದ ದಿಲ್ವಾಲೆ ಚಿತ್ರದ ಮಲೇಷ್ಯಾ ಬಾಕ್ಸ್ ಆಫೀಸ್ ಸಂಗ್ರಹವನ್ನು ಜೈಲರ್ ಹಿಂದಿಕ್ಕಿದೆ. ಚಲನಚಿತ್ರ ನಿರ್ಮಾಣ ಮತ್ತು ವಿತರಣಾ ಕಂಪನಿ ಐಂಗರನ್ ಇಂಟರ್ನ್ಯಾಷನಲ್ ಅದರ ಬಗ್ಗೆ ಟ್ವೀಟ್ ಮಾಡಿದೆ. ಜೈಲರ್ ಮಲೇಷ್ಯಾದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ. ಇತಿಹಾಸದಲ್ಲಿ ಅಭೂತಪೂರ್ವ ಕ್ಷಣ ಎಂದಿದೆ.
ಚಿತ್ರದಲ್ಲಿ ರಮ್ಯಾ ಕೃಷ್ಣನ್, ಯೋಗಿ ಬಾಬು, ಜಾಫರ್ ಸಾದಿಕ್ ಮುಂತಾದವರು ನಟಿಸಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸಿರುವ ಜೈಲರ್ ಚಿತ್ರದಲ್ಲಿ ಜಾಕಿ ಶ್ರಾಫ್, ಮೋಹನ್ ಲಾಲ್ ಮತ್ತು ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಜೈಲರ್ನ ದೊಡ್ಡ ಯಶಸ್ಸಿನ ನಂತರ, ನೆಲ್ಸನ್ ಜೈಲರ್ 2 ಅನ್ನು ನಿರ್ದೇಶಿಸಲು ಯೋಜಿಸಿದ್ದಾರೆ ಎನ್ನಲಾಗಿದೆ. ರಜನಿ ಮುಂದೆ ಜ್ಞಾನವೇಲ್ ನಿರ್ದೇಶನದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಜನಿ ಈಗಾಗಲೇ ಅತಿಥಿ ಪಾತ್ರದಲ್ಲಿ ನಟಿಸಿರುವ ಲಾಲ್ ಸಲಾಂ ಶೀಘ್ರದಲ್ಲೇ ತೆರೆಗೆ ಬರಲಿದೆ. ಇದರ ಬೆನ್ನಲ್ಲೇ ಲೋಕೇಶ್ ಕನಕರಾಜ್ ನಿರ್ದೇಶನದ 171ನೇ ಚಿತ್ರದಲ್ಲಿ ರಜನಿ ನಟಿಸಲಿದ್ದಾರೆ.
ಇದನ್ನೂ ಓದಿ : ಲಿಯೋ ಆಡಿಯೋ ಲಾಂಚ್ ಫೇಕ್ ಟಿಕೆಟ್ ಮಾರಾಟ : ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.