ಲಿಯೋ ಆಡಿಯೋ ಲಾಂಚ್‌ ಫೇಕ್‌ ಟಿಕೆಟ್‌ ಮಾರಾಟ : ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್‌

Leo : ಬಹುನಿರೀಕ್ಷಿತ ಲಿಯೋ ಸಿನಿಮಾ ಆಡಿಯೋ ಲಾಂಚ್‌ ಕಾರ್ಯಕ್ರಮವನ್ನು ಸೆ.30ರಂದು ಹಮ್ಮಿಕೊಳ್ಳಲಾಗಿತ್ತು. ಆದರೆ ಈಗ ಚಿತ್ರತಂಡ ಆಡಿಯೋ ಲಾಂಚ್‌ ಇವೆಂಟ್‌ನ್ನು ರದ್ದುಗೊಳಿಸಿದೆ. ಈ ಕುರಿತು ಮಾಹಿತಿ ಇಲ್ಲಿದೆ.

Written by - Zee Kannada News Desk | Last Updated : Sep 27, 2023, 06:40 PM IST
  • ಲಿಯೋ ಸಿನಿಮಾ ಇದೇ ಆಕ್ಟೋಬರ್‌ 19ರಂದು ವಿಶ್ವದಾದ್ಯಂತ ರಿಲೀಸ್‌ ಆಗಲು ಸಜ್ಜಾಗಿದೆ.
  • ಸಿನಿಮಾ ತಂಡ ಆಡಿಯೋ ಲಾಂಚ್‌ ಇವೆಂಟ್ ರದ್ದು ಮಾಡಿದೆ.
  • ಫೇಕ್‌ ಟಿಕೆಟ್‌ ಪಾಸ್‌ಗಳನ್ನು ಮಾರಾಟ ಮಾಡಲಾಗಿದೆಯೆಂದು ತಿಳಿದು ಬಂದಿದೆ.
ಲಿಯೋ ಆಡಿಯೋ ಲಾಂಚ್‌ ಫೇಕ್‌ ಟಿಕೆಟ್‌ ಮಾರಾಟ : ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್‌ title=

Leo Movie Audio Launch : ಲೋಕೇಶ್‌ ಕನಕರಾಜ್‌ ನಿರ್ದೇಶನದ ಬಹುನಿರೀಕ್ಷಿತ ಲಿಯೋ ಸಿನಿಮಾ ಇದೇ ಆಕ್ಟೋಬರ್‌ 19ರಂದು ವಿಶ್ವದಾದ್ಯಂತ ರಿಲೀಸ್‌ ಆಗಲು ಸಜ್ಜಾಗಿದೆ. ಈ ಚಿತ್ರದ ಪ್ರೀ-ಬುಕಿಂಗ್‌ ಟಿಕೆಟ್ಸ್‌ ಈಗಾಗಲಿ ಯುಕೆ ಹಾಗು ಯುಎಸ್‌ಎನಲ್ಲಿ ಓಪನ್‌ ಆಗಿದೆ. ಈ ಸಿನಿಮಾವನ್ನು ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ತೆರೆ ಕಾಣಲು ಸಿದ್ದವಾಗಿದ್ದು, ಐಮ್ಯಾಕ್‌ ಹಾಗೂ ಬೇರೆ ಫಾರೆಮೆಟ್‌ನಲ್ಲಿ ತೆರೆ ಮೇಲೆ ಬರಲಿದೆ. 

ಸಿನಿಮಾವು ಆಡಿಯೋ ಲಾಂಚ್‌ ಕಾರ್ಯಕ್ರಮವನ್ನು ಸೆ.30ರಂದು ಹಮ್ಮಿಕೊಳ್ಳಲಾಗಿತ್ತು. ಆಡಿಯೋ ಲಾಂಚ್‌ ಕಾರ್ಯಕ್ರಮವೆಂದಾಗ ಸಾಕಷ್ಟು ಜನ ಸೇರುವುದು ಸಾಮಾನ್ಯ ಸಂಗತಿ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ಚಿತ್ರತಂಡ ಆಡಿಯೋ ಬಿಡುಗಡೆ ಸಮಾರಂಭವನ್ನು ಸಿದ್ಧಗೊಳಿಸಿತ್ತು.

ಇದನ್ನು ಓದಿ : ಇತ್ತೀಚಿಗಷ್ಟೇ ಇನ್ಸಸ್ಟಾಗ್ರಾಂನಲ್ಲಿ ಬಹು ವೈರಲ್‌ ಆಗುತ್ತಿದ್ದ ʼನಾನು ನಂದಿನಿʼ ರೀಲ್‌ನ ಲಿರಿಕ್ಸ್‌ ಚೇಂಜ್‌ ಆಗಿ ಇನ್ನೊಂದು ರೀಲ್‌

ಆದರೆ ಸದ್ಯಕ್ಕೆ ಫ್ಯಾನ್‌ಗಳ ಕಾತುರತೆಗೆ ಚಿತ್ರತಂಡ ಧಕ್ಕೆಯನ್ನುಂಟು ಮಾಡಿದೆ. ಇನ್ನೇನು ಸಿನಿಮಾ ರಿಲೀಸ್‌ ಆಗಲು ಸ್ವಲ್ಪ ಕಾಲ ಮಾತ್ರವಿದ್ದು, ಫ್ಯಾನ್ಸ್‌ಗಳು ಚಿತ್ರವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಆಡಿಯೋ ಲಾಂಚ್‌ ಇವೆಂಟ್‌ನ್ನು ರದ್ದುಗೊಳಿಸಲಾಗಿದೆ. 

ಹೌದು ಅಭಿಮಾನಿಗಳಿಗೆ ಇದು ಬೇಸರವನ್ನುಂಟು ಮಾಡಿದ್ದು, ಆದರೆ ಸಿನಿಮಾ ತಂಡ ಆಡಿಯೋ ಲಾಂಚ್‌ ಇವೆಂಟ್ ರದ್ದು ಮಾಡಿದ್ದು ಒಳ್ಳೆಯ ನಿರ್ಧಾರವೇ ಆಗಿದೆಯೆಂದು ತಿಳಿದು ಬರುತ್ತಿದೆ. ಆ ಕಾರಣ ಏನು ಅಂತ ಕೇಳಿದರೇ ಶಾಕ್‌ ಆಗುವುದಂತು ಖಂಡಿತ.

ಲಿಯೋ ಸಿನಿಮಾದ ಆಡಿಯೋ ಲಾಂಚ್‌ ಇವೆಂಟ್‌ ಇದೇ ಸೆಪ್ಟಂಬರ್‌ 30ರಂದು ಚೆನೈನ ಜವಾಹರ್‌ಲಾಲ್‌ ನೆಹರು ಸ್ಟೇಡಿಯಂನಲ್ಲಿ ಹಮ್ಮಿಕೊಳ್ಳಲಾಗಿತ್ತು. ಆ ಜಾಗದಲ್ಲಿ ಕೇವಲ ಆರು ಸಾವಿರದಿಂದ ಹತ್ತು ಸಾವಿರ ಜನರು ಸೇರುವಷ್ಟೇ ಮಾತ್ರ ಅವಕಾಶವಿದ್ದು, ಅಭಿಮಾನಗಳ ಸಂಖ್ಯೆ ಜಾಸ್ತಿ ಸೇರುವ ಸಾಧ್ಯತೆ ಇರುವ ಕಾರಣ, ಫ್ಯಾನ್ಸ್‌ಗಳ ಸುರಕ್ಷತೆಗಾಗಿ ಆಗ್ರನೈಸ್‌ ಮಾಡಿದ ಕಾರ್ಯಕ್ರಮ ರದ್ದಾಗಿದೆ ಎಂದು ಒಂದು ಕಡೆಯಿಂದ ಕೇಳಿ ಬಂದರೆ, ಇನ್ನೊಂದು ಕಡೆ ವರದಿಗಳ ಪ್ರಕಾರ ಲಿಯೋ ಸಿನಿಮಾದ ಆಡಿಯೋ ಲಾಂಚ್ ಇವೆಂಟ್‌ಗೆ ಪಾಸ್‌ಗಳಿಗಾಗಿ‌, ಪ್ರತಿ ಪಾಸ್‌ಗೂ 3000ರೂ ಯಿಂದ 6000ರೂ ಗಳವರೆಗೂ ಮಾರಾಟ ಮಾಡಲಾಗಿದೆ. ಈ ಇವೆಂಟ್‌ಗೆ ಬೇಡಿಕೆ ಜಾಸ್ತಿಯಿರುವ ಕಾರಣ ಫೇಕ್‌ ಟಿಕೆಟ್‌ ಪಾಸ್‌ಗಳನ್ನು ಮಾರಾಟ ಮಾಡಲಾಗಿದೆಯೆಂದು ತಿಳಿದು ಬಂದಿದೆ. ಈ ವಿಷಯ ವಾಟ್ಸಪ್‌ ಇಮೇಜ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವುದನ್ನು ಕಂಡು ಚಿತ್ರ ತಯಾರಕರಿಗೆ ತಿಳಿದಿದೆ.

ಕೆಲವು ಅಭಿಮಾನಿಗಳು ಲಿಯೋ ಸಿನಿಮಾದ ಪ್ರೋಡಕ್ಷನ್‌ ವಿರುದ್ದ ಬೇಸರವನ್ನು ವ್ಯಕ್ತಪಡಿಸಿದರೆ, ಇನ್ನು ಕೆಲವರು #westandwithleo ಅಂತ ಸಿನಿಮಾಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News