ಗಾಯಕ ಅಂಕಿತ್ ತಿವಾರಿ ತಂದೆಗೆ ಹೊಡೆದ ಕಂಬ್ಳಿ ಪತ್ನಿ; ದೂರು ದಾಖಲು

ರಾಜ್ ಕುಮಾರ್ ತಿವಾರಿ ಅವರು ತಮ್ಮನ್ನು ಪದೇ ಪದೇ ಮುಟ್ಟಿ ಅನುಚಿತವಾಗಿ ವರ್ತಿಸಿದ್ದರಿಂದ ಹೊಡೆದಿರುವುದಾಗಿ ಕಂಬ್ಳಿ ಪತ್ನಿ ಹೇಳಿದ್ದಾರೆ. 

Last Updated : Jul 2, 2018, 02:58 PM IST
ಗಾಯಕ ಅಂಕಿತ್ ತಿವಾರಿ ತಂದೆಗೆ ಹೊಡೆದ ಕಂಬ್ಳಿ ಪತ್ನಿ; ದೂರು ದಾಖಲು title=

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್ ಕಂಬ್ಳಿ ಪತ್ನಿ ತಮ್ಮೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ಗಾಯಕ ಅಂಕಿತ್ ತಿವಾರಿ ತಂದೆ ಆಕೆಯ ವಿರುದ್ಧ ಮುಂಬೈನ ಬಂಗೂರ್ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಂಕಿತ್ ತಂದೆ 59 ವರ್ಷದ ರಾಜ್ ಕುಮಾರ್ ತಿವಾರಿ ಅವರು ಕಂಬ್ಳಿ ಪತ್ನಿ ಆಂಡ್ರಿಯಾ ಹೆವಿಟ್ ಭಾನುವಾರ ಮುಂಬೈ ಮಾಲ್'ನಲ್ಲಿ ತನ್ನ ಮೇಲೆ ಹಲ್ಲೆ ಮಾಡಿದ್ದಾಗಿಯೂ, ತಮ್ಮನ್ನು ಹೊದೆಯಲ್ಲಿ ಪಾದರಕ್ಷೆಗಳನ್ನು ಕೈಗೆತ್ತಿಕೊಂಡಿದ್ದಾಗಿಯೂ ಆರೋಪಿಸಿದ್ದಾರೆ. 

ಆದರೆ, ರಾಜ್ ಕುಮಾರ್ ತಿವಾರಿ ಅವರು ತಮ್ಮನ್ನು ಪದೇ ಪದೇ ಮುಟ್ಟಿ ಅನುಚಿತವಾಗಿ ವರ್ತಿಸಿದ್ದರಿಂದ ಹೊಡೆದಿರುವುದಾಗಿ ಕಂಬ್ಳಿ ಪತ್ನಿ ಹೇಳಿದ್ದಾರೆ. 

ಈ ಸಂಬಂಧ ಬಂಗೂರ್ ನಗರ ಪೋಲಿಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

Trending News