pushpa 2 : ಅಲ್ಲು ಎದುರು ಅಬ್ಬರಿಸಲು ಜಾಲಿರೆಡ್ಡಿ ಸಿದ್ದ... ಪುಷ್ಪ 2ಗೆ ಡಾಲಿ ರೆಡಿ..!

Daali Dhananjay Pushpa 2 : ಕನ್ನಡದ ಡಾಲಿ ತೆಲುಗಿನಲ್ಲಿ ಜಾಲಿ ರೆಡ್ಡಿಯಾಗಿ ಅಲ್ಲು ಅರ್ಜುನ್ ಎದುರು ಅಬ್ಬರಿಸಿದ್ದಾರೆ. ಸೂಪರ್ ಹಿಟ್ ಪುಷ್ಪದಲ್ಲಿ ಅರ್ಭಟಿಸಿದ್ದ ಜಾಲಿರೆಡ್ಡಿ, ಪುಷ್ಪ 2 ಚಿತ್ರದಲ್ಲೂ ಕಮಾಲ್ ಮಾಡೋಕೆ ಸಜ್ಜಾಗಿದ್ದು, ತೆರೆ ಮರೆಯಲ್ಲೇ ಡಾಲಿ ಪುಷ್ಪ 2ಗೆ ಸಜ್ಜಾಗ್ತಿದ್ದಾರೆ. ಹಾಗಾದ್ರೆ ಪುಷ್ಪ 2 ಚಿತ್ರದಲ್ಲಿ ಡಾಲಿ ಅಲಿಯಾಸ್ ಜಾಲಿ ಪಾತ್ರ ಹೇಗಿರುತ್ತೆ ಗೊತ್ತಾ..?

Written by - YASHODHA POOJARI | Edited by - Krishna N K | Last Updated : Dec 20, 2022, 12:39 PM IST
  • ಕನ್ನಡದ ಡಾಲಿ ತೆಲುಗಿನಲ್ಲಿ ಜಾಲಿ ರೆಡ್ಡಿಯಾಗಿ ಅಲ್ಲು ಅರ್ಜುನ್ ಎದುರು ಅಬ್ಬರಿಸಿದ್ದರು.
  • ಪುಷ್ಪದಲ್ಲಿ ಅರ್ಭಟಿಸಿದ್ದ ಡಾಲಿ ಪುಷ್ಪ 2 ಚಿತ್ರದಲ್ಲೂ ಕಮಾಲ್ ಮಾಡೋಕೆ ರೆಡಿ.
  • ಪುಷ್ಪ 2 ತಂಡ ಸೇರಲು ಡಾಲಿ ಧನಂಜಯ್‌ ಕಾತರದಿಂದ ಕಾಯ್ತಿದ್ದಾರೆ.
pushpa 2 : ಅಲ್ಲು ಎದುರು ಅಬ್ಬರಿಸಲು ಜಾಲಿರೆಡ್ಡಿ ಸಿದ್ದ... ಪುಷ್ಪ 2ಗೆ ಡಾಲಿ ರೆಡಿ..! title=

Daali Dhananjay : ಕನ್ನಡದ ಡಾಲಿ ತೆಲುಗಿನಲ್ಲಿ ಜಾಲಿ ರೆಡ್ಡಿಯಾಗಿ ಅಲ್ಲು ಅರ್ಜುನ್ ಎದುರು ಅಬ್ಬರಿಸಿದ್ದಾರೆ. ಸೂಪರ್ ಹಿಟ್ ಪುಷ್ಪದಲ್ಲಿ ಅರ್ಭಟಿಸಿದ್ದ ಜಾಲಿರೆಡ್ಡಿ, ಪುಷ್ಪ 2 ಚಿತ್ರದಲ್ಲೂ ಕಮಾಲ್ ಮಾಡೋಕೆ ಸಜ್ಜಾಗಿದ್ದು, ತೆರೆ ಮರೆಯಲ್ಲೇ ಡಾಲಿ ಪುಷ್ಪ 2ಗೆ ಸಜ್ಜಾಗ್ತಿದ್ದಾರೆ. ಹಾಗಾದ್ರೆ ಪುಷ್ಪ 2 ಚಿತ್ರದಲ್ಲಿ ಡಾಲಿ ಅಲಿಯಾಸ್ ಜಾಲಿ ಪಾತ್ರ ಹೇಗಿರುತ್ತೆ ಗೊತ್ತಾ..?

ಪುಷ್ಪ... 2021 ರಲ್ಲಿ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿದ್ದ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ. ಟ್ಯಾಲೆಂಟೆಡ್ ಡೈರೆಕ್ಟರ್ ಸುಕುಮಾರ್ ತನ್ನ ಯೋಚನಾ ಲಹರಿಯನ್ನೆ ಬದಲಿಸಿ ಮಾಡಿದ್ದ ಪುಷ್ಪ ಟಾಲಿವುಡ್ ಮಾತ್ರವಲ್ಲ ಬಾಲಿವುಡ್ ನಲ್ಲೂ ಕಮಾಲ್ ಮಾಡಿತ್ತು. ಅಲ್ಲದೆ ಚಿತ್ರದ ಪ್ರತಿಯೊಂದು ಪಾತ್ರಗಳು
ಇಂದಿಗೂ ಸಿನಿರಸಿಕರ ಅಂಗಳದಲ್ಲಿ ಜೀವಂತವಾಗಿವೆ.

ಇದನ್ನೂ ಓದಿ: ಹೊಸ ವರ್ಷದ ಆರಂಭದಲ್ಲೇ ರಿಯಲ್ ಸ್ಟಾರ್ ಉಪ್ಪಿ ಅಭಿಮಾನಿಗಳಿಗೆ ಬಿಗ್ ಬ್ರೇಕಿಂಗ್ ನ್ಯೂಸ್...?!

ಪುಷ್ಪರಾಜ್ ಅಲಿಯಾಸ್ ಪುಷ್ಪ ಆಗಿ ಅಲ್ಲು ಅರ್ಜುನ್ ಯಾರಿಗೂ ಬಗ್ಗೋದೆ ಇಲ್ಲ ಅಂತ ಅಬ್ಬರಿಸಿದ್ರೆ. ಶ್ರೀ ವಲ್ಲಿಯಾವಿ ರಶ್ಮೀಕಾ ಸಖತ್ ಅಗಿ ಸೊಂಟ ಬಳುಕಿಸಿ ಗಮನ‌ಸೆಳೆದಿದ್ರು. ಅದೇ ರೀತಿ ಪುಷ್ಪರಾಜ್ ಎದುರು ಜಾಲಿರೆಡ್ಡಿ ಅವತಾರದಲ್ಲಿ ಡಾಲಿ ತನ್ನ ಪೊಗರು ತೋರಿಸಿ ಮೀಸೆ ತಿರುವಿದ್ರು. ಹೀಗೆ ಹಲವು ವಿಶೇಷತೆಗಳ ಪುಷ್ಪ  ಪ್ರೇಕ್ಷಕರ ಮನ ಗೆದ್ದಿತ್ತು‌. ಅಲ್ಲದೆ ನಿರ್ದೇಶಕ ಸುಕುಮಾರ್ ಪಕ್ಕಾ ಪ್ಲಾನ್ ಮಾಡಿ ಪುಷ್ಪ ರಿಲೀಸ್ ಬೆನ್ನಲ್ಲೆ ಪುಷ್ಪ 2 ಅನೌನ್ಸ್ ಮಾಡಿ ಕನ್ನಡದ ಚಿನ್ನದ ಮೀನು ಕೆಜಿಎಫ್ ಹಾದಿಯಲ್ಲಿ ಸಾಗುವ ಸೂಚನೆ ಕೊಟ್ರು. 

ಅಲ್ಲದೆ ಪುಷ್ಪ 2 ಕತೆಗಾಗಿ ಸಾಕಷ್ಟು ಸಮಯ ಮೀಸಲಿಟ್ಟು  ಪವರ್ ಫುಲ್ ಕತೆ ರೆಡಿ ಮಾಡ್ಕೊಂಡ್ ಸದ್ದಿಲ್ಲದೆ ಪುಷ್ಟ 2 ಚಿತ್ರದ ಶೂಟಿಂಗ್ ಶುರುಮಾಡಿರುವ ಸುಕುಮಾರ್ ಪುಷ್ಪ ಚಿತ್ರದಂತೆ ಪುಷ್ಪ 2 ನಲ್ಲೂ ಅಲ್ಲು ಅರ್ಜುನ್ ನ ಸಖತ್ ರಗಡ್ ಅವತಾರದಲ್ಲಿ ತೋರಿಸೋಕೆ ಸಜ್ಜಾಗಿದ್ದಾರೆ. ಜೊತೆಗೆ ಪುಷ್ಪದಲ್ಲಿ ಡಾಲಿ ನಿಭಾಯಿಸಿದ್ದ ಜಾಲಿ ರೆಡ್ಡಿ ಪಾತ್ರ ಟಾಲಿವುಡ್ ಅಂಗಳದಲ್ಲಿ ಗಮನ ಸೆಳೆದಿತ್ತು‌‌. ಇದನ್ನ ಗಮನಿಸಿರೋ ಸುಮಕುಮಾರ್ ಪುಷ್ಪ 2 ಚಿತ್ರದಲ್ಲಿ ಜಾಲಿರೆಡ್ಡಿಗೆ ಹೆಚ್ಚು ಜಾಗ ಮಾಡಿ ಕೊಡುವ ಕತೆ ಮಾಡಿದ್ದಾರೆ ಅನ್ನೋವಿಚಾರ ಸಖತ್ ವೈರಲ್ ಆಗಿತ್ತು. ಅಲ್ಲು ಅರ್ಜುನ್ ಪಾತ್ರದಂತರ ಡಾಲಿ ಪಾತ್ರಕ್ಕೂ ಎಫರ್ಟ್ ಹಾಕಿರುವ ಸುಕುಮಾರ್ ಪುಷ್ಪ 2 ನಲ್ಲಿ ಜಾಲಿರೆಡ್ಡಿಯನ್ನ ಮತ್ತಷ್ಟು ವೈಲೆಂಟ್ ಅಗಿಸೋ ಕಸರತ್ತು ಮಾಡಿದ್ದಾರೆ.

ಇದನ್ನೂ ಓದಿ: ಅಪ್ಪು ಇದ್ರೆ ಇದನ್ನು ಮೆಚ್ಚಿಕೊಳ್ಳುತ್ತಿದ್ರಾ..? ಕನ್ನಡಕ್ಕೆ ದರ್ಶನ್‌ ಕೊಡುಗೆ ಸಾಕಷ್ಟಿದೆ : ʼಫ್ಯಾನ್ಸ್‌ಗೆ ಕಿಚ್ಚನ ಪ್ರೀತಿ ಪಾಠʼ

ಅಲ್ಲದೆ ಡಾಲಿ ಕೂಡ ಜಾಲಿ ಪಾತ್ರಕ್ಕೆ ತೆರೆಮರೆಯಲ್ಲೇ ಸಜ್ಜಾಗ್ತಿದ್ದು, ಹೊಯ್ಸಳ ಹಾಗೂ ಉತ್ತರಕಾಂಡ ಚಿತ್ರವನ್ನು ಮುಗಿಸಿ ಪುಷ್ಪ 2 ಅಡ್ಡಕ್ಕೆ ಕಾಲಿಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಈಗಾಗಲೇ ಪುಷ್ಪ 2 ಅಡ್ಡದಿಂದ‌ ಡಾಲಿಗೆ ಬುಲಾವ್ ಬಂದಿದೆ. ಅಲ್ಲದೆ ಜಾಲಿ ಪಾತ್ರಕ್ಕೆ ರಗಡ್ ಲುಕ್ ಬೇಕಿರೋ ಕಾರಣ ಗಡ್ಡ ಬಿಡುವಂತೆ ಸುಕುಮಾರ್ ಡಾಲಿಗೆ ಹೇಳಿದ್ದಾರೆ. ಜೊತೆಗೆ ಕೊಂಚ ದಪ್ಪ ಆಗೋಕು ಹೇಳಿದ್ದು ಜಾಲಿ ಪಾತ್ರಕ್ಕೆ ತಕ್ಕಂತೆ ಡಾಲಿ ಈಗ ಕಟ್ಮಸ್ತಾದ ದೇಹ ಹೊಂದಿದ್ದಾರೆ. ಅದ್ರೆ ಹೊಯ್ಸಳ ಹಾಗೂ ಉತ್ತರಕಾಂಡ ಚಿತ್ರಕ್ಕೆ ಗಡ್ಡ ತೆಗೆಸಿರುವ ಡಾಲಿ ಈ ಎರಡು ಸಿನಿಮಾಗಳನ್ನು ಅದಷ್ಟು ಬೇಗ ಮುಗಿಸಿ. ಜಾಲಿ ಪಾತ್ರಕ್ಕೆ ಹೊಂದುವಂತೆ ಗಡ್ಡ ಬಿಟ್ಟು ನಂತರ ಪುಷ್ಟ 2 ಅಂಗಳಕ್ಕೆ ಡಾಲಿ ಬಲಗಾಲಿಡಲಿದ್ದಾರೆ.

ಈಗಾಗಲೇ ಪುಷ್ಪ 2ಚಿತ್ರದ ಶೂಟಿಂಗ್ ಶುರುಮಾಡಿ ರುವ ಸುಕುಮಾರ್ ಹಗಲು ರಾತ್ರಿಯೆನ್ನದೆ ಶೂಟಿಂಗ್ ಮಾಡ್ತಿದ್ದು, ಫೆಬ್ರವರಿ ವೇಳೆಗೆ ಜಾಲಿ ರೆಡ್ಡಿ ಪಾತ್ರದ ಸನ್ನಿವೇಶಗಳ ಶೂಟ್ ಮಾಡಲು ಶೆಡ್ಯೂಲ್ ರೆಡಿ ಮಾಡ್ಕೊಂಡಿದ್ದಾರೆ.. ಇನ್ನು ತನಗಾಗಿ ಎರಡು ತಿಂಗಳು ಕಾಯ್ದಿರುವ ಪುಷ್ಪ  ತಂಡ ಸೇರಲು ಕಾತರದಿಂದ ಕಾಯ್ತಿರುವ ಡಾಲಿ. ಜನವರಿಯಲ್ಲಿ  ಹೊಯ್ಸಳ ಹಾಗೂ ಉತ್ತರಕಾಂಡ ಚಿತ್ರಗಳ ಕಂಪ್ಲೀಟ್ ಮಾಡಿ. ಜಾಲಿ ಪಾತ್ರಕ್ಕೆ ಗಡ್ಡ ಬಿಟ್ಟು ರಗಡ್ ಆಗಿಯೇ ಪುಷ್ಪ ಅಂಗಳಕ್ಕೆ ಎಂಟ್ರಿ ಕೊಡಲಿದ್ದಾರೆ. ಇನ್ನು ಪುಷ್ಪ 2 ನಲ್ಲಿ ಜಾಲಿ ರೆಡ್ಡಿ ಪಾತ್ರ ಪುಷ್ಪ ರಾಜ್ ಎದುರು ಯಾವ ರೀತಿ ಇರುತ್ತೆ. ಎರಡು ಮದಗಜಗಳ ಕಾಳಗ ತೆರೆ‌ಮೇಲೆ ಯಾವ ರೀತಿ ಮೂಡಿ ಬರುತ್ತೆ ಅನ್ನೋ ಕಾತರ ಈಗ ಪ್ಯಾನ್ ಇಂಡಿಯಾ ಪ್ರೇಕ್ಷಕರಲ್ಲಿ ಮೂಡಿದ್ದು , ಮುಂದಿನ ವರ್ಷ ಅಂತ್ಯದ ವೇಳೆಗೆ ಈ ಎಲ್ಲಾ ಕಾತರಕ್ಕೂ ಸುಕುಮಾರ್ ಯಾವ ರೀತಿ ಉತ್ತರ ಕೊಡ್ತಾರೆ ಕಾದುನೋಡಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News