Jamaaligudda Teaser: ಡಾಲಿ ಧನಂಜಯ್ ‘ಜಮಾಲಿಗುಡ್ಡ’ದ ಟೀಸರ್ ರಿಲೀಸ್

ನಟ ಡಾಲಿ ಧನಂಜಯ್ ಅಭಿನಯದ ‘ಜಮಾಲಿಗುಡ್ಡ’ದ ಟೀಸರ್ ಬಿಡುಗಡೆಯಾಗಿದೆ. ಡಿಸೆಂಬರ್ 30ಕ್ಕೆ ಸಿನಿಮಾ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

Written by - YASHODHA POOJARI | Edited by - Puttaraj K Alur | Last Updated : Nov 30, 2022, 03:09 PM IST
  • ಡಾಲಿ ಧನಂಜಯ್ ಅಭಿನಯದ ‘ಜಮಾಲಿಗುಡ್ಡ’ದ ಟೀಸರ್ ಬಿಡುಗಡೆ
  • ನಿರೀಕ್ಷೆ ಹೆಚ್ಚಿಸಿದ ಮಾಸಿಗೆ ಮಾಸ್.. ಕ್ಲಾಸಿಗೆ ಕ್ಲಾಸ್.. ರೀತಿಯ ಟೀಸರ್
  • ಡಿಸೆಂಬರ್ 30ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ ಚಿತ್ರತಂಡ
Jamaaligudda Teaser: ಡಾಲಿ ಧನಂಜಯ್ ‘ಜಮಾಲಿಗುಡ್ಡ’ದ ಟೀಸರ್ ರಿಲೀಸ್ title=
‘ಜಮಾಲಿಗುಡ್ಡ’ದ ಟೀಸರ್ ಬಿಡುಗಡೆ

ಬೆಂಗಳೂರು: ಡಾಲಿ ಧನಂಜನ್ ಅಭಿನಯದ ‘ಜಮಾಲಿ ಗುಡ್ಡ’ದ ಟೀಸರ್ ಏಕ್ ಧಮ್ ಸ್ಪೆಷಲ್ ಆಗಿದೆ. ಸಿನಿಮಾಟೋಗ್ರಫಿ, ಮ್ಯೂಸಿಕ್, ಆರ್ಟಿಸ್ಟ್ ಎಲ್ಲದರಲ್ಲೂ ಸಮನಾಗಿ ಸದಭಿರುಚಿಯ ಪಾಕವನ್ನು ಉಣಬಡಿಸುತ್ತಿದೆ. ಕ್ಲಾಸಿಗೆ ಕ್ಲಾಸ್ ಆಗಿ ಮಾಸಿಗೆ ಮಾಸ್ ಆಗಿ, ಒಂದೊಂದು ಸುಂದರ ಪಯಣದ ಜೊತೆಗೆ ಒಂದಾನೊಂದು ಕಾಲದಲ್ಲಿ ನಡೆದ ಕಥೆಯೊಂದನ್ನು  ಹೇಳೋದಕ್ಕೆ ‘ಜಮಾಲಿಗುಡ್ಡ’ದ ತಂಡ ಈ ಟೀಸರ್ ಝಲಕ್ ಬಟ್ಟಿದೆ.

ಟೀಸರ್ ಜೊತೆಗೆ ಡಿಸೆಂಬರ್ 30ಕ್ಕೆ ರಾಜ್ಯಾದಾದ್ಯಂತ ಪ್ರೇಕ್ಷಕರೆದುರಿಗೆ ಬರ್ತಿದ್ದೀವಿ. ಇದು ಜಸ್ಟ್ ಟೀಸರ್ ಅಷ್ಟೇ ಇನ್ನೂ ವಿಷ್ಯಾ ಬಹಳ ಇದೆ ಅಂತಾ ಡಾಲಿ ಟೀಂ ಹೇಳಿದೆ. ನಿಮಗೆಲ್ಲಾ ಗೊತ್ತಿರೋ ಹಾಗೇ, ‘ಜಮಾಲಿ ಗುಡ್ಡ’ ಡಾಲಿ ಧನಂಜಯ್, ಯಶ್ ಶೆಟ್ಟಿ, ಅದಿತಿ ಪ್ರಭುದೇವಾ, ಭಾವನಾ, ಬೇಬಿ ಪ್ರಾಣ್ಯ, ಪ್ರಕಾಶ್ ಬೆಳವಾಡಿ, ನಂದ ಗೋಪಾಲ್ ಸೇರಿ ದೊಡ್ಡ ತಾರಾಬಳಗವಿರೋ ಚಿತ್ರ.  

ಇದನ್ನೂ ಓದಿ: ಮನಸೂರೆಗೊಳ್ಳುತ್ತಿದೆ "ಮಾಂಕ್ ದಿ ಯಂಗ್" ಚಿತ್ರದ ಹಾಡು

1.10 ನಿಮಿಷವಿರುವ ‘ಜಮಾಲಿ ಗುಡ್ಡ’ ಚಿತ್ರದ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಲಕ್ಷಾಂತರ ಜನರು ಈ ಟೀಸರ್ ಕಣ್ತುಂಬಿಕೊಂಡಿದ್ದಾರೆ. ಅನೇಕರು ಕನ್ನಡದ ಮತ್ತೊಂದು ಅದ್ಭುತ ಚಿತ್ರವನ್ನು ಮೆಚ್ಚಿಕೊಂಡಿದ್ದು, ಬಹುಪರಾಕ್ ಹೇಳಿದ್ದಾರೆ. ಕುಶಾಲ್ ಗೌಡ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ನಿಹಾರಿಕ ಮೂವೀಸ್ ಬ್ಯಾನರ್ ನಡಿಯಲ್ಲಿ ಶ್ರೀಹರಿ ರೆಡ್ಡಿ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಈಗಾಗೇ ರಿಲೀಸ್ ಆಗಿರೋ ಈ ಚಿತ್ರದ ‘ಸಾಗಿದೆ ಹಾಡು’ ಪ್ರೇಕ್ಷಕರ ಮನ ಸೆಳೆದಿದೆ. ಇದೀಗ ಚಿತ್ರದ ಟೀಸರ್ ರಿಲೀಸ್ ಮಾಡಿರೋ ಚಿತ್ರತಂಡ ಡಿಸೆಂಬರ್ 30ಕ್ಕೆ ಸಿನಿಮಾ ಬಿಡುಗಡೆ ಮಾಡ್ತೀವಿ ಅಂತಾ ಘೋಷಿಸಿದೆ. ಒಟ್ಟಾರೆ ಹೇಳಬೇಕಂದ್ರೆ ಡಾಲಿಯ ‘ಜಮಾಲಿಗುಡ್ಡ’ದ ಟೀಸರ್ ಪ್ರಾಮಿಸಿಂಗ್ ಆಗಿ ಕಾಣ್ತಿದೆ. ಎಲ್ಲಾ ರೀತಿಯಲ್ಲೂ ಪ್ರೇಕ್ಷಕರನ್ನು ರಂಜಿಸುವ ಭರವಸೆಯನ್ನು ಹುಟ್ಟಿಸಿದೆ.

ಇದನ್ನೂ ಓದಿ: "ಬೇರೆ ಯಾರೋ ನಮ್ಮ ಮದುವೆ ಡೇಟ್​ ಹೇಳುವ ಮುನ್ನ.." ಪ್ರಭಾಸ್​ ಜತೆಗಿನ ಲವ್ ಬಗ್ಗೆ ಕೃತಿ ಹೀಗಂದ್ರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News