ಒಂದಷ್ಟು ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಘರ್ಜನೆ ಬಲು ಜೋರಾಗಿದೆ. ಪಂಚಿಂಗ್ ಡೈಲಾಗ್ ಗಳ ಮೂಲಕ ಅಭಿಮಾನಿಗಳ ಎದೆಬಡಿತವನ್ನ ಹೆಚ್ಚು ಮಾಡುತ್ತಲೇ ಇದ್ದಾರೆ. ಗಜನ ಘರ್ಜನೆ ಕೇಳೋದೇ ಸಖತ್ ಮಜಾ ಅನ್ನೋ ಮಾತನ್ನ ಫ್ಯಾನ್ಸ್ ಹೇಳುತ್ತಲೇ ಇದ್ದಾರೆ. ಬಹು ನಿರೀಕ್ಷೆಯ ಕ್ರಾಂತಿ ಸಿನಿಮಾ 2023ರ ಜನವರಿ 26ಕ್ಕೆ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ಈ ಹಿನ್ನಲೆಯಲ್ಲಿ ಕ್ರಾಂತಿ ಸಿನಿಮಾ ತಂಡ ಪ್ರಮೋಷನ್ ಬ್ಯುಸಿಯಲ್ಲಿ ಓಡಾಡುತ್ತಿದೆ. ಇತ್ತೀಚಿಗೆ ಜೀ ಕನ್ನಡ ನ್ಯೂಸ್ ಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಸಿನಿಮಾ ಬಗ್ಗೆ ಸಂದರ್ಶನ ನೀಡಿ ಒಂದಷ್ಟು ವಿಚಾರಗಳನ್ನ ಹಂಚಿಕೊಂಡರು.
ಇದನ್ನೂ ಓದಿ: Viral News: ಬಾಲಿನೊಂದಿಗೆ ಜನಿಸಿದ ಹೆಣ್ಣು ಮಗು! ಬಾಲದ ಉದ್ದ ಕಂಡು ಬೆಚ್ಚಿ ಬಿದ್ದ ವೈದ್ಯರು
ಇದರಲ್ಲಿ ಪ್ರಮುಖವಾಗಿ ಅಭಿಮಾನಿಗಳ ಬಗ್ಗೆ ದಾಸ ದರ್ಶನ್ ಮಾತನಾಡಿರೋ ಮಾತುಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. “ಅಭಿಮಾನಿಗಳು ನನಗೆ ಇಷ್ಟೆಲ್ಲಾ ಪ್ರೀತಿ ತೋರಿಸುತ್ತಾರೆ. ನಾನು ಅವರ ಋಣವನ್ನ ಹೇಗೆ ತೀರಿಸಲಿ..? ಈ ಜನ್ಮದಲ್ಲಿ ತೀರಿಸಲು ಸಾಧ್ಯವೇ ಇಲ್ಲ ಬಿಡಿ” ಅನ್ನೋದನ್ನ ತುಂಬಾ ಭಾವುಕರಾಗಿ ಹೇಳಿದ್ರು ದರ್ಶನ್.
ಜೊತೆಗೆ “ನನ್ನ ಪ್ರೀತಿ ಮಾಡೋ ಅಭಿಮಾನಿ ಸೆಲೆಬ್ರೆಟಿಗಳು ನನ್ನ ಕ್ರಾಂತಿ ಸಿನಿಮಾವನ್ನ ಅವರ ಸಿನಿಮಾ ಎಂಬಂತೆ ಬರೀ ಕರ್ನಾಟಕ ಅಷ್ಟೇ ಅಲ್ಲದೇ ಎಲ್ಲೆಡೆ ತುಂಬಾ ಅದ್ದೂರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ನಾನು ಅವರಿಗೆ ಪ್ರಚಾರ ಮಾಡಿ ಅಂತ ಹೇಳೇ ಇಲ್ಲ. ಅವರೇ ಹಣ ಖರ್ಚು ಮಾಡಿ ಇಷ್ಟೆಲ್ಲಾ ಪ್ರಮೋಷನ್ ಮಾಡುತ್ತಿದ್ದಾರೆ” ಅಂತ ಅಭಿಮಾನಿಗಳ ಬಗ್ಗೆ ತುಂಬಾ ಹೆಮ್ಮೆಯಿಂದ ಡಿ ಬಾಸ್ ದರ್ಶನ್ ಮಾತನಾಡಿದ್ರು.
ಇಷ್ಟೇ ಅಲ್ಲ “ನನ್ನಿಂದ ನನ್ನ ಅಭಿಮಾನಿಗಳು ಒಂದು ಫೋಟೋವಷ್ಟೇ ನಿರೀಕ್ಷೆ ಮಾಡುತ್ತಾರೆ. ಅದೆಷ್ಟೋ ಮಂದಿಗೆ ನಾನು ಸಿಕ್ಕೇ ಇಲ್ಲ. ಆದರೂ ಅವರು ಇಟ್ಟಿರೋ ಪ್ರೀತಿಗೆ ನಾನು ಕೈಮುಗಿಯುತ್ತೀನಿ” ಅಂತ ತುಂಬಾ ಖುಷಿಯಿಂದ ಜೀ ಕನ್ನಡ ನ್ಯೂಸ್ ಜೊತೆ ಮನದಾಳದ ಮಾತನ್ನ ಹಂಚಿಕೊಂಡರು ದರ್ಶನ್.
ಇದನ್ನೂ ಓದಿ: ಕರುನಾಡಿನ ಕಿಚ್ಚ ಈಗ ಸಮಂತಾ ಜೊತೆ ಡ್ಯೂಯಟ್ ಹಾಡಲು ಫುಲ್ ರೆಡಿ!
ಅಭಿಮಾನಿಗಳು ಕ್ರಾಂತಿ ಸಿನಿಮಾಗಾಗಿ ಬಹಳ ದಿನಗಳಿಂದ ಕಾದಿದ್ದರು. ಇನ್ನೇನು ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಜನವರಿ 26 ಬಂದೇ ಬಿಡುತ್ತೆ. ಸೋ ವೈಟ್ ಮಾಡಿ ಸಿನಿಮಾ ನೋಡಿ ಎಂಜಾಯ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.