"ಬೇರೆ ಯಾರೋ ನಮ್ಮ ಮದುವೆ ಡೇಟ್​ ಹೇಳುವ ಮುನ್ನ.." ಪ್ರಭಾಸ್​ ಜತೆಗಿನ ಲವ್ ಬಗ್ಗೆ ಕೃತಿ ಹೀಗಂದ್ರು

Kriti Sanon Upset With Dating Rumours: ಬಾಲಿವುಡ್ ಇಂಡಸ್ಟ್ರಿಯಲ್ಲಿ ಪ್ರಭಾಸ್ ಮತ್ತು ಕೃತಿ ಸನೊನ್ ಸಂಬಂಧದ ಸುದ್ದಿ ಬಹಳ ಸಮಯದಿಂದ ಮುಖ್ಯಾಂಶಗಳಲ್ಲಿದೆ. ಆದರೆ, ಅವರಿಬ್ಬರೂ ಇಂತಹ ಸುದ್ದಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಇವರಿಬ್ಬರ ನಡುವೆ ಹೆಚ್ಚುತ್ತಿರುವ ಸಾಮೀಪ್ಯವು ನಿರಂತರವಾಗಿ ಪ್ರಚಾರದಲ್ಲಿದೆ. 

Written by - Chetana Devarmani | Last Updated : Nov 30, 2022, 02:07 PM IST
  • ಪ್ರಭಾಸ್ ಮತ್ತು ಕೃತಿ ಸನೊನ್ ಸಂಬಂಧದ ಸುದ್ದಿ
  • "ಬೇರೆ ಯಾರೋ ನಮ್ಮ ಮದುವೆ ಡೇಟ್​ ಹೇಳುವ ಮುನ್ನ.."
  • ಪ್ರಭಾಸ್​ ಜತೆಗಿನ ಲವ್ ಬಗ್ಗೆ ಕೃತಿ ಹೀಗಂದ್ರು
"ಬೇರೆ ಯಾರೋ ನಮ್ಮ ಮದುವೆ ಡೇಟ್​ ಹೇಳುವ ಮುನ್ನ.." ಪ್ರಭಾಸ್​ ಜತೆಗಿನ ಲವ್ ಬಗ್ಗೆ ಕೃತಿ ಹೀಗಂದ್ರು
ಪ್ರಭಾಸ್ ಮತ್ತು ಕೃತಿ ಸನೊನ್

Kriti Sanon on dating rumours with Prabhas: ಬಾಲಿವುಡ್ ಇಂಡಸ್ಟ್ರಿಯಲ್ಲಿ ಪ್ರಭಾಸ್ ಮತ್ತು ಕೃತಿ ಸನೊನ್ ಸಂಬಂಧದ ಸುದ್ದಿ ಬಹಳ ಸಮಯದಿಂದ ಮುಖ್ಯಾಂಶಗಳಲ್ಲಿದೆ. ಆದರೆ, ಅವರಿಬ್ಬರೂ ಇಂತಹ ಸುದ್ದಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಇವರಿಬ್ಬರ ನಡುವೆ ಹೆಚ್ಚುತ್ತಿರುವ ಸಾಮೀಪ್ಯವು ನಿರಂತರವಾಗಿ ಪ್ರಚಾರದಲ್ಲಿದೆ. ಬಾಲಿವುಡ್‌ಲೈಫ್‌ನ ವರದಿಗಳ ಪ್ರಕಾರ, ಪ್ರಭಾಸ್ ಅವರು ನಟಿ ಕೃತಿ ಸನೊನ್ ಜೊತೆ ಸಂಬಂಧದಲ್ಲಿದ್ದಾರೆ ಮತ್ತು ಇಬ್ಬರೂ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಬಹುದು. ಆದರೆ, ಇದೀಗ ಈ ವರದಿಗಳ ಬಗ್ಗೆ ನಟಿ ಮೌನ ಮುರಿದಿದ್ದು, ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ : ಮದುವೆಯ ನಂತರ ನಟನೆಗೆ ಗುಡ್‌ ಬೈ ಹೇಳ್ತಾರಾ ನಟಿ ಕೀರ್ತಿ ಸುರೇಶ್?

ಕೃತಿ ಸನೊನ್, ಪ್ರಭಾಸ್ ಜೊತೆಗಿನ ಸಂಬಂಧದ ವದಂತಿಗಳನ್ನು ತಳ್ಳಿಹಾಕಿದ್ದಾರೆ, ಅವರು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ, ಇದು ಪ್ಯಾರ್‌ ಮತ್ತು PR ಎರಡೂ ಅಲ್ಲ. ವರುಣ್‌ ಧವನ್‌ ರಿಯಾಲಿಟಿ ಶೋನಲ್ಲಿ ಸ್ವಲ್ಪ ಹೆಚ್ಚು ಕಾಲೆಳೆದಿದ್ದಾರೆ. ಅವರು ಮಾಡಿದ ತಮಾಷೆ ವದಂತಿಗಳಿಗೆ ಕಾರಣವಾಯಿತು. ಯಾವುದೇ ಪೋರ್ಟಲ್ ನನ್ನ ಮದುವೆಯ ದಿನಾಂಕವನ್ನು ಪ್ರಕಟಿಸುವ ಮೊದಲು ಈ ಎಲ್ಲಾ ವದಂತಿಗಳು ಆಧಾರರಹಿತವಾಗಿವೆ ಎಂದು ಬರೆದುಕೊಂಡಿದ್ದಾರೆ.

Kriti Sanon

ತೆಲುಗು ನಟ ಪ್ರಭಾಸ್ ಮತ್ತು ಬಾಲಿವುಡ್‌ ನಟಿ ಕೃತಿ ಸನೊನ್‌ ನಡುವೆ ಪ್ರೀತಿ ಹುಟ್ಟಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ವರುಣ್ ಧವನ್ ಇವರ ನಡುವಿನ ಸಂಬಂಧದ ಬಗ್ಗೆ ಭಾರಿ ಸುಳಿವನ್ನು ನೀಡಿದ್ದಾರೆ. ಮುಂಬೈನಲ್ಲಿ ಇಲ್ಲದ ಮತ್ತು ಇದೀಗ ದೀಪಿಕಾ ಪಡುಕೋಣೆ ಅವರೊಂದಿಗೆ ಶೂಟಿಂಗ್ ಮಾಡುತ್ತಿರುವ ನಟನ ಹೃದಯದಲ್ಲಿ ಕೃತಿ ಅವರ ಹೆಸರನ್ನು ಬರೆಯಲಾಗಿದೆ ಎಂದು ಹೇಳಿದರು. ಹಿಂದಿ ಶೋ ಒಂದರ ವೇದಿಕೆಯ ಮೇಲೆ ನಟ ವರುಣ್ ಧವನ್ ಆಡಿದ ಈ ಮಾತುಗಳೆ ಈ ವದಂತಿಗೆ ಪುಷ್ಠಿ ನೀಡಿತ್ತು. ಆದರೆ ಈ ಎಲ್ಲ ವದಂತಿಗಳಿಗೆ ಖುದ್ದು ನಟಿ ಜೃತಿ ಸನೊನ್‌ ಅವರೇ ಫುಲ್‌ ಸ್ಟಾಪ್‌ ನೀಡಿದ್ದಾರೆ. 

ಇದನ್ನೂ ಓದಿ : ಮಂಡಿಯೂರಿ ಪ್ರೇಯಸಿಗೆ ಪ್ರಪೋಸ್ ಮಾಡಿದ್ರಾ ನಟ ಪ್ರಭಾಸ್? ಶೀಘ್ರದಲ್ಲೇ ನಿಶ್ಚಿತಾರ್ಥ ಫಿಕ್ಸ್‌!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News