ಮದುವೆಗೆ ತಯಾರಿ ನಡೆಸುತ್ತಿದೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಜೋಡಿ?

    

Updated: Jun 10, 2018 , 04:57 PM IST
ಮದುವೆಗೆ ತಯಾರಿ ನಡೆಸುತ್ತಿದೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಜೋಡಿ?

ಮುಂಬೈ: ಬಾಲಿವುಡ್ ಪ್ರಣಯ ಜೋಡಿ ಈಗ ಮದುವೆಗೆ ಸಿದ್ದವಾಗುತ್ತಿದ್ದಾರೆ. ಹೌದು ಈ ಇಬ್ಬರು ಜೋಡಿ ಬರುವ ನವಂಬರ್ ತಿಂಗಳಲ್ಲಿ ಮದುವೆ ಆಗುತ್ತಿದ್ದಾರಂತೆ ಇದಕ್ಕೆ ಪೂರಕವಾಗಿ ಈಗ ಎರಡು ಕುಟುಂಬದಲ್ಲಿ ಭರಪೂರ ಸಿದ್ದತೆಗಳು ನಡೆಯುತ್ತಿವೆಯಂತೆ.

ಇತ್ತೀಚಿಗೆ ದೀಪಿಕಾ ಪಡುಕೋಣೆ ಮುಂಬೈ ನ ಬಾಂದ್ರಾ ದಲ್ಲಿ ತಮ್ಮ ತಾಯಿಯ ಜೊತೆ ಪ್ರಸಿದ್ದ ಜ್ಯೂವೆಲರಿ ಅಂಗಡಿಯೊಂದಕ್ಕೆ ಭೇಟಿ ನೀಡಿರುವುದು ಈ ಮದುವೆಯ ಕುರಿತಾಗಿ ಹಬ್ಬಿರುವ ಸುದ್ದಿಗೆ ಮತ್ತಷ್ಟು ಇಂಬು ನೀಡುತ್ತದೆ.ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ನಡೆಸುತ್ತಿರುವ ಈ ಜೋಡಿ ಈಗ ಮದುವೆಯಾಗುವುದೊಂದೇ ಬಾಕಿ ಎಂದು ಹೇಳಲಾಗುತ್ತಿದೆ.

ಇನ್ನೊಂದು ಸಂಗತಿ ಏನೆಂದರೆ ರಣವೀರ್ ಸಿಂಗ್ ಈಗ ತಾವಿರುವ ಮನೆಯಲ್ಲಿ ಮತ್ತೆರೆಡು ಫ್ಲೋರ್ ಗಳನ್ನೂ ಖರಿದಿಸಲಾಗಿದೆ ಅಲ್ಲದೆ ಕಟ್ಟಡ ಕಾಮಗಾರಿಯು ಸಹಿತ ನಡೆದಿದೆ ಎಂದು ಹೇಳಲಾಗುತ್ತಿದೆ.ಇದನ್ನು ಸ್ವತಃ ದೀಪಿಕಾ ಪಡುಕೋಣೆ ಸಹಿತ ನೋಡಿದ್ದಾರೆ ಎಂದು ತಿಳಿದುಬಂದಿದೆ. ಮದುವೆಯಾದ ನಂತರ ಈ ಜೋಡಿಗಳು  ರಣವೀರ್ ಸಿಂಗ್ ತಂದೆ ತಾಯಿಗಳ ಮನೆಯ ಹತ್ತಿರವೇ ವಾಸಿಸುತ್ತಾರೆ ಎಂದು ತಿಳಿದುಬಂದಿದೆ.ಇತ್ತೀಚಿಗೆ ಫಿಲಂಫೇರ್ ವರದಿಯಂತೆ ಈ ಜೋಡಿಗಳಿಬ್ಬರ ಮದುವೆಯು ನವಂಬರ್ 19 ನೆರವೇರುತ್ತದೆ ಎಂದು ಹೇಳಲಾಗಿತ್ತು.