Bollywood News: ಬಾಲಿವುಡ್‌ನ ಕ್ಯೂಟ್ ಜೋಡಿ ನಟಿ ದೀಪಿಕಾ ಪಡುಕೋಣೆ ಹಾಗೂ ಪತಿ ರಣವೀರ್ ಸಿಂಗ್ ಕಳೆದ ವರ್ಷ 'ಕಾಫಿ ವಿತ್ ಕರಣ್' ನಲ್ಲಿ ಭಾಗವಹಿಸಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
ಕಾಫಿ ವಿತ್ ಕರಣ್ ಶೋನಲ್ಲಿ ದೀಪಿಕಾ ಹಾಗೂ ರಣವೀರ್ ಇಬ್ಬರೂ ತಮ್ಮ ಮಕ್ಕಳನ್ನು ಅವರ ಪೋಷಕರು ಬೆಳೆಸಿದಂತೆಯೇ ಅದೇ ಗುಣಗಳೊಂದಿಗೆ ಬೆಳೆಸಲು ಬಯಸುತ್ತೇವೆ ಎಂದಿದ್ದಾರೆ.. ಅಷ್ಟೇ ಅಲ್ಲ ದೀಪಿಕಾ ತಮ್ಮ ತಂದೆ ತಾಯಿಯನ್ನು ಸಹ ನೆನಪಿಸಿಕೊಂಡಿದ್ದಾರೆ.. ಜೊತೆಗೆ ದೀಪಿಕಾ ರಣವೀರ್ ಸಿಂಗ್ ಜೊತೆ ಸಂಸಾರ ಆರಂಭಿಸುವ ಬಗ್ಗೆ ಎಂದರೆ ಮಗುವಿನ ನಿರೀಕ್ಷೆಯ ಕುರಿತಾಗಿ ಮಾತನಾಡಿದ್ದಾರೆ..
ಇದನ್ನೂ ಓದಿ-Yash Birthday: ಹುಟ್ಟು ಹಬ್ಬದ ಸಂಭ್ರಮದಲ್ಲಿ ಟಾಕ್ಸಿಕ್ ನಟ..! ‘ಕೆಜಿಎಫ್’ ಕ್ಯಾಪ್ಟನ್‌ಗೆ ಏಜ್ ಏಷ್ಟು ಗೊತ್ತಾ?
ಮುಂದುವರೆದು ಮಾತನಾಡಿದ ದೀಪಿಕಾ "ನಾನು ನನ್ನ ಕುಟುಂಬದ ಹಿರಿಯರನ್ನು ಭೇಟಿಯಾದಾಗ, ನನ್ನ ನಡವಳಿಕೆ ಬದಲಾಗಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ತಂದೆ-ತಾಯಿ ಬೆಳೆಸಿದ ಕಾರಣದಿಂದ ಸಿನಿಮಾ ಲೋಕದ ಗ್ಲಾಮರ್ ನನ್ನ ದಾರಿ ತಪ್ಪಿಸಲಿಲ್ಲ. ನನ್ನ ಕುಟುಂಬದಲ್ಲಿ ಯಾರೂ ನನ್ನನ್ನು ಸೆಲೆಬ್ರಿಟಿ ಎಂದು ಪರಿಗಣಿಸುವುದಿಲ್ಲ. ನಾನು ಮೊದಲು ಮಗಳು ಮತ್ತು ಸಹೋದರಿ ಮತ್ತು ಅದನ್ನು ಬದಲಾಯಿಸಲು ನಾನು ಬಯಸುವುದಿಲ್ಲ. ರಣವೀರ್ ಮತ್ತು ನಾನು ನಮ್ಮ ಮಕ್ಕಳಲ್ಲಿ ಅದೇ ಗುಣಗಳನ್ನು ಬಯಸುತ್ತೇವೆ"
ಮಗು ಮಾಡಿಕೊಳ್ಳುವುದರ ಕುರಿತು ಮಾತನಾಡಿದ ದೀಪಿಕಾ ಪಡುಕೋಣೆ, “ಖಂಡಿತವಾಗಿಯೂ ರಣವೀರ್ ಮತ್ತು ನಾನು ಮಕ್ಕಳನ್ನು ಪ್ರೀತಿಸುತ್ತೇವೆ. ಮಗು ಮಾಡಿಕೋಳುವ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.. ಇದರಿಂದ ಅವರಿಬ್ಬರೂ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಅಭಿಮಾನಿಗಖು ಫುಲ್ ಖುಷ್ ಆಗಿದ್ದಾರೆ..
ಇದನ್ನೂ ಓದಿ-ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರೂ ವೈಯಕ್ತಿಕ ಜೀವನದಲ್ಲಿ ಒಂಟಿ ಈಕೆ!
ಇನ್ನು ದೀಪಿಕಾ 2018 ರಲ್ಲಿ ಇಟಲಿಯಲ್ಲಿ ನಟ ರಣವೀರ್ ಸಿಂಗ್ ಅವರನ್ನು ವಿವಾಹವಾದರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗೋಲಿಯೋನ್ ಕಿ ಲೀಲಾ ರಾಮಲೀಲಾ' ಚಿತ್ರದ ಚಿತ್ರೀಕರಣದ ವೇಳೆ ಇವರಿಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು...
ಹಿಂದಿ ಚಿತ್ರರಂಗದ ನಂಬರ್ ಒನ್ ನಾಯಕಿ ದೀಪಿಕಾ ಪಡುಕೋಣೆ ಶೀಘ್ರದಲ್ಲೇ ನಟ ಹೃತಿಕ್ ರೋಷನ್ ಅವರ ಮುಂಬರುವ ಚಿತ್ರ 'ಫೈಟರ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟೀಸರ್ ಮತ್ತು ಹಾಡುಗಳಲ್ಲಿ ದೀಪಿಕಾ ಮತ್ತು ಹೃತಿಕ್ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಚಿತ್ರವು ಜನವರಿ 25 ರಂದು ಥಿಯೇಟರ್‌ಗಳಿಗೆ ಬರಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.