ದೀಪಿಕಾ ಕಟ್ಟಾಜ್ಞೆ: ರಣವೀರ್ ಸಿಂಗ್ ಮರೆತೂ ಮಾಡುವಂತಿಲ್ಲ ಈ 3 ಕೆಲಸ

14 ನವೆಂಬರ್ 2018 ರಂದು ದೀಪಿಕಾ ಮತ್ತು ರಣವೀರ್ ಇಟಲಿಯಲ್ಲಿ ವಿವಾಹವಾದರು.

Last Updated : Jun 11, 2020, 01:13 PM IST
ದೀಪಿಕಾ ಕಟ್ಟಾಜ್ಞೆ: ರಣವೀರ್ ಸಿಂಗ್ ಮರೆತೂ ಮಾಡುವಂತಿಲ್ಲ ಈ 3 ಕೆಲಸ title=

ನವದೆಹಲಿ: ಬಾಲಿವುಡ್‌ನ ಅತ್ಯಂತ ಮುದ್ದಾದ ಮತ್ತು ಸುಂದರ ಜೋಡಿಗಳಲ್ಲಿ ಒಂದು ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್. ಇಬ್ಬರ ವಿವಾಹವೂ ಬಹಳ ಚರ್ಚೆಯಾಯಿತು. 14 ನವೆಂಬರ್ 2018 ರಂದು ದೀಪಿಕಾ-ರಣವೀರ್ ಇಟಲಿಯಲ್ಲಿ ವಿವಾಹವಾದರು. ಮದುವೆಯ ಫೋಟೋಗಳು ಬಹಿರಂಗವಾದ ಕೂಡಲೇ ಅಭಿಮಾನಿಗಳು ತುಂಬಾ ಸಂಭ್ರಮಿಸಿದರು. ದೀಪಿಕಾ ರಣವೀರ್ (Ranveer Singh) ಅವರ ವೈವಾಹಿಕ ಜೀವನ ಚೆನ್ನಾಗಿಯೇ ಸಾಗುತ್ತಿದೆ. ಸ್ಟಾರ್ ಜೋಡಿಯೇ ಆದರೂ ಪತಿ-ಪತ್ನಿ ಸಂಬಂಧ ಎಂದ ಮೇಲೆ ಸಾಮಾನ್ಯ ಜನರಂತೆ ಅವರ ವೈವಾಹಿಕ ಜೀವನದಲ್ಲೂ ಒಂದಷ್ಟು ಸರಸ-ವಿರಸ ಇದ್ದೇ ಇರುತ್ತದೆ.  ಹಾಗೆಯೇ ರಣವೀರ್ ಸಿಂಗ್ ಸಂದರ್ಶನವೊಂದರಲ್ಲಿ ಅವರ ಪತ್ನಿ ದೀಪಿಕಾ ಪಡುಕೋಣೆ ಅವರನ್ನು ಮೂರು ವಿಷಯಗಳಿಗೆ ನಿಷೇಧಿಸಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಆ ವಿಷಯ ಎಲ್ಲರಲ್ಲೂ ಸಾಕಷ್ಟು ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ. ಆ ವಿಷಯಗಳು ಯಾವುವು ಎಂದು ನೀವು ಸಹ ಯೋಚಿಸುತ್ತಿದ್ದರೆ ಬನ್ನಿ ಅದೇನು ಅಂತ ತಿಳಿಯೋಣ.

ಶೇರ್ ಮಾಡಿದ ಕೊಡಲೇ ವೈರಲ್ ಆಗಿದೆ ದೀಪಿಕಾರ ಈ ಫೋಟೋ, ಜನ ಕೇಳಿದ್ದೇನು ಗೊತ್ತಾ?

ವಾಸ್ತವವಾಗಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಅವರಿಗೆ 3 ಕಂಡಿಶನ್ ಹಾಕಿದ್ದಾರೆ. 
1. ರಣವೀರ್ ರಾತ್ರಿ ವೇಳೆ ಮನೆಯಿಂದ ಹೊರಗುಳಿಯುವಂತಿಲ್ಲ.
2. ಊಟ-ತಿಂಡಿ ಸೇವಿಸದೆ ಮನೆಯಿಂದ ಹೊರಡುವಂತಿಲ್ಲ.
3. ಕಾಲ್ ಮಿಸ್ ಮಾಡುವಂತಿಲ್ಲ ಎಂಬ ಕಂಡಿಶನ್ ಹಾಕಿದ್ದಾರೆ.

ದೀಪಿಕಾರ ಪತಿ ರಣವೀರ್ ಸಿಂಗ್ ಕೂಡ ಕಡಿಮೆ ಇಲ್ಲ. ಪ್ರೀತಿಯ ಮಡದಿ ಹೇಳಿದ ಈ ಕೆಲಸವನ್ನು ರಣವೀರ್ ತಪ್ಪದೇ ಪಾಲಿಸುತ್ತಾರಂತೆ. 

6 ವರ್ಷಗಳ ಸುದೀರ್ಘ ಸಂಬಂಧದ ನಂತರ ದೀಪಿಕಾ ಮತ್ತು ರಣವೀರ್ ವಿವಾಹವಾದರು. ರಣವೀರ್ ಸಿಂಗ್ ಅವರು ದೀಪಿಕಾ ಅವರನ್ನು ಹೆಂಡತಿಯಾಗಿ ಪಡೆದು ತುಂಬಾ ಸಂತೋಷಪಟ್ಟಿದ್ದಾರೆ. ಖುದ್ದು ರಣವೀರ್ ಅವರೇ ಬಹುತೇಕ ಸಂದರ್ಭಗಳಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ತುಂಬಾ ಹೊಮ್ಲಿ ಎಂಬುದನ್ನೂ ರಣವೀರ್ ಸಿಂಗ್ ಹೇಳಿದ್ದಾರೆ. ದೀಪಿಕಾ ಮನೆ ಹಾಗೂ ಮನೆಯವರೆಲ್ಲರನ್ನೂ ನೋಡಿಕೊಳ್ಳುವ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿರುವ ರಣವೀರ್ ದೀಪಿಕಾ ಅದ್ಬುತ ನಟಿ ಮಾತ್ರವಲ್ಲ ಆಕೆ ಓರ್ವ ಉತ್ತಮ ಗೃಹಿಣಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ದೀಪಿಕಾ ಅವರ ಸರಳತೆ ಬಗ್ಗೆಯೂ ಮಾತನಾಡಿರುವ ರಣವೀರ್ ದೀಪಿಕಾ ಪಡುಕೋಣೆ ಮನೆಯಲ್ಲಿ ಓರ್ವ ಒಡತಿಯಂತೆ ವಾಸಿಸುವುದಿಲ್ಲ.  ಅವರು ತುಂಬಾ ಸರಳ ರೀತಿಯಲ್ಲಿ ಬದುಕುತ್ತಾರೆ. ನಾನು ದೀಪಿಕಾ ಬಗ್ಗೆ ಎಲ್ಲವನ್ನೂ ಇಷ್ಟಪಡುತ್ತೇನೆ. ಅವರು ಪ್ರತಿ ವಿಷಯದಲ್ಲಿಯೂ ಬಹಳ ಕಮಿಟೆಡ್ ಎಂದು ನೆಚ್ಚಿನ ಮಡದಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಅವರು 'ಗೋಲಿಯೋನ್ ಕಿ ರಾಸ್ ಲೀಲಾ ರಾಮ್ ಲೀಲಾ', 'ಬಾಜಿರಾವ್ ಮಸ್ತಾನಿ' ಮತ್ತು 'ಪದ್ಮಾವತ್' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಮದುವೆಯ ನಂತರ ದಂಪತಿಗಳು ಕಬೀರ್ ಖಾನ್ ಅವರ '83 'ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 83 ಚಿತ್ರ ಏಪ್ರಿಲ್ 10 ರಂದು ಬಿಡುಗಡೆಯಾಗಬೇಕಿತ್ತು, ಆದರೆ ಲಾಕ್‌ಡೌನ್ ಆಗಿದ್ದರಿಂದ ಅದರ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಯಿತು.


 

Trending News