ಡೆವಿಲ್ ಶೂಟಿಂಗ್‌ ಸಮಯದಲ್ಲೇ ಪ್ರಗ್ನೆಂಟ್ ಆದ್ರಂತೆ ಈ ನಟಿ.!

Devil Movie Actress Pregnant News: ಕನ್ನಡದ ಜೋಶ್‌ ಸಿನಿಮಾ ಖ್ಯಾತಿಯ ನಟಿ, ತಾವು ಡೆವಿಲ್ ಸಿನಿಮಾ ಶೂಟಿಂಗ್‌ ಸಮಯದಲ್ಲೇ ಪ್ರಗ್ನೆಂಟ್ ಆದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

Written by - Chetana Devarmani | Last Updated : Feb 21, 2024, 11:29 AM IST
  • ಕನ್ನಡದ ಜೋಶ್‌ ಸಿನಿಮಾ ಖ್ಯಾತಿಯ ನಟಿ
  • ಡೆವಿಲ್ ಶೂಟಿಂಗ್‌ ಸಮಯದಲ್ಲೇ ಪ್ರಗ್ನೆಂಟ್!
  • ತಾಯಿಯಾಗಲು ಡೆವಿಲ್ ಸಿನಿಮಾ ಕಾರಣ ಎಂದ ನಟಿ
ಡೆವಿಲ್ ಶೂಟಿಂಗ್‌ ಸಮಯದಲ್ಲೇ ಪ್ರಗ್ನೆಂಟ್ ಆದ್ರಂತೆ ಈ ನಟಿ.! title=

Shamna Kasim Pregnant During Devil Shooting: ಕನ್ನಡದ ಜೋಶ್‌ ಸಿನಿಮಾ ಖ್ಯಾತಿಯ ನಟಿ, ತಾವು ಡೆವಿಲ್ ಸಿನಿಮಾ ಶೂಟಿಂಗ್‌ ಸಮಯದಲ್ಲೇ ಪ್ರಗ್ನೆಂಟ್ ಆದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೋಶ್‌ ಸಿನಿಮಾದಲ್ಲಿ ನಟಿಸಿದ್ದ ನಟಿ ಪೂರ್ಣಾ ಅಲಿಯಾಸ್ ಶಾಮ್ನಾ ಖಾಸಿಂ ತಾವು ತಾಯಿಯಾಗಲು ಡೆವಿಲ್ ಸಿನಿಮಾ ಕಾರಣ ಎಂದು ಹೇಳಿದ್ದಾರೆ. 

ನಟಿ ಪೂರ್ಣಾ ಅಲಿಯಾಸ್ ಶಾಮ್ನಾ ಖಾಸಿಂ ಜೋಶ್ ಸೇರಿದಂತೆ ರಮೇಶ್ ಅರವಿಂದ್ ಅವರ 100 ಸಿನಿಮಾದಲ್ಲಿಯೂ ನಟಿಸಿದ್ದಾರೆ. ಕನ್ನಡದಲ್ಲಿ ಕೆಲವೇ ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದಾರೆ. 

ತಮಿಳಿನ ಡೆವಿಲ್ ಸಿನಿಮಾದಲ್ಲಿ ನಟಿ ಪೂರ್ಣಾ ಅಲಿಯಾಸ್ ಶಾಮ್ನಾ ಖಾಸಿಂ ನಟಿಸಿದ್ದು, ಈ ಸಿನಿಮಾ ಪ್ರಚಾರದ ವೇಳೆ ನೀಡಿದ ಸಂದರ್ಶನದಲ್ಲಿ ತಮ್ಮ ಪ್ರಗ್ನೆನ್ಸಿ ಬಗ್ಗೆಯೂ ಮಾತನಾಡಿದ್ದಾರೆ. ಯ್ಯೂಟೂಬ್‌ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಡೆವಿಲ್ ಸಿನಿಮಾ ಜತೆ ಭಾವನಾತ್ಮಕ ಸಂಬಂಧವಿದೆ. ನಾನು ಮಗುವಿಗೆ ಜನ್ಮ ನೀಡಲು ಡೆವಿಲ್ ಸಿನಿಮಾ ಕಾರಣ ಎಂದಿದ್ದಾರೆ.

ಇದನ್ನೂ ಓದಿ: Vidya Balan: ನಕಲಿ ಇನ್‌ಸ್ಟಾ ಐಡಿ.. ನಟಿ ವಿದ್ಯಾ ಬಾಲನ್ ಹೆಸರಿನಲ್ಲಿ ವಂಚನೆ!

ಡೆವಿಲ್ ಸಿನಿಮಾ ಮತ್ತು ಚಿತ್ರತಂಡದವರನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಪೂರ್ಣ ಹೇಳಿದ್ದಾರೆ. ಡೆವಿಲ್ ಸಿನಿಮಾದ ಹಾಡಿನ ಚಿತ್ರೀಕರಣದ ವೇಳೆ ತಲೆ ಸುತ್ತಿದಂತಾಯ್ತು. ಆಗ ಶೂಟಿಂಗ್‌ ಸೆಟ್‌ನಲ್ಲಿರುವವರೆಲ್ಲ ಗಾಬರಿ ಆದರು. ನಾನು ಈ ಸಿನಿಮಾದಲ್ಲಿ ನಟಿಸುಡುವಾಗಲೇ ಪ್ರಗ್ನೆಂಟ್ ಆಗಿದ್ದು ಎಂದು ಪೂರ್ಣ ಹೇಳಿಕೊಂಡಿದ್ದಾರೆ.

ಕೂಡಲೇ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚೆಕಪ್‌ ಮಾಡಿದ ವೈದ್ಯರು ನಾನು ಗರ್ಭಿಣಿ ಆಗಿದ್ದೇನೆ ಎಂದರು. ನಾನು ಪ್ರಗ್ನೆಂಟ್ ಎಂಬುದು ಗೊತ್ತಾಗಿ ಎಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಹೇಳಿದ್ದಾರೆ.

ಡೆವಿಲ್ ಸಿನಿಮಾವನ್ನು ಆದಿತ್ಯ ಎಂಬುವರು ನಿರ್ದೇಶಿಸಿದ್ದು, ವಿಧಾರ್ಥ್, ಪೂರ್ಣಾ, ಆದಿತ್ಯ ಅರುಣ್, ಮಿಸ್ಕಿನ್ ಮತ್ತು ಇತರ ಅನೇಕ ಕಲಾವಿದರ ದಂಡೇ ಚಿತ್ರದಲ್ಲಿದೆ. 

ಇದನ್ನೂ ಓದಿ: ದೀಪಿಕಾಗೆ ಈಗ ಇಷ್ಟು ತಿಂಗಳಂತೆ.. ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪ್‌ವೀರ್‌ ಜೋಡಿ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News