ಬಹುನಿರೀಕ್ಷಿತ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಟೀಸರ್ ರಿಲೀಸ್..! ಧನುಷ್-ಶಿವಣ್ಣ ಪಾತ್ರ ರಿವೀಲ್‌

Dhanush Captain Miller teaser : ಕಾಲಿವುಡ್‌ ನಟ ಧನುಷ್ ಮತ್ತು ಶಿವರಾಜ್‌ಕುಮಾರ್‌ ನಟನೆಯ ಬಹು ನಿರೀಕ್ಷಿತ ಚಿತ್ರ ʼಕ್ಯಾಪ್ಟನ್‌ ಮಿಲ್ಲರ್‌ʼ ಟೀಸರ್ ರಿಲೀಸ್‌ ಆಗಿದೆ. ಈ ಟೀಸರ್‌ನಲ್ಲಿ ಹೊಸ ಲುಕ್‌ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು, ಫ್ಯಾನ್ಸ್‌ಗೆ ತುಂಬಾ ಇಷ್ಟವಾಗಿದೆ. 

Written by - Krishna N K | Last Updated : Jul 28, 2023, 07:53 PM IST
  • ಧನುಷ್ಯ ನಟನೆಯ ಬಹು ನಿರೀಕ್ಷಿತ ಚಿತ್ರ ʼಕ್ಯಾಪ್ಟನ್‌ ಮಿಲ್ಲರ್‌ʼ ಟೀಸರ್ ರಿಲೀಸ್‌ ಆಗಿದೆ.
  • ಈ ಟೀಸರ್‌ನಲ್ಲಿ ಹೊಸ ಲುಕ್‌ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.
  • ಧನುಷ್ಯ ಹುಟ್ಟು ಹಬ್ಬದ ಪ್ರಯುಕ್ತ ಕ್ಯಾಪ್ಟನ್‌ ಮಿಲ್ಲರ್‌ ಟೀಸ್‌ ಬಿಡುಗಡೆಯಾಗಿದೆ.
ಬಹುನಿರೀಕ್ಷಿತ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಟೀಸರ್ ರಿಲೀಸ್..! ಧನುಷ್-ಶಿವಣ್ಣ ಪಾತ್ರ ರಿವೀಲ್‌ title=

Captain Miller teaser : ಇಂದು ಸೂಪರ್‌ಸ್ಟಾರ್ ಧನುಷ್ ಅವರ 40ನೇ ಹುಟ್ಟು ಹಬ್ಬ. ಈ ಪ್ರಯುಕ್ತ ʼಕ್ಯಾಪ್ಟನ್ ಮಿಲ್ಲರ್ʼ ಟೀಸರ್‌ ಬಿಡುಗಡೆ ಮಾಡಲಾಗಿದೆ. ಅದ್ಭುತ ಕಥೆ, ಆ್ಯಕ್ಷನ್ ಪ್ಯಾಕ್ಡ್‌ ಟೀಸರ್‌ ನೋಡಿದ್ರೆ ಪುಷ್ಪ, ಕೆಜಿಎಫ್, ಪಠಾಣ್ ದಾಖಲೆ ಮುರಿಯುವಂತಹ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ.. ಧನುಷ್ ಶಿವಣ್ಣ ಲುಕ್‌ ಚಿತ್ರದ ಕ್ಯೂರಿಯಾಸಿಟಿ ಹೆಚ್ಚಿಸುತ್ತಿದೆ.

ಅರುಣ್ ಮಾಥೇಶ್ವರನ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್ ಸ್ವಾತಂತ್ರ್ಯದ ಹಿಂದಿನ ಕಥೆಯನ್ನು ತೋರಿಸುತ್ತದೆ. ಕ್ಯಾಪ್ಟನ್ ಮಿಲ್ಲರ್ 1.33 ಸೆಕೆಂಡ್‌ಗಳ ಟೀಸರ್ ನೋಡಲು ಅದ್ಭುತವಾಗಿದೆ. ಟೀಸರ್‌ ನೋಡಿದ್ರೆ ಸಿನಿಮಾ ನೋಡಲೇಬೇಕು ಎನ್ನುವ ಕುತೂಹಲ ಹಿಮ್ಮಡಿಗೊಳಿಸುತ್ತಿದೆ.

 

ಇದನ್ನೂ ಓದಿ: ನಟಿಯ ಬೆತ್ತಲೆ ವಿಡಿಯೋ ಶೇರ್ ಮಾಡಿ ಬರ್ತ್ ಡೇ ವಿಶ್ ಮಾಡಿದ ನಟ ರಯಾನ್ ರೆನಾಲ್ಡ್ಸ್..!

ಟೀಸರ್‌ನಲ್ಲಿ ಆರಂಭದಲ್ಲಿ ಧನುಷ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲಾಗಿದೆ. ನಂತರ ಕೆಲವು ವಾಂಟೆಡ್ ಪೋಸ್ಟರ್‌ಗಳು ಕಂಡುಬರುತ್ತವೆ. ಇದರ ನಂತರ, ಧನುಷ್ ಎಂಟ್ರಿ, ಕೈಯಲ್ಲಿ ಗನ್, ಉದ್ದನೆಯ ಕೂದಲು ನೋಡೋಕೆ ಹಂಟರ್‌ ತರ ಕಾಣುತ್ತಾರೆ. ಧನುಷ್ ಕೈಯಲ್ಲಿ ಕೊಡಲಿ ಹಿಡಿದು ಆಕ್ಷನ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಅವರು ಸಹ ಕಾಣಿಸಿಕೊಂಡಿದ್ದಾರೆ. ಕುದುರೆ ಏರಿ ಎಂಟ್ರಿ ಕೊಡುವ ಶಿವಣ್ಣ ಲುಕ್‌ ಸಖತ್ತಾಗಿದೆ. ಅಲ್ಲದೆ, ಟೀಸರ್‌ ಕೊನೆಯಲ್ಲಿ ಧನುಷ್ಯ ಹತ್ತಿರ ಶಿವಣ್ಣ ಇರುವ ಫೋಟೋ ಇರುತ್ತದೆ. ಈ ದೃಶ್ಯ ಬಹಳ ಕುತೂಹಲಕಾರಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News