Kiccha Sudeep new movie: ಸ್ಯಾಂಡಲ್’ವುಡ್’ನ ಅಭಿನಯ ಚಕ್ರವರ್ತಿ ಸುದೀಪ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅಭಿಮಾನಿಗಳು ದೇವರು ಅಂತಾ ಪೂಜಿಸೋ ಕಿಚ್ಚನ ಸಿನಿಮಾಗಳು ಬಂತೆಂದರೆ ಸಾಕು ಫ್ಯಾನ್ಸ್’ಗಳಿಗೆ ಹಬ್ಬವೋ ಹಬ್ಬ. ವಿಕ್ರಾಂತ್ ರೋಣಾ ಸಿನಿಮಾದ ಸಕ್ಸಸ್ ಬಳಿಕ ಯಾವುದೇ ಸಿನಿಮಾಗೆ ಸಹಿ ಹಾಕಿಲ್ಲ ಕಿಚ್ಚ. ಆದರೆ ಇದೀಗ ಬಾದ್ ಶಾ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: ಅಂದು ಸಾಮಾನ್ಯ ಮಹಿಳೆ; ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ: ಈಕೆಯ ಅದೃಷ್ಟದಿಂದಲೇ ವಿಶ್ವಕಪ್ ಗೆದ್ದಿದ್ದರಂತೆ ಆ ನಾಯಕ!
ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗಿ ಏಳು ತಿಂಗಳುಗಳೇ ಕಳೆದಿದೆ. ಆದರೆ ಕಿಚ್ಚ ಸುದೀಪ್ ಮುಂದಿನ ಚಿತ್ರಕ್ಕೆ ಸಹಿ ಹಾಕಿಲ್ಲ. ರಿಯಾಲಿಟಿ ಶೋ ಬಿಗ್ ಬಾಸ್ ನಡೆಸಿಕೊಟ್ಟ ಸುದೀಪ್, ಆ ಬಳಿಕ ಕ್ರಿಕೆಟ್ ಹಬ್ಬದಲ್ಲಿ ಬ್ಯುಸಿಯಾಗಿದ್ದರು. ಇದೀಗ ಅಭಿಮಾನಿಗಳು ಸೇರಿ ಕರ್ನಾಟಕದ ಜನತೆ ಕಿಚ್ಚ ಯಾವ ಹೊಸ ಸಿನಿಮಾ ಮಾಡುತ್ತಿದ್ದಾರೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯ ಕಿಚ್ಚನ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಇದ್ದು, ಏಪ್ರಿಲ್ ತಿಂಗಳ ಬಳಿಕ ಮುಂದಿನ ಸಿನಿಮಾ ಕೆಲಸ ಆರಂಭಿಸಲಿದ್ದಾರಂತೆ ಕಿಚ್ಚ ಎಂದು ಮೂಲಗಳು ತಿಳಿಸಿವೆ.
ತಮಿಳಿನ ಕಬಾಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಕಲೈಪುಲಿ ಎಸ್ ಥಾನು ಅವರೊಂದಿಗೆ ಸುದೀಪ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿವೆ. ಜೊತೆಗೆ ನಿರ್ದೇಶಕ ವಿಜಯ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ತೆರೆ ಮೇಲೆ ಬರಲಿದೆಯಂತೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.
ಇದನ್ನೂ ಓದಿ: Mrunal Thakur: ಸಾಂಪ್ರದಾಯಿಕ ಉಡುಗೆಯಲ್ಲಿ ಸೀತೆಯಂತೆ ಕಂಗೊಳಿಸಿದ ರಾಜಕುಮಾರಿ ನೂರ್ ಜಹಾನ್!
ಸದ್ಯ ಸುದೀಪ್ ಅವರು ಉಪೇಂದ್ರ ಅಭಿನಯದ ಆರ್ ಚಂದ್ರು ಅವರ ಕಬ್ಜ ಸಿನಿಮಾದಲ್ಲಿ ವಿಭಿನ್ನ ಗೆಟಪ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಇದೇ 17 ರಂದು ತೆರೆಮೇಲೆ ಹೆಜ್ಜೆ ಇಡಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.