ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಲ್ಲಿ ಭಾಗಿಯಾಗಿ, ವಿನ್ನರ್ ಆಗಿ ಎಲ್ಲರ ಗಮನ ಸೆಳೆದ ಪ್ರಥಮ್ ಇತ್ತಿಚೆಗೆ ನಿಶಿತಾರ್ಥ ಮಾಡಿಕೊಂಡರು. ಸಿಂಪಲ್ ಆಗಿ ಬದುಕಲು ಇಷ್ಟಪಡುವ ಪ್ರಥಮ್ ಎಂಗೇಜ್‌ಮೆಂಟ್ ಸಹ ಸರಳವಾಗಿಯೇ ನಡೆಯಿತು. ಆದರೆ ನಟ ಪ್ರಥಮ್ ಹುಡುಗಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಮೂಲತಃ ಮಂಡ್ಯದ ಹುಡುಗಿಯನ್ನು ನಟ ಪ್ರಥಮ್ ಮದುವೆ ಆಗಲಿದ್ದಾರೆ. ಇವರು ಹೆಸರು ಭಾನುಶ್ರೀ.
ಭಾನುಶ್ರೀ ಅವರು ಡಿಗ್ರಿ ಓದಿದ್ದಾರೆ. ಅಪ್ಪಟ ಹಳ್ಳಿ ಹುಡುಗಿಯನ್ನು ಪ್ರಥಮ್ ತಮ್ಮ ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮದುವೆ ವಿಚಾರವಾಗಿ ಅನೇಕ ಬಾರಿ ಪ್ರಥಮ್ ಮಾತನಾಡಿದ್ದರು. ಹಳ್ಳಿ ಹುಡುಗಿಯನ್ನೇ ಹೆಂಡತಿ ಮಾಡಿಕೊಳ್ಳುವುದಾಗಿ ಹೇಳಿದ್ದರು, ಅಲ್ಲದೇ ಸಿಂಪಲ್ ಆಗೇ ವಿವಾಹ ಮಾಡಿಕೊಳ್ಳುವುದಾಗಿಯೂ ತಿಳಿಸಿದ್ದರು. ಇದೀಗ ನುಡಿದಂತೆಯೇ ಹಳ್ಳಿ ಹುಡುಗಿಯನ್ನೇ ಸಿಂಪಲ್ ಆಗಿ ಕೈ ಹಿಡಿಯಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: Video: ಶಾರುಖ್ ಖಾನ್‌ಗೆ ಬಲವಂತವಾಗಿ ಕಿಸ್ ಕೊಟ್ಟ ಮಹಿಳೆ, ವೈರಲ್ ಆಯ್ತು ವಿಡಿಯೋ!
ಸರಳವಾಗಿ ಆಡಂಬರವಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡ ನಟ ಪ್ರಥಮ್, ಈ ಶುಭ ವಿಚಾರವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡರು. ಒಂದು ಸುಂದರ ಕ್ಷಣ. ಇವತ್ತು ನನ್ನ ಎಂಗೇಜ್ಮೆಂಟ್ ಆಯ್ತು ಎಂದು ಸಂತಸದಿಂದ ಎಲ್ಲರಿಗೂ ಸುದ್ದಿ ತಿಳಿಸಿದರು.
ನಟ ಪ್ರಥಮ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಮನೆಯಲ್ಲಿ ನೋಡಿರುವ ಹುಡುಗಿಯನ್ನೇ ವಿವಾಹವಾಗುವುದಾಗಿ ಪ್ರಥಮ್ ಹೇಳಿದ್ದರು. ಈಗ ಅದರಂತೆಯೇ ಕುಟುಂಬದವರು ನೋಡಿ, ಮೆಚ್ಚಿದ ಹುಡುಗಿಯ ಜೊತೆ ಸಪ್ತಪದಿ ತುಳಿಯಲಿದ್ದಾರೆ.
ಇದನ್ನೂ ಓದಿ: ಡೇರ್ ಡೆವಿಲ್ ಮುಸ್ತಾಫಾ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದ ನಟ ಪ್ರಕಾಶ್ ರೈ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.