Dr Rajkumar And Vishnuvardhan: ಅನೇಕರು ರಾಜ್ - ವಿಷ್ಣು ಮಧ್ಯದ ಪೈಪೋಟಿ ಬಗ್ಗೆ ಮಾತನಾಡುತ್ತಾರೆ. ಹಿಂದಿನ ಕಾಲದ ಸಿನಿಮಾಗಳು ಹೆಚ್ಚಾಗಿ ಕಾದಂಬರಿ ಆಧಾರಿತವಾಗಿರುತ್ತಿದ್ದವು. ಕತೆ ಒಂದು ವಿಚಾರ, ಸಂದೇಶದ ಸುತ್ತ ಹೆಣೆಯಲಾಗುತ್ತಿತ್ತು. ಹೀಗೆ ಕಾದಂಬರಿಯೊಂದನ್ನು ಸಿನಿಮಾ ಮಾಡುವಾಗ ಒಂದೇ ಕತೆಗಾಗಿ ಆ ಸಿನಿಮಾದಲ್ಲಿ ನಾಯಕನಾಗಲು ರಾಜ್-ವಿಷ್ಣು ಸ್ಪರ್ಧೆಗಿಳಿದಿದ್ದರು ಎನ್ನಲಾಗಿದೆ. ಇಬ್ಬರ ಜಗಳದಲ್ಲಿ ಲಾಭ ಪಡೆದುಕೊಂಡಿದ್ದು ಮಾತ್ರ ಬೇರೆ ನಟ ಎನ್ನಲಾಗಿದೆ. ಅವರು ಬೇರಾರೂ ಅಲ್ಲ ರೆಬೆಲ್ ಸ್ಟಾರ್ ಅಂಬರೀಷ್ ಅವರಂತೆ.
ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಇಷ್ಟಪಟ್ಟು ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಕಾದಂಬರಿ ಆಧಾರಿತ ಚಿತ್ರ ಕೊನೆಗೆ ನಟ ಅಂಬರೀಷ್ ಅವರ ಪಾಲಾಯಿತಂತೆ ಎಂದು ಹೇಳಲಾಗುತ್ತದೆ. ಡಾ.ರಾಜ್‌ಕುಮಾರ್ ಸಿನಿಮಾದ ಕತೆ ಓದಿದ್ದರಂತೆ. ಅಲ್ಲದೇ ಪತ್ನಿ ಪಾರ್ವತಮ್ಮ ಅವರಿಗೂ ಓದುವಂತೆ ಹೇಳಿದ್ದರಂತೆ. ಅಷ್ಟೇ ಅಲ್ಲ, ಈ ಕಥೆಯ ಸಿನಿಮಾದಲ್ಲಿ ನಟಿಸುವ ಇಚ್ಛೆಯನ್ನು ಸಹ ರಾಜ್‌ಕುಮಾರ್ ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತದೆ. ಆದರೆ ಆ ಚಾನ್ಸ್ ಡಾ.ರಾಜ್‌ಗೆ ಸಿಗಲೇ ಇಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಡಾ.ರಾಜ್ 94ನೇ ಜನ್ಮದಿನ : ಅಣ್ಣಾವ್ರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳಿವು
ಇತ್ತ ವಿಷ್ಣುವರ್ಧನ್ ಕೂಡ ಈ ಸಿನಿಮಾದ ಸ್ಟೋರಿ ಇಷ್ಟಪಟ್ಟಿದ್ದರಂತೆ. ತಾವು ಈ ಚಿತ್ರದ ನಾಯಕನಾಗಬೇಕೆಂದು ಬಯಸಿದ್ದರಂತೆ. ಆದರೆ ಅವರಿಗೂ ಈ ಅವಕಾಶ ಕೈ ತಪ್ಪುತ್ತದೆ ಎಂದು ಹೇಳಲಾಗಿದೆ. ಆಗ ಸಿನಿರಂಗದಲ್ಲಿ ಸಕ್ಸಸ್ ಎದುರು ನೋಡುತ್ತಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಈ ಸಿನಿಮಾದಲ್ಲಿ ನಾಯಕನಾಗುವ ಚಾನ್ಸ್ ಸಿಕ್ಕಿದ್ದಂತೆ ಎನ್ನಲಾಗುತ್ತದೆ.
ಆ ಸಿನಿಮಾ ʻಆಪರೇಷನ್ ಅಂತʼ. ನಟ ಅಂಬರೀಶ್ ನಟಿಸಿ ಚರಿತ್ರೆ ಸೃಷ್ಟಿಸಿ ಚಿತ್ರ ಇದು. ಸಿನಿಮಾದಲ್ಲಿ ಜೂಲಿ ಲಕ್ಷ್ಮಿ ಹಾಗೂ ಅಂಬರೀಶ್ ಪ್ರೇಮ ಕಥೆ ನೋಡುಗರ ಹೃದಯ ಗೆದ್ದಿದೆ.
ಇದನ್ನೂ ಓದಿ: ಕರುನಾಡ ಮುತ್ತುರತ್ನ ಡಾ. ರಾಜ್‌ಕುಮಾರ್ ಅದೊಂದೇ ಕಾರಣಕ್ಕೆ ರಾಜಕೀಯಕ್ಕೆ ಬರಲಿಲ್ಲವಂತೆ !
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.